ಕೊಪ್ಪಳ 12: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಸಚಿವರಾದ ಅನಂತಕುಮಾರ್ ಅವರು ನಿಧನರಾಗಿದ್ದು, ಕೊಪ್ಪಳ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸೋಮವಾರದಂದು ಮೌನಾಚರಣೆಯನ್ನು ಆಚರಿಸಲಾಯಿತು. ಮಧು ಮೇಳ ಕಾರ್ಯಕ್ರಮದ ಉದ್ಘಾಟನೆಯನ್ನು ರದ್ದು ಪಡಿಸಿ, ರೈತರಿಗೆ ಹಾಗೂ ಸಾರ್ವಜನಿಕರ ಅನುಕೂಲವಾಗುವಂತೆ ಜೇನು ಪ್ರದರ್ಶನ ಮತ್ತು ಮಾರಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಯಿತು.
ಕೇಂದ್ರ ಸಚಿವರಾದ ಅನಂತಕುಮಾರ್ ಅವರ ನಿಧನ ಹಿನ್ನೆಲೆ ರಾಜ್ಯ ಸಕರ್ಾರವು ಎಲ್ಲಾ ಸಕರ್ಾರಿ ಕಛೇರಿ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸೋಮವಾರದಂದು ರಜೆ ಘೋಷಿಸಿದ್ದು, ಅಲ್ಲದೇ ನ. 14 ರವರೆಗೆ ರಾಜ್ಯಾದ್ಯಂತ ಶೋಕವನ್ನು ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಾರ್ವಜನಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳನ್ನು ಆಚರಿಸಲಾಗುವುದಿಲ್ಲ ಎಂದು ರಾಜ್ಯ ಸಕರ್ಾರವು ಅಧಿಸೂಚನೆ ಹೊರಡಿಸಿದೆ. ಆದ್ದರಿಂದ ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ತೋಟಗಾರಿಕೆ ಕಛೇರಿ ಆವರಣದಲ್ಲಿ ನ. 12 ರಿಂದ 14 ರವರೆಗ ಆಯೋಜಿಸಲಾದ ಮಧು ಮೇಳ ಉದ್ಘಾಟನಾ ಸಮಾರಂಭವನ್ನು ರದ್ದು ಪಡಿಸಿ, ತಾಂತ್ರಿಕ ಕಾಯರ್ಾಗಾರವನ್ನು ಮುಂದೂಡಿ ರೈತರ ಮತ್ತು ಸಾರ್ವಜನಿಕ ಅನುಕೂಲಕ್ಕಾಗಿ ಜೇನು ಪ್ರದರ್ಶನ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವನ್ನು ಮಾಡಿಕೊಡಲಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿದರ್ೇಶಕರಾದ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.