ಲೋಕದರ್ಶನ ವರದಿ
ಮಹಾಲಿಂಗಪುರ 16: ವ್ಯಾಪಾರೋದ್ಯಮವನ್ನೇ ಪ್ರಧಾನ ವೃತ್ತಿಯಾಗಿ ಹೊಂದಿರುವ ಆರ್ಯವೈಶ್ಯ ಸಮಾಜದವರ ಕುಲದೇವತೆ ವಾಸವಿ ಕನ್ಯಕಾ ಪರಮೇಶ್ವರಿ ಜಯಂತಿಯನ್ನು ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ವಾಸವಿ ಮೂರ್ತಿಯನ್ನು ಮೆರವಣಿಗೆ ಮೂಲಕ ವಾಸವಿ ಕಲ್ಯಾಣ ಮಂಟಪಕ್ಕೆ ತರಲಾಯಿತು. ನಂತರ ವಾಸವಿ ಕಲ್ಯಾಣಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಪ್ರಮುಖರಾದ ವಿ.ಎನ್.ಗುಂಡಾ ಕನ್ಯಕಾಪರಮೇಶ್ವರಿ ವಾಸವಿ ಲೋಕಮಾತೆಯಾಗಿ ಬೆಳಗಿದ ಅನುಪಮ ತ್ಯಾಗಜೀವಿ.ಸತ್ಯ ಅಹಿಂಸೆಗಳ ಸಾಕಾರಮೂರ್ತಿ. ಧರ್ಮವನ್ನು ಮತ್ತು ಮಹಿಳೆಯರನ್ನು ರಕ್ಷಿಸಲು, ಜನತೆಯ ಜೀವ ಉಳಿಸಲು ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಅಗ್ನಿ ಪ್ರವೇಶ ಮಾಡಿ ದೇವತಾ ಸ್ಥಾನಮಾನದಲ್ಲಿ ನಿಂತ ಅವತಾರಿಣಿ. ಈ ಮಾತೆಯ ಪೂಜಿಸುವದರಿಂದ ಹಾಗೂ ಸ್ಮರಣೆ ಮಾಡುವದರಿಂದ ಸರ್ವ ಸಂಕಟಗಳು ನಿವಾರಣೆಯಾಗಿ ಮನೆ ಹಾಗೂ ಮನದಲ್ಲಿ ಸಂತೋಷ ನೆಲೆಸುವದೆಂದರು.
ಮಹಾಲಿಂಗಪುರ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಮುರಳಿ ಗುಂಡಾ, ಡಾ.ಕೆ.ವಿ.ದಂತಿ, ಆನಂದ ಗುಂಡಾ, ಕಿರಣ ಗುಂಡಾ, ಕೃಷ್ಣಾಜಿ ಗುಂಡಾ, ಶ್ರೀಪಾದ ಗುಂಡಾ, ಡಾ.ವಿಶ್ವನಾಥ ಗುಂಡಾ, ಮಂಜುನಾಥ ಗುಂಡಾ, ಶ್ರೀನಿವಾಸ ಗುಂಡಾ, ಸುಧೀರ ಗುಂಡಾ, ರಾಘವೇಂದ್ರ ಗುಂಡಾ, ನಾಗರಾಜ ಬೆಂಗಳೂರ, ಸುಮಂಗಲಾ ಗುಂಡಾ, ಸುವಣರ್ಾ ಗುಂಡಾ, ರೋಹಿಣಿ ಗುಂಡಾ, ಅಶ್ವಿನಿ ಗುಂಡಾ, ಸುರೇಖಾ ಗುಂಡಾ ಮುಂತಾದವರು ಇದ್ದರು.