ತಿಗಡಿ ಗ್ರಾಮದಲ್ಲಿ ಮೇವು ಬ್ಯಾಂಕ ಉದ್ಘಾಟನೆ

ಮೂಡಲಗಿ 26:  ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ಮೂಡಲಗಿ ತಹಸೀಲ್ದಾರ ಮುರಳೀಧರ ತಳ್ಳಿಕೇರಿ ಮೇವು ಬ್ಯಾಂಕ ಉದ್ಘಾಟಿಸಿದರು.

         ತಿಗಡಿ ಗ್ರಾಮದ ರೇಷ್ಮೆ ಇಲಾಖೆ ಆವರಣದಲ್ಲಿ ರಿಯಾಯಿತಿ ದರದಲ್ಲಿ ಪೋರೈಸುವ ಮೇವು ಬ್ಯಾಂಕ ಉದ್ಘಾಟಸಿದ ತಹಶೀಲ್ದಾರ ಅವರು ಮಾತನಾಡಿ ಸರಕಾರದ ಅದೇಶದಂತೆ ಈ ಭಾಗದಲ್ಲಿರುವ ಮೇವಿನ ಕೊರತೆ ನೀಗಿಸಲು ಬ್ಯಾಂಕ ಆರಂಬಿಸಲಾಗಿದ್ದು  1ಕೆ.ಜಿಗೆ 3ರೂ ರಂತೆ ಮೇವು ಪೋರೈಸಲಾಗುವುದು.ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.

     ಈ ಸಮಯದಲ್ಲಿ ಕಂದಾಯ ನಿರೀಕ್ಷಕ ಎಮ್.ಆಯ್.ಹಿರೇಮಠ,ಸಹಾಯಕ ಕೃಷಿ ಅಧಿಕಾರಿ ಪಿ.ಜಿ.ನಿಡಗುಂದಿ,ಪಶು ವೈದ್ಯಾದಿಕಾರಿ ಮಹಾದೇವ ಕೌಜಲಗಿ,ಪಶು ಪರಿವೀಕ್ಷಕ ಡಾ.ನಂದಿ,ಗ್ರಾಮ ಲೆಕ್ಕಾದಿಕಾರಿ ಪಿ.ಜಿ.ಬಾರಿಮರದ,ಸಂದರ ಪೂಜೇರಿ,ಎಮ್.ಎ.ಮುಲ್ಲಾ, ಹಾಗೂ ಗ್ರಾ.ಪಂ.ಅದ್ಯಕ್ಷ,ಉಪಾದ್ಯಕ್ಷ,ಸದಸ್ಯರು ಇದ್ದರು.