ಶಾಸಕ ತನ್ವೀರ್ ಸೇಠ್ ಡಿಸ್ಚಾರ್ಜ

 ಮೈಸೂರು, ನ 26 ಮಾರಣಾಂತಿಕ ದಾಳಿಯ ಹಿನ್ನೆಲೆಯಲ್ಲಿ ಕಳೆದ ವಾರ ಆಸ್ಪತ್ರೆಗೆ ದಾಖಗಿದ್ದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ತನ್ವೀರ್ ಸೇಠ್ ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ  ಮಾಡಲಾಗಿದೆ. "ಕೆಲ ನರವೈಜ್ಞಾನಿಕ ಸಮಸ್ಯೆಗಳು, ಧ್ವನಿ ಪೆಟ್ಟಿಗೆ ಮತ್ತು ಕಿವಿಯ ಎಲುಬಿನ ಸಮಸ್ಯೆ ಹೊರತುಪಡಿಸಿದರೆ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದ್ದು,   ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಉಪೇಂದ್ರ ಶೆಣೈ ಅವರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ಈವರೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಮುಖ್ಯ ಆರೋಪಿ ಫರ್ಹ ನ್ ಪಾಷಾ ಸೇರಿದಂತೆ ಆರು ಜನರನ್ನು ವಶಕ್ಕೆ ತೆಗೆದುಕೊಂಡಿದೆ.