ಏರ್ ಇಂಡಿಯಾ ಚೇರಮನ್ ಭೇಟಿ ಮಾಡಿದ ಸಂಸದ ಪ್ರಕಾಶ್ ಹುಕ್ಕೇರಿ ಬೆಳಗಾವಿ-ಬೆಂಗಳೂರು ವಿಮಾನ ಸೌಲಭ್ಯ ವಿಸ್ತರಣೆಗೆ ಮನವಿ

ಬೆಳಗಾವಿ: ಬೆಳಗಾವಿ-ಬೆಂಗಳೂರು ನಡುವೆ ವಾರದಲ್ಲಿ ಮೂರು ದಿನ ಇರುವ ವಿಮಾನ ಸಂಚಾರವನ್ನು ಆರು ದಿನಗಳಿಗೆ ವಿಸ್ತರಿಸಬೇಕು ಎಂದು ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಅವರು ಏರ್ ಇಂಡಿಯಾ ಚೇರಮನ್ ಹಾಗೂ ವ್ಯವಸ್ಥಾಪಕ ನಿದರ್ೇಶಕರಾದ ಪ್ರದೀಪಸಿಂಗ್ ಖರೋಲಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ನವದೆಹಲಿಯಲ್ಲಿ ಇತ್ತೀಚೆಗೆ ಏರ್ ಇಂಡಿಯಾ ಚೇರಮನ್ ಹಾಗೂ ವ್ಯವಸ್ಥಾಪಕ ನಿದರ್ೇಶಕ ಪ್ರದೀಪಸಿಂಗ್ ಖರೋಲಾ ಅವರನ್ನು ಖುದ್ದಾಗಿ ಭೇಡಿ ಮಾಡಿದ ಸಂಸದ ಹುಕ್ಕೇರಿ ಅವರು, ಬೆಳಗಾವಿ-ಬೆಂಗಳೂರು ವಿಮಾನ ಸಂಚಾರ ಸೌಲಭ್ಯವನ್ನು ವಿಸ್ತರಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಇತ್ತೀಚೆಗಷ್ಟೇ 130 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಮೇಲ್ದಜರ್ೆಗೇರಿಸಿದೆ. ಪ್ರಯಾಣಿಕರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ವಾರದಲ್ಲಿ ಆರು ದಿನಗಳ ಕಾಲ ವಿಮಾನ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಂತಿರುವ ಬೆಳಗಾವಿ ನಗರದಲ್ಲಿ ವಾಯುಪಡೆ, ಭೂಸೇನೆ, ಗಡಿಭದ್ರತಾ ಪಡೆ ಸೇರಿದಂತೆ ಕೇಂದ್ರ ಸಕರ್ಾರದ ಹಲವಾರು ಕಚೇರಿಗಳಿವೆ.

ಇದಲ್ಲದೇ ವ್ಯಾಪಾರ-ವಹಿವಾಟು, ಕೈಗಾರಿಕೋದ್ಯಮ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಬೆಳಗಾವಿ ಪ್ರಮುಖ ನಗರವಾಗಿರುವುದರಿಂದ ವರ್ಷವಿಡೀ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸದ್ಯಕ್ಕೆ ವಾರದಲ್ಲಿ ಮೂರು ದಿನ ಇರುವ ವಿಮಾನ ಸಂಚಾರವನ್ನು ಆರು ದಿನಗಳಿಗೆ ವಿಸ್ತರಿಸಬೇಕು ಎಂದು ಸಂಸದ ಪ್ರಕಾಶ್ ಹುಕ್ಕೇರಿ ಅವರು ಮನವಿ ಮಾಡಿಕೊಂಡಿದ್ದಾರೆ.

ವಿಮಾನ ಸಂಚಾರ ವಿಸ್ತರಿಸುವಂತೆ ಕೋರಿ ಏರ್ ಇಂಡಿಯಾ ಚೇರಮನ್ ಹಾಗೂ ವ್ಯವಸ್ಥಾಪಕ ನಿದರ್ೇಶಕರಿಗೆ ಸಂಸದ ಪ್ರಕಾಶ ಹುಕ್ಕೇರಿ ಅವರು ಮನವಿ ಪತ್ರವನ್ನೂ ನೀಡಿದ್ದಾರೆ.