ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ತಮ್ಮಣ್ಣವರ
MLA Thammanavara performed Bhoomi Puja for works in various villages
ಲೋಕದರ್ಶನ ವರದಿ
ಪಾಲಬಾವಿ 07 : ಕಾಂಗ್ರೆಸ್ ಪಕ್ಷವು ಬಡವರ ಕಣ್ಣೀರು ಒರೆಸುವ ಪಕ್ಷವಾಗಿದೆ. ಸರ್ಕಾರವು ಘೋಷಿಸಿದಂತೆ ಪಂಚ ಗ್ಯಾರಂಟಿಗಳಿಂದ ರಾಜ್ಯದ ಮಹಿಳೆಯರು ಸೇರಿದಂದು, ಕೂಲಿ ಕಾರ್ಮಿಕರು, ಬಡಪಾಯಿ ದುಡಿಯುವ ಕೈಗಳು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ನುಡಿದಂತೆ ನಡೆಯುವ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ಜನಪರ ಯೋಜನೆಗಳಿಗೆ ಪಂಚ ಗ್ಯಾರಂಟಿಗಳಿಗೆ ಬೆಂಬಲ ಸೂಚಿಸದ ಜನತೆಯು ಮೊನ್ನೆ ನಡೆದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟ ಉಪ ಚುನಾವಣೆಯ ಮಹಾ ಸಮರದಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಗೆಲುವು ಪಡೆದಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಕಳಶಪ್ರಾಯವಾಗಿದೆ. ಮಾನ್ಯ ಅಭಿವೃದ್ಧಿ ಹರಿಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಹೇಬರು, ಹಾಗೂ ರಾಜ್ಯದ ಅನೇಕ ಸಚಿವರುಗಳ ದೂರ ದೃಷ್ಟಿಯಿಂದ ಎಲ್ಲ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯಾದಲ್ಲಿ ಸಮರ್ಕವಾಗಿ ಜನಸಾಮಾನ್ಯರಿಗೆ ತಲುಪುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣನವರ ಹೇಳಿದರು. ಅವರು ಕುಡಚಿ ಮತಕ್ಷೇತ್ರದಲ್ಲಿ ಮಂಗಳವಾರ (ಮೇ.07) ರಂದು ಕುಡಚಿ ಮತಕ್ಷೇತ್ರದ ಗುಂಡವಾಡ, ಯಲ್ಪಾರಟ್ಟಿ, ಶಿರಗೂರ, ಹಂದಿಗುಂದ ಹಾಗೂ ಕಟಕಬಾವಿ ಗ್ರಾಮಗಳಲ್ಲಿ ವಿವಿಧ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ರೂಪಾಯಿ 8.47ಕೋಟಿ (8ಕೋಟಿ 47ಲಕ್ಷ) ವೆಚ್ಚದಲ್ಲಿ ಕಾಮಗಾರಿಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕುರ್ಚಿ ಬ್ಲಾಕ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹನುಮಂತ ಗಸ್ತಿ, ಶಿವಪ್ಪ ಬಿ.ಪಾಟೀಲ, ಗ್ರಾಪಂ ಸದಸ್ಯ ಮುತ್ತಪ್ಪ ತಳವಾರ, ಯುವ ನಾಯಕ ಮಲಗೌಡ ಪಾಟೀಲ, ಪಿಡಬ್ಲ್ಯೂಡಿ ಸಹಾಯಕ ಅಭಿಯಂತರ ಜಿ.ಎಂ.ಗೂಳಪ್ಪನವರ, ಐನುಸಾಬ್ ಜಮಾದಾರ, ಸುರೇಶ ಕೂಟಗಿ, ಮಹಾದೇವ ಅಜ್ಜಪ್ಪಗೋಳ, ಹಾಲಸಿದ್ದೇಶ್ವರ ದೇವಸ್ಥಾನದ ಅರ್ಚಕ ಶ್ರೀಮಂತ ಪೂಜಾರಿ, ದಲಿತ ಮುಖಂಡ ಲಕ್ಕಪ್ಪ ಹೊಸಾಲಿ, ಬಸಪ್ಪ ಹುಕ್ಕೇರಿ, ನಾಗಪ್ಪ ಪೂಜಾರಿ, ರವಿ ಗಸ್ತಿ, ಹನುಮಂತ ಘಂಟಿ, ಅಶೋಕ ಗುಡ್ಡದಮನಿ, ಮಹೇಶ ಉಳ್ಳಾಗಡ್ಡಿ, ಧರೆಪ್ಪ ಬಿರಾಜ, ಬಸವರಾಜ ಮೇತ್ರಿ, ಲಕ್ಷ್ಮಣ ಜಗದಾಳ, ಆನಂದ ಬನಾಜ, ಲಕ್ಷ್ಮಣ ಕರಿಗಾರ, ಮಲ್ಲಪ್ಪ ಪೂಜಾರಿ, ಕುಡಚಿ ಮತಕ್ಷೇತ್ರದ ಯಲ್ಪಾರಟ್ಟಿ, ಪರಮಾನಂದವಾಡಿ, ಶಿರುಗೂರ ಗುಂಡವಾಡ, ಕುಡಚಿ ಪಟ್ಟಣ ಕೂಡುವ ರಸ್ತೆಗೆ 3.75 ಕೋಟಿ ರೂಗಳ ವೆಚ್ಚದಲ್ಲಿ ಡಾಂಬರಿಕರಣ ಕಾಮಗಾರಿಗೆ ಭೂಮಿಪೂಜೆ, ಶಿರಗೂರ ಗ್ರಾಮದಿಂದ ಕುಡಚಿ ಪಟ್ಟಣ, ಶಿರಗೂರ, ಹಾಲುಶಿರಗೂರ, ಚಿಂಚಲಿ ಪಟ್ಟಣ ಕೂಡುವ ರಸ್ತೆ, ಶಿರಗೂರ ಗ್ರಾಮದ ಸೇತುವೆ ನಿರ್ಮಾಣ ಮತ್ತು ಆಲಖನೂರ ವಾಯಾ ರಸ್ತೆ ಸುಧಾರಣೆ 1.02ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಭೂಮಿಪೂಜೆ, ಕ್ಷೇತ್ರದ ಗಡಿಭಾಗ ಹಂದಿಗುಂದ- ಸುಲ್ತಾನಪುರ ಮುಖ್ಯ ರಸ್ತೆಯಿಂದ ಕೆನಾಲ್ ಮೇಲೆ ಹಂದಿಗುಂದ ಕಪ್ಪಲಗುದ್ದಿ ಮುಖ್ಯ ರಸ್ತೆಗೆ 01ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ, ಕೊನೆಯದಾಗಿ ಕಟಕಬಾವಿ ಗ್ರಾಮದಲ್ಲಿ 2.70ಕೋಟಿ ರೂ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ಸೇರಿದಂತೆ ಒಟ್ಟು 8.47ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಜನಪ್ರಿಯ ಶಾಸಕರು ಮಹೇಂದ್ರ ತಮ್ಮಣ್ಣವರ ಪೂಜೆಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ, 