ಮಹಾಲಿಂಗಪುರ05: ಕ್ರೀಡಾಪಟುಗಳು ಪೌಷ್ಠಿಕಾಂಶವಿರುವ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಕೆಟ್ಟ ಚಟಗಳಿಂದ ದೂರಾಗಬೇಕು ಎಂದು ಬೆಂಗಳೂರು ಕಾಂಗ್ರೆಸ್ ಕಿಸಾನ್ ಘಟಕ ರಾಜ್ಯ ಸಂಚಾಲಕ ಸಿದ್ದು ರಾ.ಕೊಣ್ಣೂರ ಹೇಳಿದರು.
ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎರಡನೇ ವಲಯದ ಪುರುಷರ ವ್ಹಾಲಿಬಾಲ್ ಪಂದ್ಯಾವಳಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಸಮಯವ್ಯರ್ಥ ಮಾಡದೆ ಇನ್ನಿತರ ಆರೋಗ್ಯಕರ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕೆಂದರು. ಕ್ರೀಡಾಪಟುಗಳು ನಿರಂತರ ಪ್ರಯತ್ನ ಮಾಡಿದರೇ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಲು ಸಾಧ್ಯ ಎಂದರು.
ಸೆಮಿಫೈನಲ್ ಪಂದ್ಯಗಳಲ್ಲಿ ಬಾಗಲಕೋಟೆಯ ಎಸ್.ಆರ್.ಎನ್. ಸಕ್ರಿ ಮಹಾವಿದ್ಯಾಲಯ ಮತ್ತು ಜಮಖಂಡಿಯ ಬಿ.ಎಲ್.ಡಿ.ಇ ಮಹಾವಿದ್ಯಾಲಯ ನಡುವೆ ಹಾಗೂ ಮಹಾಲಿಂಗಪುರದ ಕೆ.ಎಲ್.ಇ ಎಸ್.ಸಿ.ಪಿ ಮಹಾವಿದ್ಯಾಲಯ ಮತ್ತು ಬಾಗಲಕೋಟೆಯ ಬಸವೇಶ್ವರ ಬಿಪಿಇಡಿ ಮಹಾವಿದ್ಯಾಲಯ ನಡುವೆ ಪೈಪೋಟಿ ಏರ್ಪಟ್ಟು ಜಮಖಂಡಿಯ ಬಿ.ಎಲ್.ಡಿ.ಇ ಮಹಾವಿದ್ಯಾಲಯ ಹಾಗೂ ಮಹಾಲಿಂಗಪುರದ ಕೆ.ಎಲ್.ಇ ಎಸ್.ಸಿ.ಪಿ ಮಹಾವಿದ್ಯಾಲಯಗಳು ಫೈನಲ್ ಪ್ರವೇಶಿಸಿದವು.
ಫೈನಲ್ ಪಂದ್ಯದಲ್ಲಿ ನೇರ ಹಣಾಹಣಿ ಏರ್ಪಟ್ಟು ಮಹಾಲಿಂಗಪುರದ ಕೆ.ಎಲ್.ಇ ಎಸ್.ಸಿ.ಪಿ ಮಹಾವಿದ್ಯಾಲಯ 2-0 ಸೆಟ್ಟುಗಳಲ್ಲಿ ಗೆಲವು ಸಾಧಿಸುವುದರ ಮೂಲಕ ಸತತವಾಗಿ ಮೂರನೇಯ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಜಮಖಂಡಿಯ ಬಿ.ಎಲ್.ಡಿ.ಇ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು.
ಬೆಸ್ಟ್ ಅಟ್ಯಾಕರ್ ಪ್ರಜ್ವಲ ನಾಗನೂರ, ಬೆಸ್ಟ್ ಪಾಸರ್ ಆರೀಫ್ ಮದ್ದಿನ, ಆಲ್ ರೌಂಡರ್ ಮುಜಾಮ್ಮಿಲ್ ಜಮಾದಾರ ಪಡೆದುಕೊಂಡರು.
ಮಹಾಲಿಂಗಪುರದ ಕೆ.ಎಲ್.ಇ ಎಸ್.ಸಿ.ಪಿ ಮಹಾವಿದ್ಯಾಲಯದ ಕ್ರೀಡಾಪಟುಗಳಾದ ದಾನೇಶ ಕಿಶೋರಿ, ಪ್ರಜ್ವಲ ನಾಗನೂರ, ಸುನೀಲ ಲಮಾಣಿ, ರಾಹುಲ ಗುರವ, ವಿನಾಯಕ ಹುಣಶ್ಯಾಳ, ಶ್ರೀಶೈಲ ಪೂಜೇರಿ, ಪ್ರವೀಣ ಮಾಳಿ, ಅಜಯ ಕೊಣ್ಣುರ, ಪ್ರಜ್ವಲ ಗಡ್ಡಿ, ಆರೀಫ್ ಮದ್ದಿನ, ಷೇರ್ಖಾನ್ ಬಿಸ್ತಿ, ಆಲಮ್ ಪಕಾಲಿ ವಿಜಯಶಾಲಿಗಳಾದರು.
ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೆ.ಎಲ್.ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಸಂತೋಷ ಹುದ್ದಾರ ಮತ್ತು ಜಿಲ್ಲಾ ಉಪಾಧ್ಯಕ್ಷ ಕಾನಿಪ ಜಯರಾಮಶೆಟ್ಟಿ ಇದ್ದರು.
ಈ ಸಂದರ್ಭದಲ್ಲಿ ಅಥಣಿ ಜಲಸಂಪನ್ಮೂಲ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರು ಕೆ.ಕೆ.ಜಾಲಿಬೇರಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎಸ್.ಈಶ್ವರಪ್ಪಗೋಳ, ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ಉಪಪ್ರಾಚಾರ್ಯ ಆರ್.ಎ.ಸೂರ್ಯವಂಶಿ, ಐಕ್ಯೂಎಸಿ ಸಂಯೋಜಕ ಡಾ.ಕೆ.ಎಂ.ಅವರಾದಿ, ಸಂಘಟನಾ ಕಾರ್ಯದರ್ಶ ವ್ಹಿ.ಎಸ್.ಅಂಗಡಿ, ಸಹಕಾರ್ಯದಶರ್ಿ ಎ.ಎಂ.ಉಗಾರೆ, ಉಪನ್ಯಾಸಕ ವ್ಹಿ.ಎ.ಅಡಹಳ್ಳಿ, ವಿ.ಎಂ.ಮುಧೋಳ, ಆರ್.ಎಸ್.ಪೂಜಾರಿ, ತರಬೇತಿದಾರ ಸಲೀಂ ಹಳಂಗಳಿ, ರವಿ ಕಲ್ಲೊಳ್ಳಿ, ಬಿ.ಎಂ..ಸಿದ್ನಾಳ ಹಲವರಿದ್ದರು.