ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಧ್ವನಿ ಎತ್ತಿದ ಶಾಸಕ : ಪಠಾಣ

MLA who raised his voice about the grievances of the constituency: Pathana

ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಧ್ವನಿ ಎತ್ತಿದ ಶಾಸಕ : ಪಠಾಣ

ಶಿಗ್ಗಾವಿ 17 : ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಯಾಸೀರ ಅಹ್ಮದಖಾನ ಪಠಾಣ ಮೊದಲ ಬಾರಿಗೆ ಸೂಫಿ ಸಂತರನ್ನು ನೆನೆದು ಹಾಗೂ ಕ್ಷೇತ್ರದ ಜನತೆಗೆ ಧನ್ಯವಾದಗಳನ್ನು ಅರ​‍್ಿಸಿ ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಧ್ವನಿ ಎತ್ತಿದರು. ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ, ಗದಗ, ಧಾರವಾಡದಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಲ್ಲ ಆದ್ದರಿಂದ ವರದಾ ಮತ್ತು ಬೇಡ್ತಿ ನದಿ ಜೋಡಣೆಯಿಂದ ರೈತರಿಗೆ ಶಾಶ್ವತ ನೀರಾವರಿ ಯೋಜನೆಯ ಅನುಕೂಲವಾಗಲಿದೆ ಎಂದರು.  

 ಸವಣೂರ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸುಟ್ಟು ಹೋದ ರೈತರ ಪಹಣಿ ಹಾಗೂ ಇನ್ನಿತರ ದಾಖಲೆಗಳು ಹಾನಿಯಾಗಿದ್ದು ರೈತರು ದಾಖಲೆಗಳಿಗಾಗಿ ಅಲೆದಾಡುವು ಪರಿಸ್ಥಿತಿ ನಿರ್ಮಾಣವಾಗಿದ್ದು ಪರಿಹಾರ ಕಂಡುಕೊಳ್ಳಲು ಕಂದಾಯ ಸಚಿವರ ಗಮನಕ್ಕೆ ತಂದರು.ಬೆಣ್ಣೆ ಹಳ್ಳ ಉಗಮ ಸ್ಥಾನ ಹೊಸುರ ಆಗಿರುವ ಕಾರಣ ಅದರ ಕಾಮಗಾರಿ ಹೊಸುರ ಗ್ರಾಮದಿಂದಲೇ ಪ್ರಾರಂಭವಾಗಲಿ ಎಂದು ವಿನಂತಿಸಿದರು.50,000 ಸಾವಿರ ಜನಸಂಖ್ಯೆ ಇರುವ ಸವಣೂರ ಪಟ್ಟಣದ ತಾಲೂಕು ಆಸ್ಪತ್ರೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಆರೋಗ್ಯ ಸಚಿವರಿಗೆ ಮನವಿ ಮಾಡಿದರು. ಶಿಗ್ಗಾವಿ,ಸವಣೂರ,ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಭಾಧ್ಯಕ್ಷರಿಗೆ ಶಾಸಕರು ಗಮನ ಸೆಳೆದರು.