ಲೋಕದರ್ಶನ ವರದಿ
ಗದಗ : ಕಾಗಿನೆಲೆ ಪೀಠದ ಹೊಸದುರ್ಗ ಶ್ರೀಗಳ ಬಗ್ಗೆ ಉದ್ಧಟತನ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಹಾಲುಮತ ಮಹಾಸಭಾ ಜಿಲ್ಲಾ ಘಟಕದಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಲ್ಹಾದ ಹೊಸಳ್ಳಿ ಅವರು ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರ್ನಲ್ಲಿ ಶ್ರೀಕನಕದಾಸರ ಸರ್ಕಲ್ ಬಗ್ಗೆ ಗೊಂದಲ ಮೂಡಿದ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಜೆ. ಸಿ. ಮಾಧುಸ್ವಾಮಿಯವರು ಶ್ರೀಗಳಿಗೆ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯವಾಗಿದೆ. ಶಾಂತಿ ಸಭೆಯಲ್ಲಿ ಸಚಿವರಾಗಿ, ತಾಳ್ಮೆಯಿಂದ ಜನರ ಮಾತುಗಳಿಗೆ ಸ್ಪಂದಿಸಬೇಕಾಗುತ್ತದೆ. ಆದರೆ, ಹಾಲುಮತ ಸಮಾಜದ ಶ್ರೀಗಳಿಗೆ ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ ಅಲ್ಲದೇ, ಸಮಾಜದ ಮುಖಂಡರು ಸಚಿವರನ್ನು ಸ್ಪಷ್ಟೀಕರಣ ನೀಡುವಂತೆ ದೂರವಾಣಿ ಮೂಲಕ ಸಂಪಕರ್ಿಸಿದಾಗ ತನ್ನನ್ನು ತಾನು ಒಂದು ಸಮಾಜದ ನಾಯಕರೆಂದು, ಬೇರೆ ಸಮಾಜದವರ ಬಗ್ಗೆ ತನಗೆ ಆಸಕ್ತಿ ಇಲ್ಲವೆಂಬಂತೆ ಉದ್ದಟತನದ ಮಾತುಗಳನ್ನು ಆಡಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ರಾಜ್ಯದ ಎಲ್ಲ ಸಮಾಜದವರನ್ನೂ, ಎಲ್ಲ ಜನರನ್ನು ಸಮಾನ ಗೌರವದಿಂದ ಕಾಣುತ್ತೇನೆ ಎಂಬ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿರುವ
ಸಚಿವ ಜಿ.ಸಿ.ಮಾಧುಸ್ಚಾಮಿಯವರು ಜಾತಿ-ಜಾತಿಗಳ ಮಧ್ಯೆ ದ್ವೇಷ ಸಾಮರಸ್ಯವನ್ನು ಕದಡುವ ಮಾತುಗಳನ್ನು ಆಡುವ ಮೂಲಕ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಾರೆ. ಅದ್ದರಿಂದ ರಾಜ್ಯಪಾಲರು ಮಾಧುಸ್ವಾಮಿ ಅವರನ್ನು ಸಚಿವಸ್ಥಾನದಿಂದ ವಜಾಗೊಳಿಸಬೇಕೆಂದು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಸೋಮನಗೌಡ್ರ ಪಾಟೀಲ, ಕಾರ್ಯದಶರ್ಿ ಮುತ್ತು ಜಡಿ, ಅಂದಪ್ಪ ಬಿಚ್ಚೂರ, ಪರಶುರಾಮ ಅಬ್ಬಿಗೇರಿ, ಮೈಲಾರಪ್ಪ ಕೋಟೆಣ್ಣವರ, ಕುಮಾರ ಮಾರನಬಸರಿ, ಸತೀಶ ಗಿಡ್ಡಹನುಮಣ್ಣವರ, ಆನಂದ ಹಂಡಿ, ಮಲ್ಲೇಶ ಬಿಂಗಿ, ವಿನಯ ಮಾಯಣ್ಣವರ, ಅಂಬರೀಷ ಪುರದ, ಮಲ್ಲಪ್ಪ ಅಸುಂಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.