ಸಂಭ್ರಮದ ಜಟೋತ್ಸವದೊಂದಿಗೆ ಮಹಾಲಿಂಗೇಶ್ವರ ಜಾತ್ರೆಗೆ ಚಾಲನೆ
Mahalingeshwara fair kicks off with festive Jatotsava
ಸಂಭ್ರಮದ ಜಟೋತ್ಸವದೊಂದಿಗೆ ಮಹಾಲಿಂಗೇಶ್ವರ ಜಾತ್ರೆಗೆ ಚಾಲನೆ
ಮಹಾಲಿಂಗಪುರ 05: ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಹಾಲಿಂಗೇಶ್ವರ ಜಾತ್ರೆಯ ಮೊದಲ ದಿನ ಚನಗಿರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮದ್ಯಾಹ್ನ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಸಾರ್ವಜನಿಕ ಜಟೋತ್ಸವವು ಸಂಭ್ರಮದಿಂದ ಜರುಗುವುದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರಕಿತು.
ಶಿವಭಕ್ತೆ ಸಿದ್ದಾಯಿ ತಾಯಿಗೆ ಮಹಾಲಿಂಗೇಶ್ವರರು ತಮ್ಮ ಅಸ್ಥಿತ್ವದ ಕುರುಹಾಗಿ ನೀಡಿದ ಜಡೆಯ ಮುಂಗುರುಳು ಪ್ರತಿವರ್ಷ ಒಂದು ಕಡಲೆಯಷ್ಟು ಬೆಳೆಯುತ್ತೀವೆ. ಈ ಪವಿತ್ರ ಜಡೆಯನ್ನು ಶ್ರೀಮಠದ ಮಠಾಧಿಪತಿ ರಾಜೇಂದ್ರ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಮಹಾಲಿಂಗೇಶ್ವರ ಮಠದಿಂದ ಕರಡಿ ಮಜಲು, ಶಹನಾಯಿ ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವವು, ಮಹಾಲಿಂಗೇಶ್ವರ ಮಠದಿಂದ ನಡುಚೌಕಿ ಮಾರ್ಗವಾಗಿ ಚನಗಿರೇಶ್ವರ ದೇವಸ್ಥಾನದ ವರೆಗೆ ಸಾಗಿತು. ಮೆರವಣಿಗೆಯಲ್ಲಿ ಉಚ್ಚಾಯಿ, ನಂದಿಕೋಲದೊಂದಿಗೆ ಸಾವೀರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ವಾಡಿಕೆಯಂತೆ ಚನಗಿರೇಶ್ವರ ಪರ್ವತದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಜಟೋತ್ಸವವು ಜರುಗಿತು.
ವಿಜ್ಞಾನಕ್ಕೆ ಸವಾಲಾಗಿ ಬೆಳೆಯುತ್ತೀರುವ ಜಟಗಳ ಅಭಿಷೇಕವನ್ನು ಪ್ರತ್ಯಕ್ಷವಾಗಿ ಕಾಣಲು ಬೆಳಗಾಂವಿ, ಗೋಕಾಕ ಮುಧೋಳ, ಬಾಗಲಕೋಟ,ವಿಜಯಪುರ, ಗುಲ್ಬರ್ಗ, ,ಬೆಳಗಲಿ,ತೇರದಾಳ, ರಬಕವಿ-ಬನಹಟ್ಟಿ ಸಮೀರವಾಡಿ, ಸಂಗಾನಟ್ಟಿ, ಅಕ್ಕಿಮರಡಿ, ಕೆಸರಗೋಪ್ಪ, ನಂದಗಾಂವ,ಢವಳೇಶ್ವರ, ಮಾರಾಪುರ, ಚಿಮ್ಮಡ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಹಾಗೂ ವಿವಿದ ತಾಲೂಕು-ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಮಹಾಲಿಂಗೇಶ್ವರರ ಜಟದ ದರ್ಶನ ಪಡೆದು ಪುನಿತರಾದರು.
ಕಲಾ ತಂಡಗಳ ಪ್ರದರ್ಶನ: ಜಾತ್ರಾ ಮಹೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟದ ಪ್ರಾಯೋಜಿಸಿದ ಜಾನಪದ ಕಲಾ ತಂಡಗಳಾದ ಗೋವನಕೊಪ್ಪದ ಮಂಜುನಾಥ ಹರಿಜನ ಅವರ ಜಗ್ಗಲಗಿ, ರನ್ನಬೆಳಗಲಿಯ ನಿಂಗಪ್ಪ ಕುಂಬಾಳಿಯವರ ಡೊಳ್ಳು ಕುಣಿತ, ಸಂಗಾನಟ್ಟಿಯ ಯಮನಪ್ಪ ಗಾಡಿಕಾರ ಹಲಗಿ ಮಜಲು, ಮಲ್ಲಾಪೂರದ ಕಲ್ಲಪ್ಪ ಕುರಿಗೋಡ ಕಿಲು ಕುದರೆ ಕುಣಿತ, ಗೋವನಕೊಪ್ಪದ ಮಂಜುನಾಥ ದ್ಯಾವನ್ನವರ ಹೆಜ್ಜೆ ಮೇಳ, ಕಂಕಣವಾಡಿಯ ಮುರೇಪ್ಪ ಬೆಳಗಲಿ ಗೊಂಬೆ ಕುಣಿತ,ಬೀದರದ ಬಾರತಿ ರಾಠೋಡರ ಲಂಬಾಣಿ ನೃತ್ಯ.ಶಿರೋಳದ ಅಕ್ಷಯ ಬಡಿಗೇರರ ರುದ್ರ ತಾಂಡವ, ಸೋಮನಕೊಪ್ಪದ ಶಿವನಗೌಡ ಗೌಡರರ ಮಹಿಳಾ ಡೋಳ್ಳು ಕುಣಿತ, ಸಿದ್ದಾಪೂರದ ಸಂಗಪ್ಪ ಅಂಬಿಯವರ ವೀರಗಾಸೆ ಸೇರಿದಂತೆ ಹಲವಾರು ಕಲಾಮೇಳಗಳು ಈ ಜಾತ್ರೆಯಲ್ಲಿ ಭಾಗವಹಿಸಿದ ಕಲಾ ಪ್ರದರ್ಶನ ನೀಡುವರು.
ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಪಿ.ಕೆ.ಪಿ.ಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಗಣ್ಯರಾದ ಅರ್ಬನ ಬ್ಯಾಂಕ ಅಧ್ಯಕ್ಷ ಶೇಖರ ಅಂಗಡಿ,ಈರ್ಪ ದಿನ್ನಿಮನಿ,ಅಶೋಕ ಅಂಗಡಿ, ಮಹಾಲಿಂಗಪ್ಪಣ್ಣ ಕುಳ್ಳೋಳ್ಳಿ,ವಿರೇಶ ಆಸಂಗಿ,ಮಹಾಲಿಂಗಪ್ಪ ಕುಳ್ಳೋಳ್ಳಿ,ಮಹಾಲಿಂಗಪ್ಪ ತಟ್ಟಿಮನಿ, ರವಿಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಪ್ರಕಾಶ ತಟ್ಟಿಮನಿ, ಸುರೇಶ ಶೆಟ್ಟಿ, ಬಾಳು ಮಾಳವಾದೆ, ಮಲಕಾಜ ಕುಳ್ಳೋಳ್ಳಿ, ಕೃಷ್ಣಗೌಡ ಪಾಟೀಲ, ಬಸವರಾಜ ರಾಯರ, ಮಹಾಲಿಂಗ ಮಾಳಿ, ನಿಂಗಪ್ಪ ಬಾಳಿಕಾಯಿ, ಶಿವಲಿಂಗ ಟಿರ್ಕಿ, ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿ ಶ್ರೀಗುರುವಿನ ದರ್ಶನ ಪಡೆದರು.
ಜಾತ್ರಾ ಕಾರ್ಯಕ್ರಮ: ಸೆ.6 ರ ಸಂಜೆ ತುಂಬಿದ ತೇರು ಜರುಗುತ್ತದೆ.ಅಲಂಕೃತ ರಥವು ಸಂಜೆ 7 ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಸೆ. 7 ರ ಬೆಳಿಗ್ಗೆ 6 ಘಂ.ವರೆಗೆ ಜರುಗಿ, ಚನ್ನಗಿರೇಶ್ವರ ದೇವಸ್ಥಾನ ತಲುಪುತ್ತದೆ. ತುಂಬಿದ ತೇರಿನ ಮುನ್ನ ಸಂಜೆ 6 ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿನ ಪಾದಗಟ್ಟೆಯ ಹತ್ತಿರ ಹರಿವಾನ ಕಟ್ಟೆಯ ಲೂಟಿ ಕಾರ್ಯಕ್ರಮ ಜರುಗುವುದು. ನಂತರ ಸೆ.7 ರಂದು ಸಂಜೆ ಚನಗಿರೇಶ್ವರ ದೇವಸ್ಥಾನದಿಂದ ಹೊರಡುವ ಮರು ರಥೋತ್ಸವವು. ರಾತ್ರಿ ಇಡಿ ಸಾಗಿ ಸೋಮವಾರ ಸೆ.8 ರಂದು ನಸುಕಿನ ಜಾವ ಮಹಾಲಿಂಗೇಶ್ವರ ಮಠ ತಲುಪುವುದು. ತೇರಿನ ಮುಂದೆ ನಂದಿಕೋಲು,ಕಂಡ್ಯಾಳ ಬಾಸಿಂಗ, ಉತ್ಸವವು ತೇರಿನ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 