ಲೋಕದರ್ಶನ ವರದಿ
ಮಹಾಲಿಂಗಪೂರ 22: ನಗರದ ಬಸ್ಸ ನಿಲ್ದಾಣವನ್ನು ಐದು ದಶಕಗಳ ಹಿಂದೆ ಅಂದಿನ ಶಾಸಕರಾದ ಪಿ.ಎಮ್. ನಾಡಗೌಡರು ಉದ್ಘಾಟಿಸಿ ಲೋಕಾರ್ಪಣೆ ಮಾಡಿದ್ದರು.
ಬಿಸಿಲು,ಮಳೆ, ಗಾಳಿ, ಸಿಡಿಲಿಗೆ ತನ್ನ ಮೈ ಒಡ್ಡಿ ಪ್ರಯಾಣಿಕರ ರಕ್ಷಣೆ ಮಾಡುತ್ತಿದ್ದ ಬಸ್ಸ ನಿಲ್ದಾಣ ಕಟ್ಟಡ ಈ ಹೊತ್ತು ಶಿಥಿಲಗೊಂಡು ಧಾರಾಶಾಹಿಯಾಗುತ್ತಿದೆ.
ಕಾಲಾಂತರದಲ್ಲಿ ಸಿಮೇಂಟ್ ಹಾಗೂ ಲೋಹ ತನ್ನ ಸತ್ವವನ್ನು ಕಳೆದುಕ್ಕೊಂಡು ಮೇಲ್ಛಾವಣಿ ಹಾಗೂ ಪಿಲ್ಲರಗಳಲ್ಲಿಯ ಲೋಹದ ಸಲಾಖೆಗಳು ಅಸ್ಥಿ ಪಂಜರದಂತೆ ಕಾಣತೊಡಗಿದ್ದವು. ಒಟ್ಟಾರೆ ಕಟ್ಟಡವು ಅಪಾಯಕ್ಕೆ ಆಹ್ವಾನ ನೀಡುವಂತಾಗಿತ್ತು.ಇದನ್ನೆಲ್ಲ ಗಮನಿಸಿದ ಲೋಕದರ್ಶನ ದಿನ ಪತ್ರಿಕೆ ಜನವರಿ 30 ರಂದು "ಬೀಳುವ ಹಂತದಲ್ಲಿ ಅರ್ಧ ಶತಮಾನದ ಕೇಂದ್ರ ಬಸ್ಸ ನಿಲ್ದಾಣ" ಎಂಬ ಶೀರ್ಶಿಕೆ ಅಡಿಯಲ್ಲಿ ವಿವರವಾದ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಬಾಗಲಕೋಟ, ಬೆಳಗಾವಿ ಸಾರಿಗೆ ಅಧಿಕಾರಿಗಳು, ಅಭಿಯಂತರರು ಕೂಲಂಕುಷ ವಿವರ ಪಡೆದುಕ್ಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದರು.
ಶಿಥಿಲ ಅವಶೇಷಗಳನ್ನು ಒಡೆದು ಹಾಕಿ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಭವಿಷ್ಯದಲ್ಲಿ ಸಂಭವಿಸಬೇಕಾಗಿದ್ದ ಅನಾಹುತ ನೆನೆದು ನಿಟ್ಟುಸಿರು ಹಾಕುತಿದ್ದ ಜನತೆ ಸಾರಿಗೆ ಇಲಾಖೆಯ ಕ್ರಮವನ್ನು ಶ್ಲ್ಯಾಘಿಸಿದ್ದಾರೆ.
ಕ್ರಷಿ, ನೇಕಾರಿಕೆ, ಹೈನು, ಬೆಲ್ಲ ತಯಾರಿಕೆಯಲ್ಲಿ ರಾಜ್ಯದಲ್ಲಿಯೆ ಪ್ರಸಿದ್ಧಿಯನ್ನು ಪಡೆದಿದೆ. ಇನ್ನೂ ಅನೇಕ ಉದ್ಯಮಗಳು ಹಲವಾರು ರಂಗಗಳಲ್ಲಿ ಆಮದು ರಫ್ತು ಮಾಡುತ್ತಿವೆ. ನೆರೆಯ ಐವತ್ತು ಹಳ್ಳಿಗಳ ಜನರಿಗೆ ಅನೇಕ ರೀತಿಯಲ್ಲಿ ಅಂದರೆ ಅಧ್ಯಾತ್ಮ, ರಾಜಕೀಯ, ಶೈಕ್ಷಣಿಕ, ಕಲೆ, ಕ್ರಿಡೆ, ಹಣಕಾಸು ಲೇವಾದೇವಿ, ವಿವಿಧ ಕಾಯಿಲೆಗಳ ಹೆಸರಾಂತ ಆಸ್ಪತ್ರೆಗಳು ನಗರದ ಮೆರಗನ್ನು ಹೆಚ್ಚಿಸಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ಹಲವಾರು ವರ್ಷಗಳ ಹಿಂದೆ ನವಿಕರಣ ಕಾರ್ಯವಾಗಬೇಕಿದ್ದ ನಿಲ್ದಾಣ ಲೇಟ್ ಆದ್ರೂ ಪರವಾಗಿಲ್ಲ ಲೇಟಸ್ಟಾಗಿ ಕೆಲಸ ಆರಂಭಿಸಿರುವುದಕ್ಕೆ ಜನತೆ ಹರ್ಷ ವ್ಯಕ್ತಪಡಿಸಿ ಹೊಸ ವಿನ್ಯಾಸದ ನಿಲ್ದಾಣ ಬೇಗ ನಗರಕ್ಕೆ ಸಮರ್ಥಗೊಳ್ಳಲಿ ಎನ್ನುತ್ತಿದ್ದಾರೆ.
ಈ ಸಂಧರ್ಭದಲ್ಲಿ ಲೋಕದರ್ಶನ ಪತ್ರಿಕೆಯ ಸಾಮಾಜಿಕ ಕಳಕಳಿಯನ್ನೂ ಸಹ ಜನತೆ ಈ ಸಂಧರ್ಭದಲ್ಲಿ ಶ್ಲ್ಯಾಘಿಸಿದ್ದಾರೆ.
-ಅಶೋಕ್ ಕಡಪಟ್ಟಿ ಪತ್ರಿಕಾ ಮಾರಾಟಗಾರರು ಮಹಾಲಿಂಗಪೂರ
ನಾವು ಈ ನಿಲ್ದಾಣದಲ್ಲಿ ನಿರಂತರ 40 ವರ್ಷಗಳ ಕಾಲ ಪತ್ರಿಕಾ ಸೇವೆ ಮಾಡುತ್ತ ಬಂದಿದ್ದೇವೆ.ಕಟ್ಟಡ ಪೂರ್ಣ ಪ್ರಮಾಣದಲ್ಲಿ ಡ್ಯಾಮೇಜ್ ಆಗಿದನ್ನು ನೋಡಿದರೆ ಯಾವಾಗ ಅನಾಹುತ ಸಂಭವಿಸುತ್ತೋ ಎಂಬ ಭಯ ನಮಗೂ ಕಾಡುತಿತ್ತು..ಹೊಸ ಕಟ್ಟಡ ಮಂಜೂರಾಗಿ ಕೆಲಸ ಆರಂಭಿಸಿರುವ ಶ್ರೇಯಸ್ಸು ಅಧಿಕಾರಿಗಳ ಕಣ್ಣು ತೆರೆಸಿದ ಲೋಕದರ್ಶನ ದಿನಪತ್ರಿಕೆಗೆ ಸಲ್ಲಬೇಕು.
-ಶಂಕರ ಕಡ್ಲಿಮಟ್ಟಿ ಬಾಗಲಕೋಟ
ಮಹಾಲಿಂಗಪೂರ ನಗರದ ಬಸ್ಸ ನಿಲ್ದಾಣವು ಒಂದು ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಕಾಮಗಾರಿಯಾಗಿದೆ. ಒಂದು ವರ್ಷದ ಅವಧಿಯೊಳಗೆ ಕೆಲಸವನ್ನು ಪೂರ್ಣಗೊಳಿಸಲಾಗುವುದು.