ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳನ್ನು ಗುರುತಿಸಲು MRPS ಆಗ್ರಹ

MRPS demand to identify manual scavengers under Municipal Corporation

ಹುಬ್ಬಳ್ಳಿ 06: ಮಾನ್ಯ ಸರ್ವೋಚ್ಛ ನ್ಯಾಯಾಲಯವು ಡಾ.ಬಲರಾಮ ಸಿಂಗ್ ಪ್ರಕರಣದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ 324/2024 ರ ಪ್ರತಿ ನೀಡಿರುವ ತನ್ನ ತೀರ​‍್ಿನ ಅನ್ವಯ ದೇಶದ್ಯಾಂತ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳನ್ನು ಗುರುತಿಸಲು ಮರುಸಮೀಕ್ಷೆ ನಡೆಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಆದೇಶ ಮಾಡಿರುವ ಹಿನ್ನೆಲೆಯಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ ವೃತ್ತಿಯಲ್ಲಿದ್ದವರನ್ನು ಗುರುತಿಸಲು ಸೂಕ್ತ ಕ್ರಮವನ್ನು ವಹಿಸಿ, ಅವರಿಗೆ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013 ರ ಅಡಿಯಲ್ಲಿ ನಿಗದಿಪಡಿಸಿದ ಸೌಲಭ್ಯಗಳು ತಲುಪಲು ಸಹಾಯ ಒದಗಿಸಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ಒಖಕಖ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಸೇರಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತರಿಗೆ, ಪಾಲಿಕೆಯ ಹಿರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಮಲ್ಲಿಕಾರ್ಜುನ ಬಿ ಎಂ ಮತ್ತು ವಲಯ ಕಛೇರಿ 5 ರ ಉಪ ಆಯುಕ್ತರಾದ ಆನಂದ ಕಾಂಬ್ಳೆ ಅವರ ಮೂಲಕ ಮನವಿ ಪತ್ರ ಸಲ್ಲಿಸಿದರು.  

ಹು.ಧಾ.ಮ ಪಾಲಿಕೆ ಸದಸ್ಯೆಯರಾದ ಸೀಮಾ ಸಿದ್ದು ಮೊಗಲಿಶೆಟ್ಟರ್ ಮತ್ತು ಸುನೀತಾ ಸಂಜಯ ಮಾಳವದಕರ ಬೆಂಬಲಪೂರ್ವಕವಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಒಖಕಖ ರಾಜ್ಯ ವಕ್ತಾರ ಮತ್ತು ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಮಂಜುನಾಥ ಕೊಂಡಪಲ್ಲಿಯವರು “ಎಂ.ಎಸ್ ಕಾಯ್ದೆ 2013 ರ ಅಡಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳನ್ನು ಗುರುತಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ವತಿಯಿಂದ 2015 ಮತ್ತು 2018 ರಲ್ಲಿ ಬೃಹತ್ ಸಮೀಕ್ಷೆ ನಡೆದಿತ್ತು ಮತ್ತು ಆಗ ಅವಳಿನಗರದ ಸುಮಾರು 1600 ಜನರು ನೀಡಿದ್ದ  ಆರ್ಜಿಗಳನ್ನು ಸ್ವೀಕರಿಸಿದ ನಂತರ ಮುಂದಿನ ಹಂತದ ಪರೀಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡದಿದ್ದ ಕಾರಣ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳ ಪಟ್ಟಿಯಲ್ಲಿ ಅವರು ಯಾರು ಸೇರೆ​‍್ಡಗೊಳ್ಳದೆ ನೂರಾರು ಜನರಿಗೆ ಅನ್ಯಾಯವಾಗಿತ್ತು. ದಶಕಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಈ ಹಿಂದೆ ಇದ್ದ ಒಣ /ಅನೈರ್ಮಲ್ಯ /ಗುಂಡಿ ಶೌಚಾಲಯಗಳು ಮತ್ತು ತೆರೆದ ಚರಂಡಿಗಳನ್ನು ಸ್ವಚ್ಛಗೊಳಿಸುವ ಸೇವೆ ಸಲ್ಲಿಸಿದ್ದ ನೂರಾರು ಜನರು ಅನೈರ್ಮಲ್ಯತೆ ಮತ್ತು ಸೌಲಭ್ಯಗಳ ಕೊರತೆಯಿಂದ ಅಕಾಲಿಕ ಸಾವಿಗೆ ತುತ್ತಾಗಿರುವ ಅಸಂಖ್ಯ ಉದಾಹರಣೆಗಳು ನಮ್ಮ ಮುಂದಿದೆ ಮತ್ತು ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಎಂ.ಎಸ್ ಕಾಯ್ದೆಯ ಯಾವುದೇ ಸೌಲಭ್ಯಗಳು ಇಲ್ಲಿಯವರೆಗೆ ದೊರೆಯದೆ ಹೋಗಿರುವುದು ಆಡಳಿತ ಯಂತ್ರ ಮತ್ತು ವ್ಯವಸ್ಥೆಯ ವೈಫಲ್ಯವೆಂದೇ ಪರಿಗಣಿಸಬೇಕಾಗುತ್ತದೆ.  

ಆದರೆ ಈಗ ಮಾನ್ಯ ಸರ್ವೋಚ್ಚ ನ್ಯಾಯಲಯವು ಮರು ಸಮೀಕ್ಷೆ ನಡೆಸಲು ಆದೇಶ ನೀಡಿರುವುದು ಒಂದು ಹೊಸ ಆಶಾ ಕಿರಣ ಮೂಡಿಸಿದೆ, ಆದ್ದರಿಂದ ಪಾಲಿಕೆಯ ವತಿಯಿಂದ ಸೂಕ್ತ ಕ್ರಮ ವಹಿಸಿ ಬಾಧಿತರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.ಹಿರಿಯ ಮುಖಂಡರಾದ ಸಿದ್ದಣ್ಣ ಮೊಗಲಿಶೆಟ್ಟರ್, ಸಂಜಯ ಮಾಳವಾದಕರ ಮತ್ತು ಒಖಕಖ ಧಾರವಾಡ ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣ ಎಂ, ಕರ್ನಾಟಕ ಪರಿಶಿಷ್ಟ ಕುಲಬಾಂಧವರ ಒಕ್ಕೂಟದ ಕಾರ್ಯಾಧ್ಯಕ್ಷರಾದ ಗೋವಿಂದ ಬೆಲ್ಡೋಣಿ, ಮುಖಂಡರಾದ ರಂಗನಾಯಕ ತಪೇಲ, ಪ್ರಕಾಶ ಹುಬ್ಬಳ್ಳಿ, ಸುರೇಶ ಸೌದುಲ್, ರಾಜೇಶ ಮಂತ್ರಗಾರ, ವೆಂಕಟೇಶ ಭೂಮಪಲ್ಲಿ, ಸೀತಾರಾಮ ಹರಿಜನ, ಕುಲ್ಲಾಯಪ್ಪ ಮಂತ್ರಿ, ಹರೀಶ ಅನಂತಪುರ, ಅನಿಲ ಆತ್ಮಕೂರ, ಓಬಳೇಶ ಪಾಮಡಿ, ಲಕ್ಷ್ಮಿ ಹರಿಜನ, ಮೈತ್ರ ಸೌದುಲ್, ಪಕ್ಕೀರಮ್ಮ ಭಂಡಾರಿ ಮುಂತಾದವರು ಭಾಗವಹಿಸಿದ್ದರು.