ಶ್ರೀಮಠಕ್ಕೆ ಸ್ವಾಮಿಗಳಾದ ಮಹಾಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ದಾನ
ಮುದ್ದೇಬಿಹಾಳ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣ್ಣಕುಂಬಿ ಗ್ರಾಮದಲ್ಲಿ (ಮಲಪ್ರಭಾ ನದಿ ಮೂಲ) ಗೋವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಣ್ಣ ಮೇಟಿ ಅವರು ಸುಮಾರು ಎರಡು ಎಕರೆ ಜಾಗವನ್ನು
ಸಿದ್ದನಕೊಳ ಶ್ರೀಮಠಕ್ಕೆ ಸ್ವಾಮಿಗಳಾದ ಮಹಾಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ದಾನವಾಗಿ ನೀಡಿದರು. ಹಾಗೂ ಖಾನಾಪುರದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಖಾತೆ ಬದಲಾವಣೆಯ ಕಾರ್ಯವನ್ನು ಸಹ ಮುಗಿಸಿದರು. ಈ ವೇಳೆಯಲ್ಲಿ ವಿಜಯಪುರದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ , ವಿಜಯಪುರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಹಾಗೂ ಎನ್ ಎಸ್ ಯು ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಮುದ್ದೇಬಿಹಾಳ ಪುರಸಭೆ ಸದಸ್ಯರಾದ ರಿಯಾಜ್ ಅಹ್ಮದ್ ಢವಳಗಿ ಹಾಗೂ ಇತರರು ಉಪಸ್ಥಿತರಿದ್ದರು.