ಮಹಾರಾಣಾ ಪ್ರತಾಪ ಸಿಂಹ ಹುತಾತ್ಮ ದಿನಾಚರಣೆ

Maharana Pratap Singh Martyrdom Day

ಧಾರವಾಡ 29: ದಿ.29  ಬುಧವಾರ ದಂದು ಮಹಾರಾಣಾ ಪ್ರತಾಪ ಸಿಂಹ ಹುತಾತ್ಮ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಕ್ಲಬ್ ರೋಡ ಹತ್ತಿರ ಇರುವ ಪ್ರತಿಮೆಗೆ  ಮುಂಜಾನೆ 10-30 ಗಂಟೆಗೆ ಶ್ರೀ ರಾಮಪ್ಪ ಕೃಷ್ಣಪ್ಪ ಬಡಿಗೇರ, ಪೂಜ್ಯ ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇವರು ಮಾಲಾರೆ​‍್ಣ ಮಾಡಿದರು.  

ಸದರಿ ಮಾಲಾರೆ​‍್ಣ ಕಾರ್ಯಕ್ರಮದಲ್ಲಿ ದುರ್ಗಮ್ಮ ಶಶಿಕಾಂತ ಬಿಜವಾಡ ಉಪ ಮಹಾಪೌರರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಡಾಽಽ ರುದ್ರೇಶ ಘಾಳಿ, ಮಾನ್ಯ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಉಮೇಶ ಸವಣೂರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಶ್ರೀ ಮಹಮದ್ ಫೀರೋಜ, ಕಾರ್ಯನಿರ್ವಾಹಕ ಅಭಿಯಂತರರು ತೋಟಗಾರಿಕೆ ಮತ್ತು ಸಾರ್ವಜನಿಕರು ಹಾಗೂ ಅಧಿಕಾರಿ/ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.