ಮಹಾದಾಯಿ ನೀರಿನ ಬಳಕೆ ಅಧಿಸೂಚನೆ ಸ್ವಾಗತಾರ್ಹ: ಸಚಿವ ಪಾಟೀಲ್

ಗದಗ 28: ಮಲಪ್ರಭಾ ನದಿಗೆ ಕಳಸಾ ಬಂಡೂರಿ ನಾಲೆಗಳ ಜೋಡಣೆಯ ಕಾಮಗಾರಿ ಮತ್ತು ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋಟರ್್ನ ಮಧ್ಯಂತರ ಆದೇಶದಂತೆ ಕೇಂದ್ರ ಸಕರ್ಾರವು ಕನರ್ಾಟಕಕ್ಕೆ 13.42 ಟಿಎಂಸಿ ನೀರು ಸದ್ಭಳಕೆಗೆ ಅಧಿಸೂಚನೆ ಜಾರಿಗೊಳಿಸಿದ್ದು ತುಂಬಾ ಸಂತಸ ತಂದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹರ್ಷ ವ್ಯಕ್ತಪಡಿಸಿದರು. 

 ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ 4 ಜಿಲ್ಲೆಗಳ 14 ತಾಲ್ಲೂಕಿನ ರೈತರ ಪಾಲಿನ 13.42 ಟಿಎಂಸಿ ನೀರು ಬಳಕೆಗೆ ಅಧಿಸೂಚನೆ ನೀಡಿದ ಕೇಂದ್ರ ಸಕರ್ಾರವರೀ ಭಾಗದ ಜನರ ವಿಶ್ವಾಸವನ್ನು ಸಾಕಾರಗೊಳಿಸಿದೆ. ಇದರಿಂದ ರೈತರಿಗೆ ವರದಾನವಾಗಲಿದ್ದು, ಸಕರ್ಾರ ಅನ್ನದಾತರಿಗೆ ನ್ಯಾಯ ಒದಗಿಸುತ್ತದೆ ಎಂಬ ವಿಶ್ವಾಸ ಹುಸಿಯಾಗಲಿಲ್ಲ ಎಂದರು.

ಮಹದಾಯಿ ನದಿ ಯೋಜನೆಯ ಅನುಷ್ಠಾನಕ್ಕಾಗಿ 2020-21ನೇ ಸಾಲಿನ ಮುಂಗಡ ಪತ್ರದಲ್ಲಿ ಅಗತ್ಯ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಸಕರ್ಾರ ಯೋಜನೆಗಾಗಿ ಅನುದಾನ ಬಿಡುಗಡೆ ಮಾಡಲಿದೆ ಎಂದು ಸಚಿವ ಸಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಅನಿಲ್ ಮೆಣಸಿನಕಾಯಿ, ರಾಜು ಕುರುಡಗಿ, ವಸಂತ್ ಮೇಟಿ ಹಾಗೂ ಇತರ ಗಣ್ಯರು ಇದ್ದರು.