ರಾಮದುರ್ಗ 02: ಪ್ರವಾಹದಿಂದ ಹಾನಿಗಿಡಾದ ಮನೆಗಳ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ಮಾಡಿಲ್ಲ ಎಂಬ ಸಾರ್ವಜನಿಕ ದೂರುಗಳನ್ನು ಆದರಿಸಿ ಶಾಸಕ ಮಹಾದೇವಪ್ಪ ಯಾದವಾಡ ಮಂಗಳವಾರ ಅವರಾದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅವರಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಮೀಕ್ಷೆ ಮಾಡುತ್ತಿರುವ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಸರ್ವೇ ಮಾಡಿದ್ದಾರೆ. ತಾವು ಮತ್ತೊಮ್ಮೆ ಸರ್ವೇ ಮಾಡಿಸಿ ನಮಗೆ ಅನ್ಯಾಯವಾಗದಂತೆ ನ್ಯಾಯ ಕೊಡಿಸಿ ಎಂದು ಅವರಾದಿ ಗ್ರಾಮಸ್ಥರು ಶಾಸಕ ಮಹಾದೇವಪ್ಪ ಯಾದವಾಡ ಅವರ ಮುಂದೆ ಮನವಿ ಮಾಡಿಕೊಂಡರು.
ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಅವರು, ಸ್ಥಳದಲ್ಲೇ ಇದ್ದ ರಾಮದುರ್ಗ ತಹಶೀಲ್ದಾರ ಬಸನಗೌಡ ಕೊಟೂರ ಅವರಿಗೆ ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳುವಂತೆ ಸೂಚಿಸಿದರು.
ಅವರಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನೆರೆ ಪೀಡಿತ ಗ್ರಾಮಗಳಲ್ಲಿ ಎನ್.ಆರ್.ಇ.ಜಿ.ಎ ಇಂಜಿನಿಯರ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಅವರನ್ನು ಅಮಾನತು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮದ ಎಲ್ಲಾ ಮನೆ ಮನೆಗಳಿಗೂ ಭೇಟಿ ನೀಡುವುದು ಆಗುವುದಿಲ್ಲ. ಮನೆಗಳ ಸರ್ವೇ ಆಗದವರು ಮತ್ತು ಪರಿಹಾರ ಧನ ಮುಟ್ಟದವರು ಒಂದು ಪಟ್ಟಿಮಾಡಿ ತಹಶೀಲ್ದಾರರಿಗೊಂದು ನನಗೊಂದು ನೀಡಿ ಎಂದು ಹೇಳಿ ಗ್ರಾಮಸ್ಥರನ್ನು ಸಮಾದಾನ ಪಡಿಸಿದರು. ತಾಪಂ ಸದಸ್ಯ ಶಿವಪ್ಪ ಮೇಟಿ, ಸುರೇಬಾನ ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ಮದಕಟ್ಟಿ, ಈರನಗೌಡ ಪಾಟೀಲ, ರಾಮದುರ್ಗ ತಹಶೀಲ್ದಾರ ಬಸನಗೌಡ ಕೊಟೂರ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಏಗನಗೌಡ್ರ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ರವಿಕುಮಾರ, ಸಮಾಜ ಕಲ್ಯಾಣ ಅಧಿಕಾರಿ ಕೆ.ಎಸ್.ಕರ್ಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು