ಲೋಕದರ್ಶನ ವರದಿ
ಅಥಣಿ 09: ನೂತವಾಗಿ ಆಯ್ಕೆಯಾದ ಶಾಸಕ ಮಹೇಶ ಕುಮಠಳ್ಳಿಯವರು ಪಟ್ಟಣದ ಸರಕಾರಿ ವಿವಿಧ ಇಲಾಖೆಗಳಿಗೆ ಭೇಟಿ ನೀಡುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಇಂದು ಸ್ಥಳೀಯ ಸಾರ್ವಜನಿಕ ಆಸ್ಪತ್ರಗೆ ಭೇಟಿ ನೀಡಿದ ಶಾಸಕರು ವಿವಿಧ ವಿಭಾಗಳಿಗೆ ವೈದ್ಯರ ಸಂಗಡ, ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸಿದರು.
ತಾಲೂಕಿನ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಏಕೆಂದರೆ ಇಲ್ಲಿ 100 ಹಾಸಿಗೆಯುಳ್ಳ ದೊಡ್ಡ ಆಸ್ಪತ್ರೆ ಇದ್ದರೂ ದೂರುಗಳು ಬರುತ್ತಿವೆ. ಅಗತ್ಯ ಸವಲತ್ತುಗಳ್ನು ಮತ್ತು ಸಕರ್ಾರದ ಯೋಜನೆಗಳನ್ನು ಪಾರದರ್ಶಕವಾಗಿ ಜನರಿಗೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಶಾಸಕರು ಸೂಚಿದರು. ಬಳಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದರು.. ಈ ವೇಳೆ ಆಸ್ಪತ್ರೆ ವೈದ್ಯಾಧಿಕಾರಿ ಡಾ ಚಿದಾನಂದ ಮೇತ್ರಿ ಮಾತನಾಡಿ, ನಮ್ಮಲ್ಲಿ ವಿವಿಧ ವಿಭಾಗದ ವೈದ್ಯರು ಸೇರಿದಂತೆ 75ಕ್ಕೂ ಅಧಿಕ ಸಿಬ್ಬಂಧಿ ಅಗತ್ಯವಿದೆ. ಈಗ ಅರ್ಧಷ್ಟು ಇಲ್ಲ ಕೇವಲ 34 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದು ತಿಳಿಸಿದರು.
ಈ ಸಮಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಶಾಸಕರು ಪಟ್ಟಣದ, ಅಥಣಿ ಆಸ್ಪತ್ರೆ ಅತ್ಯಂತ ಸ್ವಚ್ಛತೆಯಿಂದ ಕೂಡಿದ್ದು, ಸಿಬ್ಬಂಧಿ ಕೊರ`ತೆಯನ್ನು ಹೊರತು ಪಡೆಸಿ, ಇಲ್ಲಿ ಎಲ್ಲ ರೀತಿ ಅನುಕೂಲಕರವಾಗಿದೆ, ಇಲ್ಲಿ ವೈದ್ಯರ ಕೊರತೆ ಇದ್ದು, ಇದರಿಂದ ಬಡ ರೋಗಿಗಳು ಪರಿತಪಿಸುವಂತಾಗಿದೆ, 14 ಜನ ವೈದ್ಯರಲ್ಲಿ ಸುಮಾರು 7 ಜನರ ಕೊರತೆ ಇದೆ. ಅದರಲ್ಲಿ ಸರ್ಜನ್, ಕಣ್ಣಿನ ಡಾಕ್ಟರ್ ಸೇರಿದಂತೆ ಇನ್ನಿತರ ವಿಭಾಗಗಳ ಡಾಕ್ಟರಗಳು ಇಲ್ಲವಾಗಿದ್ದಾರೆ ಸುಸಜ್ಜಿತ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಯ ಆಸ್ಪತ್ರೆಯ ನ್ನಾಗಿಸಿ ಮೇಲ್ದಜರ್ೆಗೆ ಏರಿಸಲಾಗುವುದು ಆದರೆ ಸಿಬ್ಬಂದಿ ಕುರಿತು ಸಕರ್ಾರ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದು ಸಿಬ್ಬಂದಿ ಕೊರತೆ ಪರಿಹಾರಿಸಲಾಗುವುದು ಹಾಗೂ ಆಸ್ಪತ್ರೆಗೆ ಅಗತ್ಯವಿರುವ ಸವಲತ್ತುಗಳಿಗಾಗಿ ಸಕರ್ಾರದ ಮಟ್ಟದಲ್ಲಿ ಚಚರ್ಿಸಿ ಸಾರ್ವಜನಿಕ ಆಸ್ಪತ್ರೆ ಅನುಕೂಲಮಾಡಿ ಕೋಡಲು ಪ್ರಯತ್ನಿಸುವುದಾಗಿ ಹೇಳಿದರು.