ಲೋಕದರ್ಶನವರದಿ
ಬ್ಯಾಡಗಿ07: ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ 20 ಕೋಟಿ ರೂಗಳ ವೆಚ್ಚದಲ್ಲಿ 195 ಶಾಲಾ ಕಟ್ಟಡಗಳ ನಿಮರ್ಾಣಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ನಿಮರ್ಿತಿ ಕೇಂದ್ರದ ವತಿಯಿಂದ 15 ಲಕ್ಷ ರೂಗಳ ವೆಚ್ಚದಲ್ಲಿ ಪ್ರೌಢಶಾಲೆಯ ನೂತನ ಕಟ್ಟಡಕ್ಕೆ ಹಾಗೂ ತಡಸ ಗ್ರಾಮದಲ್ಲಿ 15 ಲಕ್ಷ ರೂಗಳ ವೆಚ್ಚದ ವಾಲ್ಮೀಕಿ ಸಮುದಾಯದ ಭವನ ಹಾಗೂ ರಾಣೆಬೆನ್ನೂರ ತಾಲೂಕಿನ ಕೂನಬೇವು ಗ್ರಾಮದಲ್ಲಿ 15 ಲಕ್ಷ ರೂಗಳ ವೆಚ್ಚದ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿಮರ್ಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಮುಂದಾಗಿದ್ದು ಶಿಕ್ಷಕರು ಸಹ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾ ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ರವೀಂದ್ರ ಪಟ್ಟಣಶೆಟ್ಟಿ, ಶಿವಬಸಪ್ಪ ಕುಳೇನೂರ, ಚಂದ್ರಪ್ಪ ಮುಚ್ಚಟ್ಟಿ, ಹೇಮಂತ ಶೆಟ್ಟರ, ಬಸವರಾಜ ಹಲಗೇರಿ, ಶೇಖರಗೌಡ ಗೌಡ್ರ, ಪಿಡಿಓ ಲತಾ ತಬರೆಡ್ಡಿ, ನಿಮರ್ಿತಿ ಕೇಂದ್ರ ಅಭಿಯಂತರ ಎಚ್. ಡಿ. ಶಾಂತಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.