ಯು.ಜಿ ಕೇಬಲ್ ಅಳವಡಿಕೆ ಕಾಮಗಾರಿಗೆ ಶಾಸಕ ಯಾದವಾಡ ಭೂಮಿಪೂಜೆ

ಲೋಕದರ್ಶನ ವರದಿ

ರಾಮದುರ್ಗ 19: ಪಟ್ಟಣದಲ್ಲಿರುವ ಚರಂಡಿಗಳ ದುರಸ್ಥಿಯೊಂದಿಗೆ, ಚರಂಡಿಯ ಮೇಲೆ ಸ್ಲ್ಯಾಬ್ ಹಾಕಿ, ಪೇವರ್ಸ್ ಅವಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ತೇರ ಬಜಾರದ ಸುತ್ತಮುತ್ತಲಿನ ವಾರ್ಡಗಳಲ್ಲಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಪಟ್ಟಣದ ತೇರಬಜಾರದಲ್ಲಿ ಶನಿವಾರ ಸುಮಾರು 2 ಕೋಟಿ ವೆಚ್ಚದಲ್ಲಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗುತ್ತಿಗೆದಾರರು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು. ವಾರ್ಡಗಳು ಹಿರಿಯ ನಾಗರಿಕರು ಕಾಮಗಾರಿಯ ಮೇಲೆ ನಿಘಾ ವಹಿಸಿ ಮೇಲಿಂದ ಮೇಲೆ ಪರಿಶೀಲನೆ ಮಾಡುತ್ತಿರಬೇಕು. ಕಾಮಗಾರಿ ಕಳಪೆಯಾಗಿದ್ದು ಕಂಡುಬಂದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಅದನ್ನು ಸರಿಪಡಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸಹಾಯಕವಾಗುತ್ತದೆ ಎಂದರು.

ಪುರಸಭೆ ಮೀಸಲಾತಿ ವಿವಾದಕ್ಕೆ ಶೀಘ್ರ ಮುಕ್ತಿ:

ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಮೀಸಲಾತಿ ವಿವಾದ ಕೋರ್ಟನಲ್ಲಿದ್ದು ಕಳೆದ ಒಂದು ವರ್ಷಗಳಿಂದ ಆಡಳಿತ ಮಂಡಳಿ ರಚನೆಯಾಗದೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ಮುತವರ್ಜಿ ವಹಿಸಿ ಅದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಶೀಘ್ರ ಮೀಸಲಾತಿ ವಿವಾದಕ್ಕೆ ಮುಕ್ತಿ ದೊರೆಯಲಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಮುಖಂಡರಾದ ಎಸ್.ಜಿ. ಮಾಳವಾಡ, ಪುರಸಭೆ ಸದಸ್ಯರಾದ ರಘುನಾಥ ರೇಣಕೆ, ಶಾನೂರ ಯಾದವಾಡ, ರಾಜು ಬೆಂಬಳಗಿ, ಸಂಗೀತಾ ರಾಯಭಾಗ, ಲಕ್ಷ್ಮೀಬಾಯಿ ಹಂಚಾಟೆ, ರಾಘು ದೊಡಮನಿ ಸೇರಿದಂತೆ ಸರ್ವ ಪುರಸಭೆ ಸದಸ್ಯರು ಹಾಗೂ ಮುಖಂಡರು ಇತರರಿದ್ದರು.