ಒಳಮೀಸಲಾತಿ ಜಾರಿಗೊಳಿಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ಪಾದಯಾತ್ರೆ

Madiga Reservation Struggle Committee marches to implement internal reservation

ಲೋಕದರ್ಶನ ವರದಿ 

ಒಳಮೀಸಲಾತಿ ಜಾರಿಗೊಳಿಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ಪಾದಯಾತ್ರೆ                                 

ಕಂಪ್ಲಿ 20: ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ, ಮಾದಿಗ ಮೀಸಲಾತಿ ಹೋರಾಟ ಸಮಿತಿವತಿಯಿಂದ ಪಟ್ಟಣದ ತಹಶೀಲ್ದಾರ್ ಕಛೇರಿ ಮುಂದೆ ಗುರುವಾರ ಪ್ರತಿಭಟಿಸಿ, ತಹಶೀಲ್ದಾರ್ ಶಿವರಾಜ ಶಿವಪುರಗೆ ಮನವಿ ಪತ್ರ ಸಲ್ಲಿಸಿದರು. ನಂತರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡ ಎಮ್ಮಿಗನೂರು ಜಡೆಪ್ಪ ಮಾತನಾಡಿ, ಮಾದಿಗ ಮತ್ತು ಉಪ ಜಾತಿಗಳು ಕಳೆದ 5 ವರ್ಷದಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ.  

ನ್ಯಾಯ ಸಮ್ಮತವಾಗಿ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳಿಗೆ ವಹಿಸಿದೆ. ಅದೇ ತೆಲಂಗಾಣ ಸರ್ಕಾರ ಒಳಮೀಸಲಾತಿ ಬಲ್ ಪಾಸ್ ಮಾಡಿ, ಸುಪ್ರೀಂ ಕೋಟ್ ಆದೇಶವನ್ನು ಪಾಲಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿದೆ. ಅಹಿಂದ ನಾಯಕನೆಂದು ಹೇಳಿ ಅಧಿಕಾರಕ್ಕೆ ಬಂದ ತಾವುಗಳು ಒಳಮೀಸಲಾತಿ ಜಾರಿಮಾಡುವಲ್ಲಿ ವಿಳಂಬಧೋರಣೆ ನಮಗೆ ಅನುಮಾನ ಮೂಡಿಸುತ್ತದೆ. ಈಗ ನಮ್ಮ ಸಮುದಾಯದ ನಾಯಕರು, ಯುವಕರು ಉರಿಬಿಸಿಲನ್ನು ಲೆಕ್ಕಿಸದೇ ಕ್ರಾಂತಿಕಾರಿ ಪಾದಯಾತ್ರೆಯ ಮೂಲಕ ಒಳಮೀಸಲಾತಿ ಕೂಡಲೇ ಜಾರಿಮಾಡುವಂತೆ ಬೆಂಗಳೂರಿಗೆ ಬರುತ್ತಿದ್ದು ಆದ್ದರಿಂದ ಯಾವುದೇ ನೆಪಗಳನ್ನು ಹೇಳದೇ ಕೂಡಲೇ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಉಗ್ರಹೋರಾಟವನ್ನು ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ನೀಡಲಾಗುವುದು ಎಂದರು.  

ತಾಲೂಕಿನ ಎಮ್ಮಿಗನೂರು ಗ್ರಾಮದಿಂದ ಕ್ರಾಂತಿಕಾರಿ ಪಾದಯಾತ್ರೆ ಆರಂಭಿಸಿ, ಕೊಟ್ಟಾಲ್ ಮೂಲಕ ಕಂಪ್ಲಿ ಪಟ್ಟಣದ ತಹಶೀಲ್ದಾರ್ ಕಛೇರಿಗೆ ತೆರಳಿ, ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎ.ವೀರಾಂಜೀನೀಯಲು, ಆರ್‌.ಆಂಜನೇಯ, ಮುಖಂಡರಾದ ಜಿ.ರಾಮಣ್ಣ, ಪಂಪಾಪತಿ, ಲಕ್ಷ್ಮೀಪತಿ, ಶ್ರೀನಿವಾಸ, ಕರಿಯಪ್ಪ ಗುಡಿಮನಿ, ಡಿಸ್ ಪ್ರಸಾದ್, ಗೋಪಿ, ಶೇಖರ, ಗಂಗಣ್ಣ, ಕರೆ ಮಾರೆಪ್ಪ, ಯಲ್ಲಪ್ಪ, ಹೆಚ್‌.ಮಲ್ಲೇಶ, ರಾಜ, ಚಲುವಾದಿ ಲಕ್ಷ್ಮಣ, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.