ಪ್ರಸಕ್ತ ಸಾಲಿನಲ್ಲಿ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಗೆ 51 ಲಕ್ಷಗಳ ನಿವ್ವಳ ಲಾಭ.

ಪ್ರಸಕ್ತ ಸಾಲಿನಲ್ಲಿ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಗೆ 51 ಲಕ್ಷಗಳ ನಿವ್ವಳ ಲಾಭ. Mahalingapur Urban Bank has a net profit of Rs 51 lakhs in the current year.

ಪ್ರಸಕ್ತ ಸಾಲಿನಲ್ಲಿ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಗೆ 51 ಲಕ್ಷಗಳ ನಿವ್ವಳ ಲಾಭ. 

ಮಹಾಲಿಂಗಪುರ, 15 ; ಪಟ್ಟಣದ ದಿ.ಮಹಾಲಿಂಗಪುರ ಅರ್ಬನ್ ಕೋ- ಆಪ್ ಬ್ಯಾಂಕ್ ಲಿ. ಪ್ರಸಕ್ತ ಸಾಲಿನಲ್ಲಿ ಅಂದಾಜು 20 ಕೋಟಿ ದುಡಿಯುವ ಬಂಡವಾಳದಲ್ಲಿ 51,38,151 ರೂಗಳ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು. 

ಭಾನುವಾರ ಸಂಜೆ ಸ್ಥಳೀಯ ಟೊನಪಿನಾಥ ಸಾಂಸ್ಕೃತಿಕ ಭವನದಲ್ಲಿ, 2024-25 ನೇ ಸಾಲಿನ 47 ನೇಯ ವಾರ್ಷಿಕ ಸರ್ವ ಸಾಧಾರಣ ಸಭೆಯ ವರದಿ ವಾಚನ ದೊಂದಿಗೆ ಅಡಾವೆ ಪತ್ರಿಕೆ ವಿತರಣಾ ಸಮಾರಂಭ ನಡೆಯಿತು. ಈ ಸಮಯದಲ್ಲಿ ಸಭೆಯನ್ನುದ್ದೇಶಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2026.52 ಲಕ್ಷಗಳ ಠೇವಣಿ ಬಂಡವಾಳದಲ್ಲಿ 1139.51 ಲಕ್ಷ ಠೇವಣಿ, 725.21 ಲಕ್ಷಗಳ ಸಾಲ ಮತ್ತು ಮುಂಗಡಗಳು ಸೇರಿವೆ.ಒಟ್ಟು ಶೇರುದಾರರ ಸಂಖ್ಯೆ 4,985 ಇದೆ. 

20 ತಿಂಗಳ ಅವಧಿಯಲ್ಲಿ ದ್ವಿತೀಯ ಉತ್ತಮ ಲೇವಾದೇವಿ ಬ್ಯಾಂಕ್ ಎಂದು ಜಿಲ್ಲಾ ಪ್ರಶಸ್ತಿಗೆ ಭಾಜನವಾಗಿರುವುದು ನನಗೆ ಸಮಾಧಾನ ತಂದಿರುವ ವಿಷಯ. ಮುಂದಿನ ಅವಧಿಗೆ ಯಾರೆ ಅಧ್ಯಕ್ಷರಾಗಲಿ ಬ್ಯಾಂಕ್ ಅಭಿವೃದ್ಧಿ ವಿಷಯದಲ್ಲಿ ಅವರಿಗೂ ಸಹಕಾರ ನೀಡುವುದು ನನ್ನ ಕರ್ತವ್ಯ ಆ ಕೆಲಸ ಮಾಡುತ್ತೇನೆ ಎಂದರು. 

ಪ್ರಸಕ್ತ ನಿವ್ವಳ ಲಾಭದ ವಿಂಗಡಣೆ : ಕಾಯ್ದಿಟ್ಟ, ಸಹಕಾರ ಶಿಕ್ಷಣ, ಕಟ್ಟಡ, ಅನುತ್ಪಾದಕ ಸಾಲಗಳ, ಸದಸ್ಯರ ಕ್ಷೇಮ, ಧರ್ಮದ, ಮಹೋತ್ಸವ, ಲಾಭಾಂಶ ಸಮೀಕರಣ, ಸಾಮಾಜಿಕ ಕಲ್ಯಾಣ, ಲಾಭಾಂಶ, ನೌಕರರ ಕ್ಷೇಮಾಭಿವೃದ್ಧಿ, ಶೈಕ್ಷಣಿಕ ಅಧ್ಯಯನ, ಸದಸ್ಯರ ಮರಣೋತ್ತರ, ಮಹಾ ಮಂಡಳ ಬೆಂಗಳೂರು ವಂತಿಗೆ, ಗುಂತಾವಣೆಗಳ ಸವಕಳಿ ಮತ್ತು ಏರಿಳಿತ ಹೀಗೆ ವಿವಿಧ ನಿಧಿಗಳಲ್ಲಿ ನಿವ್ವಳ ಲಾಭವನ್ನು ವಿಂಗಡಣೆ ಮಾಡಲಿಕ್ಕೆ, ಸಭೆಯ ಅನುಮತಿ ಕೋರಿ ಅನುಮೋದನೆ ಪಡೆದರು. 

ಸಂಧರ್ಭದಲ್ಲಿ ನಿರ್ದೇಶಕ ಮಹಾದೇವ ಮಾರಾಪುರ ಪ್ರಾಸ್ತಾವಿಕ ಮತ್ತು ನಿರ್ದೇಶಕ ಮಹಾಲಿಂಗಪ್ಪ ಕೋಳಿಗುಡ್ಡ, ಹಿರಿಯರಾದ ಧರೆಪ್ಪ ಸಾಂಗ್ಲೀಕರ ಶೇರು ಬಂಡವಾಳ ಕ್ರೋಡೀಕರಣ ಕುರಿತು ಮಾತನಾಡಿದರು.ಶೇರುದಾರರಾದ ಮಹಾದೇವ ಕೋಳಿಗುಡ್ಡ, ಬಸವರಾಜ ಶಿರೋಳ ಬ್ಯಾಂಕ್ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು. 

ಉತ್ತಮ ಗ್ರಾಹಕ ಗುರುಲಿಂಗಪ್ಪ ಹುಬ್ಬಳ್ಳಿ, ಅತಿ ಹೆಚ್ಚು ಠೇವು ಬಸವರಾಜ ಕುರಿ, ಉತ್ತಮ ಎಸ್‌. ಬಿ ವಿನಯಕುಮಾರ್ ಚಮಕೇರಿ, ಅತಿ ಹೆಚ್ಚು ಪಿಗ್ಮಿ ಶಿವಲಿಂಗಪ್ಪ ಕೊಡಗನೂರ ಮತ್ತು ಉತ್ತಮ ಲೇವಾದೇವಿ ಸುರೇಶ್ ಕಲಾಲ ಮತ್ತು ಮೇಲ್ದರ್ಜೆಯಲ್ಲಿ ಉತ್ತಿರ್ಣರಾದ ಸಾಹಿತ್ಯಾ ಟಿರಕಿ, ಭಾಗ್ಯಶ್ರೀ ಬಳವಾಡ, ನಂದಿನಿ ಭೂಸನ್ನವರ, ಲಕ್ಷ್ಮಿ ಪಾಲಭಾವಿ ಮತ್ತು ಮಹಾನಂದಾ ಪವಾರ ಇವರುಗಳು ಬ್ಯಾಂಕ್ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿದರು. 

  ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಇನ್ನೂಳಿದ ಉಪಾಧ್ಯಕ್ಷ ಗಿರಮಲ್ಲಪ್ಪ ಕಬಾಡಿ, ನಿರ್ದೇಶಕರಾದ ಅಶೋಕ ಜ ಅಂಗಡಿ, ಶ್ರೀಶೈಲ ಹಿಪ್ಪರಗಿ, ವೀರಪಾಕ್ಷಯ್ಯ ಪಂಚಕಟ್ಟಿಮಠ, ಹೊಳೆಪ್ಪ ಬಾಡಗಿ,ಅಕ್ಷತಾ ಹಲಗತ್ತಿ, ಲಕ್ಷ್ಮಿ ದಿನ್ನಿಮನಿ,ಕಾನೂನು ಸಲಹೆಗಾರರಾದ ಮಹೇಶ ಬಡಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು.ಶೇರುದಾರು ಮತ್ತು ಗಣ್ಯರು ಸಭೆಗೆ ಸಾಕ್ಷಿಕರಿಸಿದರು. 

 ಕಾರ್ಯಕ್ರಮವನ್ನು ನಿರ್ದೇಶಕ ಫಕ್ರುದ್ದೀನ್ ಕುಂಟೋಜಿ ಸ್ವಾಗತಿಸಿ, ಪತ್ರಕರ್ತರಾದ ನಾರನಗೌಡ ಉತ್ತಂಗಿ ಮತ್ತು ಲಕ್ಷ್ಮಣ ಕಿಶೋರಿ ನಿರೂಪಿಸಿ, ನಿರ್ದೇಶಕ ಗುರುಪಾದ ಅಂಬಿ ವಂದಿಸಿದರು..