ಮಹಾಲಿಂಗಪುರ ಪುರಸಭೆ ಸಾಮಾನ್ಯ ಸಭೆ
Mahalingapur Municipality General Meeting
ಮಹಾಲಿಂಗಪುರ 18: ಸೋಮವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಪುರಸಭೆ ವ್ಯವಸ್ಥಾಪಕ ಎಸ್. ಎನ್. ಪಾಟೀಲ್ ಮೇ, ಜೂನ್ ಮತ್ತು ಜುಲೈ ತಿಂಗಳ ಜಮಾ ಖರ್ಚು ಓದಿ ಹೇಳಿದರೆ, ಅಧಿಕಾರಿಗಳಾದ ಎಂ. ಎನ್.ಮುಗಳಖೋಡ, ಪಿ ವಾಯ.ಸೊನ್ನದ ಚರ್ಚೆಯ ವಿಷಯಗಳಿಗೆ ಉತ್ತರ ನೀಡಿ ಅನುಮೋದನೆ ಪಡೆದರು.
ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ, ಅಷ್ಟಗಿ ಟಾಕೀಸ್‌ದಿಂದ ಬುದ್ನಿ (ಪಿಡಿ)ವರೆಗಿನ ಡಿವಾಯಡರ್‌ಗಳಿಗೆ ದಶಕದ ಹಿಂದೆ ಸುಮಾರು 15 ಲೈಟ್ ಕಂಬಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ ವಾಹನಗಳಿಂದ ಕೆಲವು ಜಖಂಗೊಂಡಿದ್ದವು. ಇವುಗಳ ಜೊತೆಯಲ್ಲಿಯೇ ಉಳಿದವುಗಳನ್ನು ಸಹ ಜಮಾ ತೆಗೆದುಕ್ಕೊಂಡು ಪುರಸಭೆ ಸ್ಕ್ರ್ಯಾಪ್ ಸ್ಟೋರ್ ನಲ್ಲಿರಿಸಲಾಗಿತ್ತು. ನಂತರದ ದಿನಗಳಲ್ಲಿ ಅವುಗಳು ಅಲ್ಲಿಂದಲೂ ಕಣ್ಮರೆಯಾಗಿವೆ. ಇವುಗಳ ಕುರಿತು ಅಧ್ಯಕ್ಷರು ತನಿಖೆ ಮಾಡಿಸಿ, ಈ ಕೃತ್ಯದಲ್ಲಿ ಭಾಗಿಯಾಗಿರುವವರಿಂದ ಪುರಸಭೆಗೆ ಆಗುವ 12 ಲಕ್ಷಗಳ ಹಾನಿಯನ್ನು ಭರಣಾ ಮಾಡಿಸಿಕೊಳ್ಳಬೇಕು ಮತ್ತು ಪುರಸಭೆ ಕಾರ್ಮಿಕರು ಹೊರಗಿನ ವೇತನಕ್ಕೆ ಕಾರ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರಿಂದ ತಿಳಿದು ಬಂದಿದ್ದು, ಇದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್‌ರನ್ನು ಆಗ್ರಹಿಸಿದರು.
ಪುರಸಭೆ ಸದಸ್ಯರಾದ ಬಸವರಾಜ ಯರಗಟ್ಟಿ, ರವಿ ಜವಳಗಿ, ಬಸವರಾಜ ಚಮಕೇರಿ, ಮುಸ್ತಾಕ್ ಚಿಕ್ಕೋಡಿ, ವಿನೋದ್ ಸಿಂಪಿ ಮತ್ತು ಸವಿತಾ ಹುರಕಡ್ಲಿ ಇವರು, ಜಿಲ್ಲೆಯಲ್ಲಿಯೇ ಪಟ್ಟಣದ ನೆನೆಗುದಿಗೆ ಬಿದ್ದಿರುವ ನಗರೋತ್ಥಾನದ ಟ್ರೇಜರಿ, ಯಂತ್ರ ಮತ್ತು ಇನ್ನಿತರ ವಸ್ತುಗಳನ್ನು ಬೇಗ ವಿಲೇವಾರಿ ಮಾಡುವ, ವಾರ್ಡ್ ರಸ್ತೆಗಳಿಗೆ ಗರಸ ಹಾಕುವ, ಹಿಂದೂ ರುದ್ರ ಭೂಮಿ ಸ್ವಚ್ಛತೆ, ಶ್ರೀಶೈಲ ಮಲ್ಲಿಕಾರ್ಜುನ (ಮಹಾಲಿಂಗೇಶ್ವರ) ಕಂಬಿ ಹಾಯ್ದು ಹೋಗುವ ರಸ್ತೆಗೆ ಫಿವರ್ ಬ್ಲಾಕ್ ಹಾಕುವ ಮತ್ತು ತಡೆಗೋಡೆ ನಿರ್ಮಿಸುವ ಕುರಿತು ಅಧ್ಯಕ್ಷರನ್ನು ಒತ್ತಾಯಿಸಿದರು.
ಮುಖ್ಯಾಧಿಕಾರಿ ನಾಮದೇವ ಲಮಾಣಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿ, ಅಧ್ಯಕ್ಷರ ಸಮ್ಮತಿಯಂತೆ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು. ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷಿಣಿ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ರಜಾಕ್ ಬಾಗವಾನ ಉಪಸ್ಥಿತರಿದ್ದರು.
ಪುರಸಭೆ ಸದಸ್ಯರಾದ ಸಜನಸಾಬ ಪೆಂಡಾರಿ, ರಾಜು ಗೌಡಪ್ಪಗೊಳ, ಬಸವರಾಜ ಬುರುಡ, ಸ್ನೇಹಲ್ ಅಂಗಡಿ, ಚಾಂದನಿ ನಾಯಕ,ಗೋದಾವರಿ ಬಾಟ,ಸುಜಾತಾ ಮಾಂಗ, ಸವಿತಾ ಕೋಳ್ಳಿಗುಡ್ಡ, ನಾಮ ನಿರ್ದೇಶಿತ ಸದಸ್ಯರಾದ ಆನಂದ ಬಂಡಿ, ಲಕ್ಕಪ್ಪ ಭಜಂತ್ರಿ, ಬಸವರಾಜ ಕರೆಹೊನ್ನ, ಅಪ್ಪಾಸಾಹೇಬ ನಾಲಬಂದ, ಪುರಸಭೆ ಅಧಿಕಾರಿಗಳಾದ ವಿಕ್ರಮ ಹವಾಲ್ದಾರ, ಮನೋಜ ಹಂಚಾಟೆ ಸಿಬ್ಬಂದಿಗಳಾದ ರಾಜೇಶ್ವರಿ ಸೋರಗಾಂವಿ, ಮಹಾಂತೇಶ ಬಂಡಿವಡ್ಡರ, ಸಿಪಾಯಿಗಳಾದ ರಾಮು ಮಾಂಗ, ಮಹಾಲಿಂಗ ಮಾಂಗ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 