ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಾದವಾಡ ಭೂಮಿಪೂಜೆ

ಲೋಕದರ್ಶನ ವರದಿ

ರಾಮದುರ್ಗ, 24: ಪಟ್ಟಣದ ಕಿಲಬನೂರ, ನೇಕಾರಪೇಠೆ, ಗಾಂಧಿ ನಗರದ ವಿವಿಧ ವಾರ್ಡಗಳಲ್ಲಿ ಸುಮಾರು 44 ಲಕ್ಷ ವೆಚ್ಚದಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಶಾಸಕ ಮಹಾದೇವಪ್ಪ ಯಾದವಾಡ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ವಾರ್ಡಗಳ ಸದಸ್ಯರು ಪಕ್ಷಾತೀತವಾಗಿ ಜನತೆಯ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಬೇಕು. ಅಂತರ್ಜಲ ಮಟ್ಟದ ಕುಸಿತದಿಂದ ಮುಂಬರುದ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ನೀರನ್ನು ಅವಶ್ಯಕತೆಗೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರಹ್ಲಾದ ಬಡಿಗೇರ, ಶಂಕರ ಬನ್ನೂರ, ಗೀತಾ ದೊಡಮನಿ, ರಾಘು ದೊಡಮನಿ, ನಾಗರಾಜ ಕಟ್ಟಿಮನಿ, ಮುಖಂಡರಾದ ಬಿ.ಆರ್. ದೊಡಮನಿ (ರಡ್ಡಿ), ಮಲ್ಲಿಕಾಜರ್ುನ ದೂಪದ, ಪುರಸಭೆ ಅಭಿಯಂತರ ಸುಭಾಸ ಚೌಗಲಾ ಸೇರಿದಂತೆ ಇತರರಿದ್ದರು.