ಮಹಾಲಿಂಗಪೂರ: ರಂಗಕಲಾವಿದರಿಗೆ ರಾಜ್ಯ ಮಟ್ಟದ ಸೇವಾ ಪ್ರಶಸ್ತಿ

ಲೋಕದರ್ಶನ ವರದಿ

ಮಹಾಲಿಂಗಪೂರ 03: ಅಖಿಲ ಕನರ್ಾಟಕ ಹವ್ಯಾಸಿ, ವೃತ್ತಿ ರಂಗಭೂಮಿ, ಸರ್ವ ಜಾನಪದ ಕಲಾವಿದರ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರ ಇವರ ಸಹಯೋಗದಲ್ಲಿ ಸಂಘದ ಉದ್ಘಾಟನೆ ಹಾಗೂ ಕಲಾ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

          ಇದೆ ಸಂದರ್ಭದಲ್ಲಿ ಸಂಘದ ಸಹಯೋಗದೊಂದಿಗೆ ಹಿರಿಯ, ಕಿರಿಯ ಮತ್ತು ಸಮಾಜದ ಹಲವು ರಂಗಗಳಲ್ಲಿ ಸಾಧನೆ ಮಾಡಿದ ಮಹನಿಯರಿಗೆ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ  ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ಅಲ್ಲಪ್ಪ ಗುರುಪಾದಪ್ಪ ಅಂಗಡಿಯವರಿಗೆ ಸಮಾಜ ಸೇವಾ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಲಾಯಿತು. ಇದೆ ಸಮಯದಲ್ಲಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳು  ಗೌರವ ಸನ್ಮಾನ ನೀಡಿದರು. 

ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ 32 ವರ್ಷ ಗಳಿಂದ ನಿರಂತರ ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ. ಗ್ರಾಮದ ರೈತ,ಬಡ ಕೂಲಿ ಕಾಮರ್ಿಕರನ್ನು ಹೈನುಗಾರಿಕೆಯ ತರಬೇತಿ  ಕಾಯರ್ಾಗಾರಕ್ಕೆ ಬೆಂಗಳೂರು, ಧಾರವಾಡ, ಬೆಳಗಾವಿಯಂತಹ ನಗರಗಳಿಗೆ ಕಳುಹಿಸಿ ಉಪಯುಕ್ತ ಮಾಹಿತಿ ಪಡೆಯುವಂತೆ ಮಾಡುತ್ತಾರೆ. 

        ತರಬೇತು ಹೊಂದಿದ ಇವರಿಗೆ ಸಹಕಾರಿ ಸಂಘದ ವತಿಯಿಂದ ಸರಕಾರ ನೀಡುವ ಹಸುಗಳನ್ನು  ಜೀವನೋಪಾಯಕ್ಕಾಗಿ ನೀಡಿ ನೆರವಾಗುತ್ತಾರೆ. ಇದರಿಂದ ಇವರಲ್ಲಿರುವ  ರೈತರ ಹಾಗೂ ಬಡವರ ಬಗ್ಗೆ ಹೆಚ್ಚಿನ ಕಾಳಜಿ ಎದ್ದು ಕಾಣುತ್ತದೆ.ಎಲ್ಲ ಸಮಾಜಗಳ ವರ್ಗದ ಜನರ ಜೊತೆ ಒಳ್ಳೆಯ ಒಡನಾಟವಿದೆ. ಈ ಪ್ರಶಸ್ತಿ ನೀಡಿದ್ದು ಸಮಯೋಚಿತವಾಗಿದೆ.ಎಂದು ಇವರನ್ನು ಅಭಿನಂದಿಸುತ್ತ ಸಂಘದ ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರುಗಳು, ತಿಳಿಸಿದ್ದಾರೆ.