ಮಡಿವಾಳೇಶ್ವರ ಮಹಾಸ್ವಾಮಿಗಳು ಕಾವಿ ಲೋಕದ ಭೀಷ್ಮಾಚಾರ್ಯರು: ದಿಂಗಾಲೇಶ್ವರ ಶ್ರೀ

Madivaleshwar Mahaswami is the Bhishmacharya of the world of poets: Dingaleshwar Shri

ದೇವರಹಿಪ್ಪರಗಿ 18: ಮಹಾಭಾರತದಲ್ಲಿ ಭೀಷ್ಮ ಪಿತಾಮಹರನ್ನು ಶ್ರೇಷ್ಠ ಯೋಧರಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ. ಅದೇ ರೀತಿ 21ನೇ ಶತಮಾನದ ಕಾವಿ ಲೋಕದ ಹಿರಿಯರು ಅನುಭವಿಗಳು ಆದ ಶ್ರೀ ಮಡಿವಾಳೇಶ್ವರ ಮಹಾಸ್ವಾಮಿಗಳು 95 ವರ್ಷಗಳಾದರು ಅವರ ಗಟ್ಟಿತನ ಕಾವಿ ಬಟ್ಟೆಯೊಳಗಿನ ಭೀಷ್ಮಾಚಾರ್ಯರು ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.  

ತಾಲೂಕಿನ ಜಾಲವಾದ ಗ್ರಾಮದಲ್ಲಿ ಶುಕ್ರವಾರದಂದು ನಡೆದ ಶ್ರೀ ಮುರುಘೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಶ್ರೀ ಮ.ನಿ.ಪ್ರ ಮಡಿವಾಳೇಶ್ವರ ಮಹಾಸ್ವಾಮಿಗಳ 95ನೇ ವರ್ಷದ ಜನ್ಮ ವರ್ಧಂತಿ ಮಹೋತ್ಸವ, ಕಲಬುರ್ಗಿ ಶರಣಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ ಹಾಗೂ ಭಕ್ತ ಹಿತಸಿಂಚನ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಸಾವಿರಾರು ಭಕ್ತ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ.ಸತ್ಯ ಶುದ್ಧ ಹಾಗೂ ಸನ್ಮಾರ್ಗದಲ್ಲಿ ಕೈಗೊಳ್ಳುವ ಕಾಯಕದಲ್ಲಿ ಮನುಷ್ಯ ಧರ್ಮದ ಶ್ರೇಷ್ಠತೆ ಅಡಗಿದೆ. ಮನುಷ್ಯನ ನಡೆ, ನುಡಿ, ಆಚಾರ, ವಿಚಾರ ಸನ್ಮಾರ್ಗದಲ್ಲಿ ಇದ್ದರೆ ಆ ದೇವರು ಸಹ ಒಳ್ಳೆದು ಮಾಡುತ್ತಾನೆ. ಮನುಷ್ಯ ದುಶ್ಚಟದಿಂದ ದೂರ ಇರಬೇಕು.ಯುವ ಜನತೆ ಮದ್ಯಪಾನ ಮತ್ತು ಜೂಜಾಟಗಳಿಗೆ ಬಲಿ ಆಗಿರುವುದು ನಮ್ಮ ದೇಶಕ್ಕೆ ಮಾರಕವಾಗಿದೆ. ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಮನುಷ್ಯ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರದ ಚಾಣಕ್ಯ ಕರಿಯರ್ ಎನ್‌.ಎಂ. ಬಿರಾದಾರ ಅವರು ಮಾತನಾಡಿ, ಈ ಭಾಗದ ಹಿರಿಯ ಶ್ರೀಗಳು ಭಕ್ತ ಮನದ ಮೇರು ಹೃದಯ ಯಾಗಿದ್ದಾರೆ. ಅವರ ಮಾರ್ಗದರ್ಶನದಂತೆ ಯುವ ಸಮುದಾಯದಲ್ಲಿ ಸಾಮಾಜಿಕ ಪ್ರಜ್ಞೆ, ಮಾನವೀಯ ಗುಣ, ಧಾರ್ಮಿಕ ಮನೋಭಾವ ಅವಶ್ಯಕವಾಗಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ದೇವರಹಿಪ್ಪರಗಿ-ಜಾಲವಾದ ಗದ್ದಿಗಿ ಶ್ರೀಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಮ.ನಿ.ಪ್ರ  ಮಹಾಂತ ಮಹಾ ಸ್ವಾಮೀಜಿಗಳು ಮಾತನಾಡಿ, ಶ್ರೀಮಠದಲ್ಲಿ ಭತ್ತದ ಕಾಳಜಿಯಿಂದ ನಿತ್ಯ ದಾಸೋಹ ಸೇವೆ ನಡೆಯುತ್ತಿದೆ. ಬೆನ್ನೆಲುಬಾಗಿ ಸಹಕಾರ ನೀಡಿರುವ ಕಾರಣ ಮಠದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ, ಎಲ್ಲರ ಸಹಕಾರ ಸೇವೆ ಹೀಗೆ ಇರಲಿ ಎಂದು ಹೇಳಿದರು.ಕಾರ್ಯಕ್ರಮದ ಸಾನಿಧ್ಯವನ್ನು ದೇವರಹಿಪ್ಪರಗಿ-ಜಾಲವಾದ ಗದ್ದಿಗಿ ಮಠದ ಹಿರಿಯ ಶ್ರೀಗಳಾದ ಮ.ನಿ.ಪ್ರ ಮಡಿವಾಳೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಮಸಬಿನಾಳದ ದಾಸೋಹ ಸಂಸ್ಥಾನ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು, ಶೋಭಾ ಮಾತಾಜಿ, ಕೊಡೆಕಲ್ ಶ್ರೀಗಳು, ವಡವಡಗಿ ಶ್ರೀಗಳು, ಅಂಬಳೂರಿನ ಸಂಗಮನಾಥ ದೇವರು ವೇದಿಕೆ ಮೇಲಿದ್ದರು.ಕಾರ್ಯಕ್ರಮದ ಮುಂಚೆ ನಿವೃತ್ತ ಸಹಾಯಕ ಅಭಿಯಂತರರಾದ ಜಗದೀಶ ಮಡಿವಾಳರು ನೀಡಿದ ಶ್ರೀ ಮಡಿವಾಳೇಶ್ವರರ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲಿಯರಿಂದ ಕುಂಭ ಮೆರವಣಿಗೆ ಮೂಲಕ ಹನುಮಾನ ದೇವಸ್ಥಾನದಿಂದ ಶ್ರೀ ಮುರುಘೇಂದ್ರ ಶಿವಯೋಗಿಗಳ ದೇವಸ್ಥಾನದವರೆಗೆ ಸಕಲಕಲ ತಂಡಗಳ ಮೂಲಕ ಅದ್ದೂರಿಯಾಗಿ ತರಲಾಯಿತು. 

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಸಚೀನಗೌಡ ಪಾಟೀಲ ಕುದುರಿಸಾಲವಾಡಗಿ,ಗಿರಿನಗೌಡ ಪಾಟೀಲ ,ಪ್ರಭುಲಿಂಗ ದೊಡ್ಡಿನ, ಸಿದ್ದನಗೌಡ ಪಾಟೀಲ, ಮಲ್ಲಪ್ಪ ಕರಿಕಬ್ಬಿ,ಡಾ.ಎಸ್‌.ಎಸ್‌.ಅಂಬರಖೇಡ, ಬಸಲಿಂಗಪ್ಪ ಹಡಪದ, ಶ್ರೀಶೈಲ ಮನಗೂಳಿ, ಕಲ್ಲಪ್ಪ ಗುಂಡಗಿ, ಶಿವಾನಂದ ಜನಗೊಂಡ, ರವಿ ಗೋಲಗೇರಿ, ಡಿ.ಎ. ಇನಾಮದಾರ,ಗ್ರಾ.ಪಂ ಸದಸ್ಯರಾದ ರಾಮನಗೌಡ ಪಾಟೀಲ, ಮಾಂತೇಶ ಬೂದಿಹಾಳ, ಮಾಂತೇಶ ಪಾಟೀಲ, ಯಲ್ಲು ದೊಡ್ಡಿನ, ಬಸವರಾಜ ಕಂಬಾರ ಸೇರಿದಂತೆ ಜಾಲವಾದ, ಇಬ್ರಾಹಿಂಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.