ಮಹಾರಾಷ್ಟ್ರ: 12 ಅಕ್ರಮ ಬಾಂಗ್ಲಾ ಪ್ರಜೆಗಳ

ಸೆರೆಪಾಲ್ಘರ್ ,  ಡಿ 17:      ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಭಾರತದಲ್ಲಿ ನೆಲೆಸಿದ್ದ 12  ಬಾಂಗ್ಲಾ ಪ್ರಜೆಗಳನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ   ಅಧಿಕಾರಿಗಳು ಬಂಧಿಸಿದ್ದಾರೆ.ಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ಒಂಬತ್ತು ಮಹಿಳೆಯರು ಸೇರಿದಂತೆ ಒಟ್ಟು ಹನ್ನೆರಡು ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆ. ಉಗ್ರ ನಿಗ್ರಹ ದಳದ  ಅಧಿಕಾರಿ ಮಾನ್ ಸಿಂಗ್ ಪಾಟೀಲ್ ಮತ್ತು ತಂಡ ಖಚಿತ ಮಾಹಿತಿಯ ಮೇರೆಗೆ ಪಾಲ್ಘಾರ್ ನ ಬೋಯ್ಸರ್ ಪ್ರದೇಶದಲ್ಲಿ ದಾಳಿ ನಡೆಸಿ   ಬಂಧಿಸುವಲ್ಲಿ ಯಶಸ್ವಿಯಾಗಿದೆ.  ಬಂಧಿತರ ಬಳಿ ಯಾವುದೇ ದಾಖಲೆಗಳಿರಲಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತಪಾಸಣೆ ನಡೆಯಲಿದೆ.