ಜಿಲ್ಲಾಡಳಿತದಿಂದ ಮಡಿವಾಳ ಮಾಚಿದೇವ ಜಯಂತಿ ಅರಸ ಮೇಲಲ್ಲ ಅಗಸ ಕೀಳಲ್ಲ ಎಲ್ಲರೂ ಸಮಾನ: ಶಂಕರ್ ಮಾರಿಹಾಳ

Madiwala Machideva Jayanti from the district administration, King is not above, Agas is not below, e

ಜಿಲ್ಲಾಡಳಿತದಿಂದ ಮಡಿವಾಳ ಮಾಚಿದೇವ ಜಯಂತಿ ಅರಸ ಮೇಲಲ್ಲ ಅಗಸ ಕೀಳಲ್ಲ ಎಲ್ಲರೂ ಸಮಾನ: ಶಂಕರ್ ಮಾರಿಹಾಳ 

ವಿಜಯಪುರ, ಫೆ.01: ಮಹಾನ ವ್ಯಕ್ತಿಗಳ ಸಿದ್ದಾಂತ ಹಾಗೂ ತತ್ವಗಳನ್ನು ಯುವ ಪೀಳಿಗೆ ಕೇವಲ ಜಯಂತಿ ದಿನದಂದೇ ನೆನೆಯದೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ ಹೇಳಿದರು.  

ಶನಿವಾರ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸತ್ಯದ ಮಾರ್ಗ ತೋರಿಸಲು ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಕ್ರಾಂತಿ ನಡೆಸಿದರು ಎಂದು ತಿಳಿಸಿದರು.  

ಅರಸ ಮೇಲಲ್ಲ ಅಗಸ ಕೀಳಲ್ಲ ಎಲ್ಲರೂ ಸರಿಸಮಾನವಾಗಿ ಜೀವನ ಸಾಗಿಸಬೇಕೆಂಬ ಸಂದೇಶವನ್ನು ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿಯೇ ಸಾರಿದರು ಎಂದು ಹೇಳಿದರು.  

  ಬಸವಣ್ಣರ ವಚನಗಳನ್ನು ಕಾಪಾಡಿ ಬೆಳಕಿಗೆ ತಂದ ಮಹಾನ್ ಶರಣರು ಮಡಿವಾಳ ಮಾಚಿದೇವರು. ಅವರ ಆದರ್ಶ, ತತ್ವಗಳು ಇಂದಿನ ಯುವಪೀಳಿಗೆಗಳಿಗೆ ಪ್ರಸ್ತುತವಾಗಿವೆ ಎಂದು ಅವರು ತಿಳಿಸಿದರು.  

ಕಾರ್ಯಕ್ರಮದಲ್ಲಿ  ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸಕ ನೀಡಿದ ವಿಶ್ರಾಂತ ಕುಲಪತಿ ಬಿ.ಎನ್‌. ಪಾಟೀಲ ಮಾತನಾಡಿ ಸಮಾಜದಲ್ಲಿರುವ ಮೂಡನಂಬಿಕೆ, ಗೊಡ್ಡಸಂಪ್ರದಾಯ ವಿರೋಧಿಸಿ ಅನಿಷ್ಟ ಪದ್ಧರಿಗಳ ಕುರಿತು ಹೋರಾಡಿದ ಮಹಾನ್ ಶಿವಶರಣರಾಗಿದ್ದರು. ಕಲ್ಯಾಣಕ್ರಾಂತಿಗೆ ಮಹತ್ವ ಪಡೆಯಲು ಕಾರಣರಾದವರಲ್ಲಿ ಇವರು ಒಬ್ಬರು ಹಾಗೂ ಕಾಯಕ ನಿಷ್ಠೆ ಉಳ್ಳವರಾಗಿದ್ದರು.   ಕಾಯಕ ನಿಷ್ಠ ಹಾಗೂ ಬಸವಣ್ಣರ ಹತ್ತಿರದವರಾಗಿ ಗುರುತಿಸಿಕೊಂಡಿದ್ದರು.  

ಉಪ ವಿಭಾಗಾಧಿಕಾರಿ ಗುರುನಾಥ್ ದಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 12ನೇ ಶತಮಾನದ ಶಿವಶರಣರು ಅನುಭವ ಮಂಟಪದಲ್ಲಿ ವಚನಗಳ ಮೂಲಕ ಅಸ್ಪೃಶತೆ ಕುರಿತು ಜನಜಾಗೃತಿ ಮೂಡಿಸಿ ಎಲ್ಲರು ಸಮನರು ಎಂದು ಸಾರಿ ಹೇಳೀದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಮಡಿವಾಳ ಸಮಾಜದ ಅಧಯಕ್ಷರಾದ ಸಾಯಬಣ್ಣ ಮಡಿವಾಳ ಮಾತನಾಡಿರು. ಗಾಯಕಿ ಹಾಗೂ ಸಂಗಡಿಗರು ವಿಶಾಲಾಕ್ಷಿ ಬಡಿಗೇರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಬೆಳಗ್ಗೆ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಮಡವಾಳ ಮಾಚಿದೇವ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಪಾಂಚಾಯತ ಮುಖ್ಯಯೋಜನಾಧಿಕಾರಿ ನಿಂಗಪ್ಪ ಗೋಠೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯನ ನೀರ್ದೇಶಕ ಸಂತೋಷ ಭೋವಿ, ಸಮಾಜ ಮುಖಡರಾದ ಬಾಬು ಬಳ್ಳಾರಿ, ಶಿವಪ್ಪ ಹುಬ್ಬಳ್ಳಿ, ಪ್ರಭು ಮಡಿವಾಳ, ಶಿವಕುಮಾರ್ ಪರೀಟ್, ಬೋರವ್ವ ಇಂಡಿಕರ, ದೇವಮ್ಮ ಬಳ್ಳಾರಿ, ಭೀಮರಾಯ ಜಿಗಜಿಣಗಿ, ದೇವೆಂದ್ರ ಮೀರೆಕರ, ಸೋಮನಗೌಡ ಕಲ್ಲೂರು ಹಾಗೂ ಇತರರು ಉಪಸ್ಥಿತರಿದ್ದರು.