ಮಹಾ ಮೃತ್ಯುಂಜಯ ಯಜ್ಞ ಕಾರ್ಯಕ್ರಮ

ಬೈಲಹೊಂಗಲ 27: ಸಮೀಪದ ಶ್ರೀಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿ ನಾದಬ್ರಹ್ಮ ಧ್ಯಾನಯೋಗ ಸಂಸ್ಕೃತಿ ವಿದ್ಯಾ ಕೇಂದ್ರ ಬೈಲಹೊಂಗಲ ಇವರ ಆಶ್ರಯದಲ್ಲಿ ಮಹಾಮೃತ್ಯುಂಜಯ ಯಜ್ಞ ಅರ್ಥಪೂರ್ಣವಾಗಿ ನಡೆಯಿತು. 

        ಭಕ್ತರು ಶ್ರದ್ಧಾ, ಭಕ್ತಿಯಿಂದ ಮಂತ್ರ ಪಠಣ ಮಾಡಿ, ತಮ್ಮ ಇಷ್ಟಾರ್ಥಗಳ ಬೇಡಿಕೆಯ ಸಂಕಲ್ಪ ಮಾಡಿದರು. ಆಯಸ್ಸು, ಆರೋಗ್ಯ, ಸಂಪತ್ತು ಸಿಗಲೆಂದು ಪ್ರಾಥರ್ಿಸಿದರು. ಭಕ್ತರು ಶ್ರೀಗುರು ಪ್ರಾರ್ಥನೆ, ಶ್ರೀ ಗಣೇಶ ಪ್ರಾರ್ಥನೆ, ಮಹಾಕಾಳಿ, ಮೃತ್ಯುಂಜಯ ಮಹಾಮಂತ್ರ, ಸೂರ್ಯದೇವ ಮಂತ್ರ, ಮಾತಾ ಗಾಯತ್ರಿ ಮಂತ್ರ, ಶಾಂತಿ ಮಂತ್ರಗಳನ್ನು ಸತತ 3 ಘಂಟೆಗಳ ಕಾಲ ಪಠಣ ಮಾಡಿದರು. ನಂತರ ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ನಾನಾ ಪೂಜಾ ಕಾರ್ಯಕ್ರಮಗಳು ಜರುಗಿದವು. 

ಚಂದ್ರಶೇಖರ ಪಟ್ಟೇದ ಗುರೂಜಿ, ಸಿ.ಪಿ.ಈಟಿ ಗುರೂಜಿ ನೇತೃತ್ವವಹಿಸಿದ್ದರು. ಸಂದರ್ಭದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಸೋಮಯ್ಯ ಪೂಜೇರ, ಸಂಗಯ್ಯಾ ಪಾಟೀಲ, ಮಹಾಂತೇಶ ಪಾಟೀಲ, ಪ್ರಮೋದ ಸೊಪ್ಪಿಮಠ, ಈರಣ್ಣಾ ಈಟಿ, ವಿನೋದ ಹಿರೇಮಠ, ರಮೇಶ ನಾಶಿಪುಡಿ, ರಮೇಶ ಪಾಟೀಲ, ಕರವೀರ ರುದ್ರಾಪೂರ, ಗುರುಪಾದ ಕಳ್ಳಿ, ಎಂ.ಆರ್.ಮೆಳವಂಕಿ, ದುಂಡೇಶ ಗರಗದ, ವಿರೂಪಾಕ್ಷ ವಾಲಿ, ಬಸವರಾಜ ಅವರಾದಿ, ಪ್ರಕಾಶ ಅಸುಂಡಿ, ವಿಶಾಲ ಹೊಸೂರ, ಆನಂದ ಮೂಗಿ, ರಿತೇಶ ಪಾಟೀಲ, ಶಿವಾನಂದ ಮಡಿವಾಳರ ಸೇರಿದಂತೆ ಬೈಲಹೊಂಗಲ, ಬೆಂಗಳೂರ, ಕೊಪ್ಪಳ, ಹಳಿಯಾಳ, ಧಾರವಾಡ, ಬೆಳಗಾವಿ ಭಾಗದಿಂದ ಅನೇಕ ಭಕ್ತರು ಪಾಲ್ಗೊಂಡಿದ್ದರು.