ಪ್ರಯಾಗರಾಜ್, ಫೆ 20- ಶಿವರಾತ್ರಿಯ ಪ್ರಯುಕ್ತ ಶುಕ್ರವಾರ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 10 ಲಕ್ಷ ಜನರು ಪವಿತ್ರ ಸಂಗಮ ಸ್ನಾನ ಕೈಗೊಳ್ಳುವ ನಿರೀಕ್ಷೆ ಇದೆ.
ಮಾಘ ಮೇಳದ ಅಂತಿಮ ದಿನದ ಸ್ನಾನಕ್ಕಾಗಿ ಸಂಪೂರ್ಣ ಸಿದ್ಧತೆಯಾಗಿದೆ. ಸ್ನಾನ ಘಟ್ಟಗಳು, ವಿದ್ಯುತ್, ಕುಡಿಯುವ ನೀರು ಸರಬರಾಜು ಮತ್ತು ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಈಗಾಗಲೇ ಕಲ್ಪವಾಸಿ ತ್ರಿಕಾಲ ಜ್ಞಾನಿಗಳು ಮತ್ತು ಮಹಾತ್ಮರು ಮಾಘ ಪೂರ್ಣಿಮೆಯ ಸ್ನಾನ ಮುಗಿಸಿ ಹಿಂದಿರುಗಿದ್ದಾರೆ.
ಕೆಲವು ಋಷಿಗಳು ಹಾಗೂ ಮಹಾತ್ಮರು ಮಹಾ ಶಿವರಾತ್ರಿ ಪವಿತ್ರ ಸ್ನಾನ ಕೈಗೊಳ್ಳಲಿದ್ದಾರೆ. ಮಾಘ ಮೇಳ, ಕುಂಭ ಮೇಳದ ಮತ್ತು ಇಂದಿನ ಅರ್ಧ ಕುಂಭ ವಿಶ್ವದ ದೊಡ್ಡ ಆಧ್ಯಾತ್ಮಿಕ ಸಭೆ ಪರಿಗಣಿಸಲಾಗುತ್ತದೆ. ಮಹಾ ಶಿವರಾತ್ರಿಯ ನಂತರ ಮಾಘ ಮೇಳದ ಸ್ನಾನ ಪೂರ್ಣಗೊಳ್ಳಲಿದೆ.