ಮುಧೋಳ 11: ಯಾವುದೇ ವಿಷಯವಿರಲಿ,ಆ ವಿಷಯದ ಮೇಲೆ ನಿರರ್ಗಳವಾಗಿ ಮಾತನಾಡುವ ಕೌಶಲ್ಯವನ್ನು ಹೊಂದಿರಬೇಕು, ಮಾತಿನ
ಮೋಡಿಯಿಂದ ಜನರನ್ನು ತನ್ನಕಡೆ ಸೆಳೆಯುವಂತಿರಬೇಕು.ಪ್ರತಿಯೊಂದು ಮಾತು ಮೌಲ್ಯಾಧಾರಿತವಾಗಿರಬೇಕು.ಸ್ಥಳ,ಸಮಯ,ಸಂದರ್ಭಕ್ಕೆ ತಕ್ಕ ಹಾಗೆ ಮಾತನಾಡುವದನ್ನು ಕರಗತ ಮಾಡಿಕೊಂಡಿರಬೇಕು.ಜನ ಮೆಚ್ಚುಗೆ ಪಡೆಯುವಂತ ಮಾತನ್ನು ಯಾರು ಬೇಕಾದರೂ ಗೌರವಿಸುತ್ತಾರೆ.ಅಂತಹ ಮಾತುಗಾರಿಕೆಗೆ ಎಲ್ಲಿಲ್ಲದ ಬೇಡಿಕೆ ಇದ್ದೆ ಇರುತ್ತದೆ ಎಂದು ಗುಳೇದಗುಡ್ಡದ ಭಂಡಾರಿ ಮತ್ತು ರಾಠಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವ್ಹಿ.ಎನ್.ಧಾನಕಶಿರೂರ ಹೇಳಿದರು.
ಅವರು ಸೋಮವಾರ ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ದಿ.ಎಸ್.ಆರ್.ಕಂಠಿ ಅವರ ಸ್ಮರಣಾರ್ಥ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಮಟ್ಟದ ಚಚರ್ಾ ಸ್ಪಧರ್ೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ವ್ಯಕ್ತಿಯ ವ್ಯಕ್ತಿತ್ವ ಆತನ ಮಾತುಗಳಿಂದ ತಿಳಿದುಬರುತ್ತದೆ,ಉತ್ತಮ ಮಾತುಗಾರನಿಗೆ ಸಮಾಜದಲ್ಲಿ ಎಲ್ಲಿಲ್ಲದ ಬೇಡಿಕೆ ಇದ್ದೆ ಇರುತ್ತದೆ.ಶ್ರೇಷ್ಠ ಭಾಷಣಕಾರನು ಮಾಸ್ ಲೀಡರ್ ಆಗಿರುತ್ತಾನೆ,ಮಾಜಿ ಪ್ರಧಾನಿ ದಿ.ವಾಜಪೇಯಿ ಅವರು ಸಂಸತ್ನಲ್ಲಿ ಮಾತನಾಡಲು ಆರಂಭಿಸಿದರೆ ವಿರೋಧ ಪಕ್ಷದವರು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ಊದಾಹರಣೆ ಸಮೇತ ವಿವರಿ ಸಿದರು. ಕಾಲೇಜುಗಳ ಮಟ್ಟದಲ್ಲಿ ಇಂತಹ ಚಚರ್ಾ ಸ್ಪಧರ್ೆಗಳನ್ನು ಹಮ್ಮಿಕೊಳ್ಳುವದರ ಮೂಲಕ ವಿದ್ಯಾಥರ್ಿಗಳಲ್ಲಿ ಮಾತನಾಡುವ ಕಲೆಯನ್ನು ಗುರುತಿಸಿ ಪ್ರೊತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಬಹುಮಾನ ಪಡೆಯುವಗೊಸ್ಕರ ಭಾಗವಹಿಸದೆ ತನಗೊಂದು ವೇದಿಕೆ ಎಂದು ಭಾವಿಸಬೇಕು.ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದರು.
ಬಾಗಲಕೋಟ ಬಸವೇಶ್ವರ ಕಲಾ ಮಾಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಆರ್.ಪಾಟೀಲ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ವಿದ್ಯಾಥರ್ಿಗಳು ಪರಿಣಾಮಕಾರಿ ಮಾತನ್ನಾಡುವ ಕಲೆಯನ್ನು ಬೆಳಸಿಕೊಂಡರೆ ಮುಂದೊಂದು ದಿನ ಶ್ರೇಷ್ಠ ಭಾಷ ಣಕಾರನಾಗಿ ಹೊರಹೊಮ್ಮಲು ಸಾದ್ಯ ಎಂದರು.
ಬೆಂಗಳೂರಿನ ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಆಂಡ್ ಸಾಯನ್ಸ್ ಇಂಗ್ಲೀಷ ವಿಭಾಗದ ಮುಖ್ಯಸ್ಥ ಪ್ರೊ. ಶಿವುಕುಮಾರ ಗಣಾಚಾರಿ ಸ್ಪಧರ್ಾಳುಗಳನ್ನು ಉದ್ದೇಶಿಸಿ ಮಾತನಾಡಿ, ಭಾಷಣಕಾರನಿಗೆ ಎಲ್ಲ ಭಾಷೆಗಳ ಮೇಲೆ ಹಿಡಿತವಿರಬೇಕು, ತಾನಾ ಡುವ ವಿಷಯದ ಬಗ್ಗೆ ಪರಿಪೂರ್ಣ ಜ್ಞಾನವಿರಬೇಕು.ಮಾತನಾಡುವ ಕಲೆಯನ್ನು ಅರತಿರಬೇಕು,ಭಾಷಣ ಆರಂಭಿಸಿದರೆ ಮುಕ್ತಾಯವಾ ಗಿದ್ದೂ ಗೊತ್ತಾಗಿರಬಾರದು. ಹಾಗೆ ಮಾತನಾಡಬೇಕೆಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಎಸ್.ಆರ್.ಕಂಠಿ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾಥರ್ಿಗಳಿಗಾಗಿ ಹಮ್ಮಿಕೊಂಡಿ ರುವ ಚಚರ್ಾ ಸ್ಪಧರ್ೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಭಾಗವಹಿಸಬೇಕೆಂದರು.
ಕಾಲೇಜಿನ ಚಚರ್ೆ ಒಕ್ಕೂಟದ ಕಾಯರ್ಾಧ್ಯಕ್ಷ ಡಾ.ಅಪ್ಪು ರಾಠೋಡ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಂ.ಎನ್.ಪಾಟೀಲ ಅತಿಥಿಗಳನ್ನು ಪರಿಚಯಿಸಿದರು.ವಿದ್ಯಾಥರ್ಿನಿ ಮಂಗಲಾ ಸಂಕ್ರಟ್ಟಿ ಪ್ರಾರ್ಥನೆ ಹೇಳಿದರು. ಪ್ರೋ.ಮಲ್ಲಿಕಾಜರ್ುನ ಎಂ.ಹಿರೇಮಠ ಮತ್ತು ಪ್ರೊ.ವೀರೇಶ ಕಿತ್ತೂರ ನಿರೂಪಿಸಿದರು.ಡಾ.ಎಂ.ಆರ್.ಜರಕುಂಟಿ ವಂದಿಸಿದರು.