ಲೋಕದರ್ಶನ ವರದಿ
ಗದಗ 26: ಹಾಲುಮತ ಮಹಾಸಭಾ ಜಿಲ್ಲಾ ಘಟಕ ಹಾಗೂ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಇದೇ ಮಾ. 1 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮುಳಗುಂದ ರಸ್ತೆಯಲ್ಲಿರುವ ಶ್ರೀ ಕನಕ ಭವನದಲ್ಲಿ ಹಾಲುಮತ ಸಮಾಜದ 6 ನೇ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸಮಾವೇಶದಲ್ಲಿ ಬೆಂಗಳೂರ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಹಾವೇರಿ, ಬಾಗಲಕೋಟ, ಬಳ್ಳಾರಿ, ಬೆಳಗಾವಿ, ವಿಜಯಪುರ, ರಾಯಚೂರ ಜಿಲ್ಲೆಗಳು ಸೇರಿದಂತೆ ಗದಗ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 250 ಕ್ಕೂ ಹೆಚ್ಚು ವಧು-ವರರು ಆಗಮಿಸಲಿದ್ದಾರೆ. ಈ ಸಮಾವೇಶದಲ್ಲಿ ವಧು-ವರರಿಗೆ ಸಾಂಪ್ರದಾಯಕವಾಗಿ ಊಡಿತುಂಬಿ ಪರಿಚಯಿಸಲಾಗುವದು ಎಂದರು.
ಈ ಸಮಾವೇಶದಲ್ಲಿ ಬೇರೆ ಬೇರೆ ಊರುಗಳಿಂದ ವಧು-ವರರು ಆಗಮಿಸುವದರಿಂದ ಪಾಲಕರಿಗೆ ತಮ್ಮ ಮಕ್ಕಳಿಗೆ ಹಲವಾರು ಆಯ್ಕೆಗಳಿಗಾಗಿ ಇಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಪಾಲಕರಿಗೆ ಸಮಯದ ಉಳಿತಾಯ ಹಾಗೂ ಸೂಕ್ತ ವಧು-ವರರನ್ನು ಆಯ್ಕೆ ಮಾಡುವ ಸದಾವಕಾಶ ಇಲ್ಲಿ ನಿಮರ್ಿಸಲಾಗುತ್ತದೆ. ಈಗಾಗಲೇ ಹೆಸರು ನೋಂದಾಯಿಸುವ ಕಾರ್ಯ ಆರಂಭವಾಗಿದ್ದು. ಆಸಕ್ತರು ವಿದ್ಯಾನಿಧಿ ಪ್ರಕಾಶನ ನನಸು ಬಿಲ್ಡಿಂಗ್ ಜೆ.ಟಿ.ಮಠ ರಸ್ತೆ ಗದಗದಲ್ಲಿ ಸದಸ್ಯತ್ವ ಶುಲ್ಕದೊಂದಿಗೆ ಹೆಸರನ್ನು ನೋಂದಾಯಿಸಬೇಕು ಎಂದು ರುದ್ರಣ್ಣ ಗುಳಗುಳಿ ಅವರು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷ ಪ್ರಲ್ಹಾದ ಹೊಸಳ್ಳಿ, ಉಪಾಧ್ಯಕ್ಷ ಸೋಮನಗೌಡ್ರ ಪಾಟೀಲ, ಮುತ್ತು ಜಡಿ, ಪ್ರದೇಶ ಕುರುಬರ ಸಂಘ ಯುವ ಘಟಕದ ಅಧ್ಯಕ್ಷ ಹೇಮಂತ ಗಿಡ್ಡಹನುಮಣ್ಣವರ, ರಮೇಶ ಹೊನ್ನಿನಾಯ್ಕರ, ಆನಂದ ಹಂಡಿ, ಸತೀಶ ಗಿಡ್ಡಹನುಮಣ್ಣವರ, ವಿನಯಕುಮಾರ, ಗಂಗಿಮಡಿ ಕುಮಾರ ಮಾರನಬಸರಿ, ಎನ್.ಎಂ.ಅಂಬಲಿವರ, ಅಂದಪ್ಪನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು