ಲೋಕದರ್ಶನವರದಿ
ಮಹಾಲಿಂಗಪೂರ : ಭಾರತ ಸುಮಾರು 150 ಕೋಟಿ ಜನಸಂಖ್ಯೆ ಹೊಂದಿರುವ ದೇಶ..2008-09 ರಲ್ಲಿ ಅಂದಿನ ಕೇಂದ್ರದ ಯು.ಪಿ.ಎ ಸರಕಾರ ಆಧಾರ ಯೋಜನೆಯನ್ನು ಜಾರಿಗೆ ತಂದಿತು.ನಂತರದ ದಿನಗಳಲ್ಲಿ ಪ್ರತಿಯೊಂದು ಸರಕಾರಿ ಯೋಜನೆಗಳಿಗೆ ಆಧಾರವೆ ಸಿಂಧು ಎಂದು ಎನ್.ಡಿ.ಎ ಸರಕಾರ ಘೋಷಿಸಿತು.ಕಾರಣ ದೇಶದ ಪ್ರಜೆಗಳು ಆಧಾರ ಕಾಡರ್್ ವನ್ನು ಕಡ್ಡಾಯವಾಗಿ ಮಾಡಿಸಿಕ್ಕೊಳ್ಳಬೇಕಾಯಿತು.
ಆಧಾರ ಯೋಜನೆಯ ಕಾರ್ಡಗಳ ಮುದ್ರಣದಲ್ಲಿ ಲೋಪ ದೋಷಗಳ ತಿದ್ದುಪಡಿ ಹಾಗೂ ಹೊಸ ಆಧಾರ ಕಾಡರ್್ ಸಲುವಾಗಿ ತಿಂಗಳಾನುಗಟ್ಟಲೆ ಅಲೆದು ಸುಸ್ತಾಗಿ ಹೋಗಿದ್ದ ಜನತೆ ಸ್ಥಳೀಯ ಅಂಚೆ ಕಚೇರಿಯಲ್ಲಿ ಸೋಮವಾರ ಕಚೇರಿ ಆರಂಭವಾಗುತ್ತಲೆ ಆಧಾರಕ್ಕಾಗಿ ಸರದಿಯಲ್ಲಿ ನಿಂತ ಜನರಿಗೆ ಅಂಚೆ ಮುಖ್ಯಸ್ಥ ನೀಡಿದ ಸಿಬ್ಬಂದಿ ಕೊರತೆ ವಿಚಾರ ಬೇಸರ ತರಿಸಿತು.ಆಗ ಆಕ್ರೋಶಗೊಂಡು ಮುಖ್ಯಸ್ಥರನ್ನು ತರಾಟೆಗೆ ತೆಗೆದುಕ್ಕೊಳ್ಳುವದರೊಂದಿಗೆ ದಿಢೀರ್ ಮುಷ್ಕರಕ್ಕೆ ಅಣಿಯಾದರು. ಪಟ್ಟು ಬಿಡದೆ ಮೇಲಾಧಿಕಾರಿಯ ಮೊಬೈಲ್ ಸಂಖ್ಯೆಯನ್ನು ಪಡೆದು ಲಿಂಗ ಬೇದವಿಲ್ಲದೆ ಎಲ್ಲ ವಯಸ್ಸಿನ ನಾಗರೀಕರು ತೊಂದರೆ ಅನುಭವಿಸುತ್ತಿದ್ದಾರೆ. ಬೇಸತ್ತು ಕೆಲವರು ಆಧಾರ ಜೋಡನೆಯನ್ನೂ ಮಾಡಿಲ್ಲ.ಈ ಕಾರಣಕ್ಕೆ ರೇಷನ್,ಪಿಂಚನಿ,ವಿದ್ಯಾಥರ್ಿ ವೇತನ,ಆರೋಗ್ಯ ಕಾಡರ್್ ಇನ್ನೂ ಅನೇಕ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆ ಪಡೆಯುವಲ್ಲಿ ಫಲಾನುಭವಿಗಳು ವಿಫಲರಾಗಿದ್ದಾರೆ ಎಂದು ಕಾನಗೌಡರಿಗೆ ಜನರು ಅರಿವು ಮೂಡಿಸಿದರು.
ಕೆಲಸದ ಒತ್ತಡದಿಂದ ಕಚೇರಿ ಅಧಿಕಾರಿ ಯಾವ ಕೆಲಸ ಮಾಡಬೇಕು. ಎನ್ನುವ ಗೊಂದಲದಲ್ಲಿದ್ದಾರೆ. ಒಂದು ಕಡೆ ಕೌಂಟರ್, ಇನ್ನೋಂದು ಕಡೆ ಆಧಾರ್ ಹೀಗೆ ಮುಂದುವರೆದ ಗೊಂದಲದಿಂದ ಭವಿಷ್ಯದ ಆಧಾರ ಸಾರ್ವಜನಿಕರ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಜನತೆ ದೂರುತ್ತಿದ್ದಾರೆ.
ಈ ಮುಂಚೆ ನಗರದಲ್ಲಿ ಎರಡು ಆಧಾರ ಕೇಂದ್ರಗಳು ಟೌನ್ ಹಾಗೂ ಕೇಂದ್ರ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿದವು. ಈಗ ಪಟ್ಟಣದ ಆಧಾರ ಕೇಂದ್ರವನ್ನು ಮುಚ್ಚಿ ಇದೆ ಕೇಂದ್ರದಲ್ಲಿಯೆ ವಿಲಿನಗೊಳಿಸಿದ್ದಾರೆ.ಇದರಿಂದ ಹಳ್ಳಿಗಳ ಹಾಗೂ ಪಟ್ಟಣದ 2ಲಕ್ಷ ಜನತೆಗೆ ಒಂದೆ ಆಧಾರ ಕೇಂದ್ರವಾಗಿದೆ.ಐದು ಜನ ಸಿಬ್ಬಂದಿ ಬದಲಿಗೆ ಮೂವರು ಮಾತ್ರ ಕಚೇರಿ ಸಮಸ್ಯೆಗಳನ್ನು ಆಲಿಸಬೇಕಾಗಿ ಬಂದಿದೆ.ಈಗಾಗಲೇ 1500 ಜನರ ಆಧಾರ ತಿದ್ದುಪಡಿ ಕೆಲಸವು ಒತ್ತಡದಿಂದ ಪೆಂಡಿಂಗ ಇದೆ ಎಂದು ನಗರ ಅಂಚೆಯ ಅಧಿಕಾರಿ ಷಣ್ಮುಖ ಶಿರೋಳ್ ತಮ್ಮ ಅಳಲನ್ನು ತೋಡಿಕ್ಕೊಂಡರು.
ಆರು ತಿಂಗಳುಗಳಿಂದ ಇದೆ ಸಮಸ್ಯೆ ಮುಂದುವರೆದಿದೆ. ಕಟ್ಟಕಡೆಯ ವ್ಯಕ್ತಿಯವರೆಗೆ ಸರಕಾರಿ ಯೋಜನೆ ತಲುಪಿಸಿ ಆಡಳಿತದಲ್ಲಿ ಪಾರದರ್ಶಕತೆ ಮೂಡಿ ಬರಲಿ ಎನ್ನುವ ಸರಕಾರಗಳ ಕಾಳಜಿಯನ್ನು ಅಂಚೆ ಇಲಾಖೆ ಗಾಳಿಗೆ ತೂರಿ ಮನ ಬಂದಂತೆ ವತರ್ಿಸುತ್ತಿದೆ.
ಇದಕ್ಕೆ ಕಾರಣ ಯಾರು? ಸಿಬ್ಬಂದಿ ಕೊರತೆಯಾಗಿದ್ದರೆ ಜನಸಂಖ್ಯೆ ಅನಗುಣವಾಗಿ ಹೆಚ್ಚಿನ ಕೌಂಟರಗಳನ್ನು ತೆರೆಯುವ ಮುಖಾಂತರ ಆಗುತ್ತಿರುವ ತೊಂದರೆಯನ್ನು ನೀಗಿಸಬೇಕು,ಇಲ್ಲವಾದರೆ ಉಗ್ರ ಹೋರಾಟವನ್ನು ಎದುರಿಸಿ ಎಂದು ನೊಂದವರ ಪರವಾಗಿ ನಗರದ ಜಿ.ವಿ.ಕ.ಕಾ.ಸಂಘ ಅಧ್ಯಕ್ಷ ಅಜರ್ುನ ಬಂಡಿವಡ್ಡರ್ ಹೇಳಿದರು.