ಸೈದಾಪುರ ಗ್ರಾಪಂ ಅಧ್ಯಕ್ಷರಾಗಿ ಮಹಾಲಿಂಗಪ್ಪ ಸನದಿ ಅವಿರೋಧ ಆಯ್ಕೆ
ಮಹಾಲಿಂಗಪುರ 13: ಸಮೀಪದ ಸೈದಾಪುರ ಗಾಪಂನ ನೂತನ ಅಧ್ಯಕ್ಷರಾಗಿ ಬಿಜೆಪಿಯ ಮಹಾಲಿಂಗಪ್ಪ ಸನದಿ ಅವಿರೋಧವಾಗಿದ್ದಾರೆಂದು ಚುನಾವಣಾಧಿಕಾರಿ ಸಿದ್ಧಪ್ಪ ಪಟ್ಟಿಹಾಳ ಘೋಷಿಸಿದರು.
ನಿಕಟಪೂರ್ವ ಅಧ್ಯಕ್ಷ ಪಿಯೂಷ ಓಸ್ವಾಲ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿ ಮೀಸಲಾತಿಯಡಿ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿಯನ್ನು ಆಯ್ಕೆ ಎಂದು ಘೋಷಿಸಲಾಯಿತು. ಮಹಾಲಿಂಗಪ್ಪ ಸನದಿ 3ನೇ ಬಾರಿ ಅಧ್ಯಕ್ಷ ಗಾದಿಗೇರಿರುವುದು ಕಾರ್ಯಕರ್ತರಲ್ಲಿ ಸಂತಸ ತುಂಬಿ ಪಟಾಕಿ ಸಿಡಿಸಿ ಬಣ್ಣ ಎರಚಿ ಸಂಭ್ರಮಿಸಿದರು.ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಸವಣ್ಣೆಪ್ಪ ಬ್ಯಾಳಿ, ಮಹಾಂತಯ್ಯ ಮಠಪತಿ, ಶಿವಲಿಂಗಪ್ಪ ಕೌಜಲಗಿ,ಮಹಾಲಿಂಗ ಪುರಾಣಿಕ, ಶಿವಪ್ಪ ಬಾಯಪ್ಪಗೋಳ, ಮಲಗೌಡ ಪಾಟೀಲ, ಮುತ್ತನಾಯಕ ನಾಯಕ, ರಾಮನಗೌಡ ಪಾಟೀಲ, ಮಲ್ಲಪ್ಪ ಬಾಯಪ್ಪಗೋಳ, ಬಸಪ್ಪ ಉಳ್ಳಾಗಡ್ಡಿ, ಲಕ್ಷ್ಮಣ ಉಳ್ಳಾಗಡ್ಡಿ, ಕಾಂಗ್ರೆಸ್ ಕಾರ್ಯಕರ್ತರಾದ ನಿತಿನ್ ಒಡೆಯರ್, ರವಿ ಕುರುಬರ, ಸದಾ ರಜಪೂತ, ಮುಕುಂದ ಪವಾರ, ವಿಶಾಲ ತೆಗ್ಗಳ್ಳಿ, ಬಸವಣ್ಯೆಪ್ಪ ಮಾಂಗ, ಯಂಕಪ್ಪ ಕೇದಾರಿ, ಗ್ರಾಪಂ ಸದಸ್ಯರಾದ ಶಿವಲಿಂಗ ಪೋಳ, ಚಿನ್ನಪ್ಪ ಬಾಯಪ್ಪಗೋಳ, ಮಲ್ಲಪ್ಪ ಕೌಜಲಗಿ, ಯಮನಪ್ಪ ಉಪ್ಪಾರ, ಆನಂದ ಬನಹಟ್ಟಿ, ಶೈಲಾ ಕೌಜಲಗಿ, ತುಳಸವ್ವ ಲಮಾಣಿ, ಮಾಯವ್ವ ಮುರಚೆಟ್ಟಿ, ಕವಿತಾ ಕಾಂಬಳೆ, ರೂಪಾಲಿ ಶಿಂಧೆ, ಪಿಡಿಒ ಚಿನ್ನಪ್ಪ ಹಿರೆಕುರುಬರ ಇತರರಿದ್ದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ಧಪ್ಪ ಪಟ್ಟಿಹಾಳ ಚುನಾವಣಾಧಿಕಾರಿಯಾಗಿ, ಕೆಸರಗೊಪ್ಪ ಗ್ರಾಪಂ ಕಾರ್ಯದರ್ಶಿ ಭಾಸ್ಕರ ಬಡಿಗೇರ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.