ಕರ ಏರಿಕೆ, ಅಕ್ಕಿ ಇಳಿಕೆಗೆ ಶಾಸಕರ ಅಸಮಾಧಾನ


ಬೆಂಗಳೂರು 10: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ಗೆ ಮಂಗಳವಾರ ವಿಧಾನಸಭೆಯ ಅಧಿವೇಶನದಲ್ಲಿ ಸಮ್ಮಿಶ್ರ ಸಕರ್ಾರದ ಆಡಳಿತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿ ಪುನರ್ ಪರಿಶೀಲನೆ ನಡೆಸಲು ಮನವಿ ಮಾಡಿದ್ದಾರೆ.  

ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಅವರು ಮಾತನಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿದ್ದರಾಮಣ್ಣ ಅವರ ಯೋಜನೆಗಳನ್ನು ಮುಂದುವರಿಸಿದ್ದಕ್ಕೆ ಅಭಿನಂದನೆಗಳು. ಆದರೆ ಬಡವರ ಪಾಲಿನ ಅನ್ನಭಾಗ್ಯದ ಆಕ್ಕಿಯನ್ನು 2 ಕೆಜಿ ಇಳಿಸಬಾರದಿತ್ತು. 2 ಕೆಜಿ ಕೊಡುವುದರಿಂದ ಸಕರ್ಾರಕ್ಕೆ ಹೆಚ್ಚು ಹೊರೆಯೇನು ಆಗುವುದಿಲ್ಲ. ಬೇಕಾದರೆ ನಿಮ್ಮ ಪಾಲಿನ ಇನ್ನೂ ಒಂದು ಕೆಜಿ ಹೆಚ್ಚಿಗೆ ಕೊಡಿ. ಇದು ನನ್ನ ಸವಿನಯ, ವಿನಮ್ರ ವಿನಂತಿ ಎಂದರು.  

ಜೆಡಿಎಸ್ ಶಾಸಕ ವಿಶ್ವನಾಥ್ ಅವರು ಮಾತನಾಡಿ ಬಜೆಟ್ನಲ್ಲಿ  ಸಾಲ ಮನ್ನಾ, ತ್ರಿವಿಧ ದಾಸೋಹಿ ಧರ್ಮಪೀಠಗಳಿಗೆ 25 ಕೋಟಿ ರೂಪಾಯಿ ಅನುದಾನ ಸೇರಿದಂತೆ ಹಲವು ಸಿಹಿ ನೀಡಿದ್ದಾರೆ, ಆದರೆ  ತೈಲ ಕರ ಭಾರ ಸಾಮನ್ಯ ಜನರಿಗೆ ಹೊರೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.