ಕಾಗವಾಡ 09: ಕಾಗವಾಡಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಇವರ ಉಗಾರ ಗ್ರಾಮದ ಅವರ ಅಭಿಮಾನಿ ಬಳಗದವತಿಯಿಂದ ಆಯೋಜಿಸಲಾದ ಚಾಲ್ತಿ ಇರುವ ಶಾಸಕರ ಟೆನಿಸ್ ಬಾಲ್ ಫುಲ್ ಪಿಚ್ಚ್ ಕ್ರಿಕೆಟ್ ಪಂದ್ಯಾವಳಿವನ್ನು ಉಗಾರಖುರ್ದ ಪುರಸಭೆ ಅಧ್ಯಕ್ಷ ಶಶಿಕಾಂತ ಕಾಂಬಳೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.
ಬುಧವಾರರಂದು ವಿಹಾರ ಕ್ರೀಡಾಂಗಣದಲ್ಲಿ ಟೆನಿಸ್ ಬಾಲ್ ಫುಲ್ ಪಿಚ್ಚ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.
50 ಸಾವಿರ ಪ್ರಥಮ ಬಹುಮಾನ:
8 ಓವರ್ಗಳನ್ನು ಹೊಂದಿರುವ ಕ್ರಿಕೆಟ್ ಸ್ಪಧರ್ೆಯಲ್ಲಿ ಯಶಸ್ವಿಗೊಂಡ ತಂಡಕ್ಕೆ ಪ್ರಥಮ ಬಹುಮಾನ 50 ಸಾವಿರ ಶ್ರೀಮಂತ(ತಾತ್ಯಾ) ಪಾಟೀಲ ಅಭಿಮಾನಿ ಸಂಘದ ವತಿಯಿಂದ ನೀಡಲಿದ್ದಾರೆ. ದ್ವೀತಿಯ ಬಹುಮಾನ ಉಗಾರ ಪುರಸಭೆ ಅಧ್ಯಕ್ಷ ಶಶಿಕಾಂತ ಕಾಂಬಳೆ ಇವರಿಂದ 25 ಸಾವಿರ ರೂ. ನೀಡಲಿದ್ದಾರೆ. ತೃತೀಯ ಹಾಗೂ ಚತುರ್ಥ ಬಹುಮಾನ ಹಾರೂಗೇರಿ ಪಟ್ಟಣ ಪಂಚಾಯತಿ ಅಧ್ಯಕ್ಷ ಕಲಾವತಿ ನಿಡೋಣಿ ಇವರು ತಲಾ 7501ರೂ. ನೀಡಲಿದ್ದಾರೆ.
ಸ್ಪಧರ್ೆಯಲ್ಲಿಯ ವಿಜೇತರಾದ 4 ತಂಡಗಳಿಗೆ ಉಗಾರದ ಸ್ಪಧರ್ೆಯ ಸಂಯೋಜಕರು ಮತ್ತು ಜೆಡಿಎಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಮಕ್ತುಮಸಾಬ್ ಹೊಸಮನಿ ಇವರಿಂದ ವಿಶೇಷ ಟ್ರಾಫಿ ನೀಡಲಿದ್ದಾರೆ ಎಂದು ಸ್ಪಧರ್ೆ ಆಯೋಜಕ ಸಾಗರ ಕಾಂಬಳೆ ಹೇಳಿದರು.
ರಾಜ್ಯ ಮಟ್ಟದ ತಂಡಗಳು, ಸ್ಪಧರ್ೆಯಲ್ಲಿ ಭಾಗಿ:
ಸ್ಪಧರ್ೆಯಲ್ಲಿ ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಮುಧೋಳ, ರಬಕವಿ, ಬನಹಟ್ಟಿ, ಚಿಕ್ಕೋಡಿ, ರಾಯಬಾಗ, ಗೋಕಾಕ, ಅಥಣಿ, ಮಹಾರಾಷ್ಟ್ರದ ಮಿರಜ, ಜಯಸಿಂಗಪುರ, ಶಿರೋಳ, ಇಚಲಕರಂಜಿ ಸೇರಿದಂತೆ 32 ತಂಡಗಳು ಸ್ಪಧರ್ಿಸಲಿದ್ದಾರೆ. ಕನರ್ಾಟಕ ಮತ್ತು ಹುಬ್ಬಳ್ಳಿ ಪ್ರಿಮಿಯಮ್ ಲೀಗ್ದಲ್ಲಿ ಆಡಿರುವ ಆಟಗಾರರು ಸ್ಪಧರ್ಿಸಲಿದ್ದಾರೆ.
15 ಅಗಸ್ಟ್ ರಂದು ಅಂತಿಮ ಸ್ಪಧರ್ೆ:
ಬುಧವಾರ ದಿ. 8 ರಿಂದ ಪ್ರಾರಂಭವಾದ ಸ್ಪಧರ್ೆಯಲ್ಲಿ ಪ್ರತಿದಿನ 7 ತಂಡಗಳು ಸ್ಪಧರ್ಿಸಲಿದ್ದಾರೆ. ಅಗಸ್ಟ್ 15 ರಂದು ಅಂತಿಮ ಸ್ಪಧರ್ೆ ಜರುಗಲಿದೆ.
ಸ್ಪಧರ್ೆ ಉದ್ಘಾಟಕರಾಗಿ ಉಗಾರ ಪುರಸಭೆ ಸದಸ್ಯರಾದ ಬಾಳಕೃಷ್ಣ ಪಾಟೀಲ, ಪ್ರಫೂಲ್ ಥೋರುಶೆ, ಅವಿನಾಶ ಮೋರೆ, ಅಲ್ತಾಫ್ ನದಾಫ್, ಸುಜಯ್ ಫರಾಕಟ್ಟೆ, ಡಾ.ಕಿರಣ ಹಿರೇಮಠ, ಕಲಮೇಶ ನಾಯಿಕ್, ರಾಜು ಕಾಂಬಳೆ, ಬಾಬು ಹೊಸಮನಿ, ಸಾಗರ ಕಾಂಬಳೆ, ಮಲಿಕ್ ಹೊಸಮನಿ, ಅಜಯ್ ಕಾಂಬಳೆ, ಕಿರಣ ಜಾಧವ ಸೇರಿದಂತೆ ಅನೇಕರು ಇದ್ದರು.