ಮಡಿವಾಳ ಮಾಚಿದೇವರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು

ಗದಗ 01:  ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಹಾಗೂ ಶ್ರೀ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘ ಗದಗ ಜಿಲ್ಲಾ ಇವರ ಸಹಯೋಗದಲ್ಲಿ  ಮಡಿವಾಳ ಮಾಚಿದೇವರ ಜಯಂತಿ ಜರುಗಿತು.  ಕಾರ್ಯಕ್ರಮದಲ್ಲಿ  ಗದಗ  ಜಿ.ಪಂ. ಅಧ್ಯಕ್ಷ  ಸಿದ್ಧಲಿಂಗೇಶ್ವರ ಎಚ್ ಪಾಟೀಲ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ   ಬೈರನಹಟ್ಟಿ  ವಿರಕ್ತಮಠ ದೊರೆಸ್ವಾಮಿ  ಶಾಂತಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ  12 ನೇ ಶತಮಾನದಲ್ಲಿನ ಶರಣರ ಸಂಸ್ಕೃತಿ ಶ್ರಮದ ಸಂಸ್ಕೃತಿಯಾಗಿತ್ತು.  ಮಡಿವಾಳ ಮಾಚಿದೇವರ ಅನೇಕ ವಚನಗಳು ಬಸವಾದಿ ಶರಣರ ತತ್ವದ ತಳಹದಿ ಮೇಲಿವೆ. ಸಮಾಜದಲ್ಲಿನ  ಅಂಕುಡೊಂಕುಗಳನ್ನು ತಿದ್ದುವಲ್ಲಿ ಶರಣ ವಚನಗಳು ಸಹಕಾರಿಯಾಗಿವೆ ಎಂದರು.               

  ಸಮಾರಂಭದಲ್ಲಿ ಉಪನ್ಯಾಸ ನೀಡಿದ  ಡಾ.ರಮೇಶ ಕಲ್ಲನಗೌಡ್ರ ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದರು.  12ನೇ ಶತಮಾನದಲ್ಲಿ ಸಮಾಜದಲ್ಲಿ ಇರುವ ಅಜ್ಞಾನ, ಮೂಡನಂಬಿಕೆ, ಕಂದಾಚಾರ  ಹೋಗಲಾಡಿಸಿ ಸಮಾಜ ಸುಧಾರಣೆಗೆ  ಶ್ರಮಿಸಿದವರು ಮಡಿವಾಳ ಮಾಚಿದೇವರು.  ಅನ್ಯಾಯ ಕಂಡರೆ ಸಿಡಿದೇಳುತ್ತಿದ್ದ ಅವರು ಶರಣರ ಬಟ್ಟೆ ತೊಳೆಯುವುದೇ ಇವರ ಕಾಯಕವಾಗಿತ್ತು.   ವಿಜಾಪುರದ ದೇವರ ಹಿಪ್ಪರಗಿ  ಇವರ ಜನ್ಮಸ್ಥಳವಾಗಿದ್ದು.  ಸಮಾಜದಲ್ಲಿನ  ತಾರತಮ್ಯ ತೊಡೆದು ಹಾಕಿ ಸಮಾನತೆ ಹಾಗೂ ಸಹಬಾಳ್ವೆಗೆ ಇವರು ಕರೆ ನೀಡಿದರು.  ಕಲ್ಲಿನಾಥ ಮಡಿವಾಳ ಮಾಚಿದೇವರ ಆರಾಧ್ಯದೇವರಾಗಿದ್ದರು. ಶಿವಶರಣರ ಬಟ್ಟೆಗಳನ್ನು ಮಡಿ ಮಾಡುವುದು ಇವರ ಕಾಯಕವಾಗಿತ್ತು.  ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು ಹಾಗೂ ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿಗರು ಮಡಿವಾಳ ಮಾಚಿದೇವರು. ವಚನಗಳ ಮೂಲಕ ಸಮಾಜದಲ್ಲಿ  ಕಂದಾಚಾರ ಮೂಡನಂಬಿಕೆಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ  ಎಂದು    ಡಾ. ರಮೇಶ ಕಲ್ಲನಗೌಡ್ರ   ನುಡಿದರು. 

ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ,   ಮಾಜಿ ಸಂಸದ ಐ.ಜಿ. ಸನದಿ, ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ,  ತಹಶೀಲ್ದಾರ  ಶ್ರೀನಿವಾಸ ಮೂತರ್ಿ ಕುಲಕರ್ಣಿ, ಮಡಿವಾಳ  ಸಂಘದ ಜಿಲ್ಲಾ ಅಧ್ಯಕ್ಷ ಫಕೀರಪ್ಪ ಮಡಿವಾಳ , ಉಪಾಧ್ಯಕ್ಷ ವಿಠ್ಠಲ ಮಡಿವಾಳರ,  ಕಾರ್ಯದರ್ಶಿ  ಮಂಜುನಾಥ  ಮಡಿವಾಳರ,    ಮಲ್ಲಪ್ಪ ಮಡಿವಾಳರ, ದೇವಪ್ಪ ಮಡಿವಾಳರ, ಮಹೇಶ ಮಡಿವಾಳರ,  ನೀರಮ್ಮಾ ಮಡಿವಾಳರ  ಸೇರಿದಂತೆ  ತಾಲೂಕು, ಶಹರ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದಶರ್ಿಗಳು, ಪದಾಧಿಕಾರಿಗಳು, ಸಮುದಾಯದ ಸಮಸ್ತ ಬಾಂಧವರು,  ಗಣ್ಯರುಗಳು, ಉಪಸ್ಥಿತರಿದ್ದರು.  

   ಸುಮಾ ಅಸುಂಡಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು.   ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ  ವೀರಯ್ಯ ಸ್ವಾಮಿ ಬಿ. ಸರ್ವರನ್ನು ಸ್ವಾಗತಿಸಿ ವಂದಿಸಿದರು.   ಶಿವಾನಂದ ಗೋಗೇರಿ ಕಾರ್ಯಕ್ರಮ ನಿರೂಪಿಸಿದರು.