ಶೇಡಬಾಳ 22: ಕಾಗವಾಡ ಪಟ್ಟಣದ ಸುಮಿತ ಕಲ್ಲಪ್ಪ ಖೋತ ಇತನು 2017 ಜುಲೈ 16ರಂದು ಮಹಾರಾಷ್ಟ್ರದಲ್ಲಿ ಜರುಗಿದ ಮಹಾರಾಷ್ಟ್ರ ಲೋಕಸೇವಾ ಆಯೋಗ ಪೋಲಿಸ್ ಉಪನಿರೀಕ್ಷಕ (ಎಂ.ಪಿ.ಎಸ್.ಸಿ.) ಪರೀಕ್ಷೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡು ಉತ್ತೀರ್ಣನಾಗಿದ್ದಾನೆ. ಕನರ್ಾಟಕದ ಗಡಿ ಭಾಗದ ಯುವಕನ ಸಾಧನೆಯನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು ಸತ್ಕರಿಸಿ ಸನ್ಮಾನಿಸಿವೆ.
ಬುಧವಾರ ದಿ. 20 ರಂದು ಕಾಗವಾಡ ಪಟ್ಟಣದ ವಿದ್ಯಾಸಾಗರ ಶಿಕ್ಷಣ ಸಮಿತಿ ಮತ್ತು ಬ್ರಹ್ಮನಾಥ ಕೋ ಆಫ್ ಕ್ರೆಡಿಟ್ ಸೊಸೈಟಿಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಸುಮಿತ ಖೋತರನ್ನು ಸತ್ಕರಿಸಿ ಸನ್ಮಾನಿಸಲಾಯಿತು.
ಸುಮಿತ ಖೋತ ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದವನಾಗಿದ್ದು ಕೊಲ್ಹಾಪೂರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಬಿ.ಎಸ್.ಸಿ. ಪದವಿ ಪಡೆದುಕೊಂಡಿದ್ದಾನೆ. ಮೊದಲಿನಿಂದಲೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊಂದಿರುವ ಇತನು 2017 ಜುಲೈ 16ರಂದು ಮಹಾರಾಷ್ಟ್ರದಲ್ಲಿ ಜರುಗಿದ ಎಂ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಕುಳಿತುಕೊಂಡಿದ್ದನು. 650 ಸ್ಥಾನಗಳಿಗಾಗಿ ಜರುಗಿದ ಈ ಪರೀಕ್ಷೆಯಲ್ಲಿ ಸುಮಾರು 3 ಲಕ್ಷ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಮೆಡಿಕಲ್ ಹಾಗೂ ಪ್ರಥಮ ಟೆಸ್ಟ್ನಲ್ಲಿ 3 ಲಕ್ಷ ವಿದ್ಯಾಥರ್ಿಗಳ ಪೈಕಿ 25 ಸಾವಿರ ವಿದ್ಯಾಥರ್ಿಗಳು ಮಾತ್ರ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹತೆ ಪಡೆದುಕೊಂಡಿದ್ದರು. ಇವರಲ್ಲಿ ಸುಮಿತ ಖೋತ ಇತನು ಮಹಾರಾಷ್ಟ್ರ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡು ಕನರ್ಾಟಕದ ಕೀತರ್ಿ ಪತಾಕೆಯನ್ನು ಹಾರಿಸಿದ್ದಾನೆ. ಇತನ ಸಾಧನೆಯನ್ನು ಹಲವಾರು ಗಣ್ಯರು ಮೆಚ್ಚಿ ಅಭಿನಂದಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಪಿಎಸ್ಐ ಆಗಿ ಸುಮೀತ ಖೋತ ಇತನು ಸೇವೆ ಸಲ್ಲಿಸಲಿದ್ದಾನೆ.
ಬ್ರಹ್ಮನಾಥ ಕೋ ಆಫ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ವಿಜಯಕುಮಾರ ಖೋತ, ವಿದ್ಯಾಸಾಗರ ಶಿಕ್ಷಣ ಸಮಿತಿಯ ವಿದ್ಯಾಸಾಗರ ಮಾನಗಾಂವೆ, ವಿಜಯ ಕರೋಲೆ, ಅಣ್ಣಾಸಾಬ ಬೋಸಗೆ, ಅರುಣ ಕಿನಂಗೆ, ಪ್ರಕಾಶ ಮಾಲಗತ್ತೆ, ಸುರೇಶ ಪೇರುಜೈನ, ರಾಜು ದತ್ತು ಅಡುರಕರ, ಜಿತೇಂದ್ರ ವಿದ್ಯಾಧರ ಕರವ, ಸುನೀಲ ಮಹಾವೀರ ಮಾಲಗಾಂವೆ, ಆರತಿ ಅಭಿಜಿತ ಚೌಗುಲೆ, ಪ್ರಕಾಶ ಶ್ರೀಮಂಧರ ಮಾಲಗಾಂವೆ, ರಾವಸಾಬ ಬಾಹು ಕೋಳೆಕರ, ಬಾಳಕೃಷ್ಣ ಸಂತರಾವ ಭಜಂತ್ರಿ, ಶಂಕರ ಭೀಮಾ ಗಸ್ತಿ, ಸೊಸಾಯಿಟಿಯ ಪ್ರಧಾನ ಕಾರ್ಯದಶರ್ಿ ರಾಜೇಂದ್ರ ಖೋತ ಸೇರಿದಂತೆ ಸಿಬ್ಬಂದಿ ವರ್ಗ, ಸದಸ್ಯರು, ಗ್ರಾಮಸ್ಥರು ಇದ್ದರು.
ಪೋಟೊ ಶಿಷರ್ಿಕೆ: 21(ಶೇಡಬಾಳ-1): ಕಾಗವಾಡದ ಬ್ರಹ್ಮನಾಥ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡು ಉತ್ತೀರ್ಣನಾಗಿರುವ ಸುಮಿತ ಖೋತರನ್ನು ಸತ್ಕರಿಸಲಾಯಿತು