ಮಾ. 1ರಂದು ವಧುವರರ ಸಮಾವೇಶ

ಲೋಕದರ್ಶನ ವರದಿ 

ಕೊಪ್ಪಳ 25: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಮಾ. 01ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವೀರಶೈವ ಲಿಂಗಾಯತ ವಧುವರರ ಸಮಾವೇಶ ನಡೆಯಲಿದೆ ಎಂದು ಕನರ್ಾಟಕ ವೀರಶೈವ ವಧು-ವರರ ಆನ್ವೇಷಣಾ ಕೇಂದ್ರದ ಅಧ್ಯಕ್ಷ ಶಿವಕುಮಾರ್ ಹಿರೇಮಠ ಹೇಳಿದರು.

ಅವರು ನಗರದ ಪತ್ರಿಕಾ ಭವನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಮತ್ತು ಪಾಲಕರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ನಿವೃತ್ತಿ ಅಧಿಕಾರಿ ವೀರೇಶಪ್ಪ ಹಾಳಕೇರಿ. ಕೊಪ್ಪಳ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಕಳಕನಗೌಡ ಪಾಟೀಲ್ ಆಗಮಿಸಲಿದ್ದಾರೆ. ಸಮಾವೇಶದಲ್ಲಿ ವಧು-ವರರನ್ನು ಪರಸ್ಪರ ಪರಿಚಯ ಮಾಡಿಕೊಡಲಾಗುವುದು. ಆಸಕ್ತ ವಧು-ವರರು ಹಾಗೂ ಪಾಲಕರನ್ನು ಸ್ಥಳದಲ್ಲಿ ಮಾತುಕತೆಗೆ ಅವಕಾಶ ಕಲ್ಪಸಿಕೊಡಲಾಗುವುದು. ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ಮಾಡಲಾಗುವುದು ಎಂದರು.

ವಧು-ವರರು ಒಂದು ಫೋಟೋ ಜಾತಕದೊಂದಿಗೆ ಈ ಸಮಾವೇಶದಲ್ಲಿ ಭಾಗವಹಿಸಿ, ವೀರಶೈವ ಲಿಂಗಾಯತ, ಜಂಗಮ, ಆರಾಧ್ಯರು, ಪಂಚಮಸಾಲಿ,  ಬಣಜಿಗ, ಆದಿಬಣಜಿಗ, ಶಿವಾಚಾರ್ಯ ಕುಂಬಾರ, ಸಾದರ, ಲಿಂಗಾಯತ ರೆಡ್ಡಿ, ಹೂಗಾರ, ಸೇರಿದಂತೆ ಎಲ್ಲಾ ಒಳಪಂಗಡಗಳು ಸಕರ್ಾರ, ಅರೆ-ಸಕರ್ಾರಿ ಎಂಜಿನಿಯರ್, ವೈದ್ಯರು, ವ್ಯಾಪಾರಸ್ಥರು, ಉದೋಗಸ್ಥರು ಸೇರಿದಂತೆ ಇತರರು ಭಾಗವಹಿಸುವರು ಇದರ ಸದುಪಯೋಗಪಡಿಸಿಕೊಳ್ಳಲು ಸಮಾಜ ಬಾಂಧವರಲ್ಲಿ ಕೋರಿದರು. ಹೆಚ್ಚಿನ ಮಾಹಿತಿಗಾಗಿ: 9663108606 ಸಂಪಕಿಸಬಹುದಾಗಿದೆ.