ಸಂಬರಗಿ, 19 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ ನಂತರದ ಬಾಲಕರ ವಸತಿನಿಲಯ ಕೊಕಟನೂರ ಇಲ್ಲಿ ವ್ಯಾಸಂಗ ಮಾಡುತ್ತಿರುವ ಐದು ವಿದ್ಯಾರ್ಥಿಗಳು ಭಾರತೀಯ ಸೇನಾ ಅಗ್ನಿವೀರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸೇನೆಗೆ ಆಯ್ಕೆಯಾದ ಪ್ರಯುಕ್ತ ಅಥಣಿ ಶಾಸಕ ಲಕ್ಷ್ಮಣ ಸವದಿ ಇವರು ಗೌರವಿಸಿ ಸನ್ಮಾನಿಸಿದರು.
ಕೋಕಟನುರ ಗ್ರಾಮದ ವಸತಿನಿಲಯದ ಐದು ಜನ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಓದುತ್ತಾ ಪರೀಕ್ಷೆ ಎದುರಸಿ ಪಾಸಾಗಿರುವದು ನಮಗೆ ಹೆಮ್ಮೆಯ ವಿಷಯವಾಗಿದೆ. ದೇಶದ ರಕ್ಷಣೆಯ ಸೇವೆ ಸಲ್ಲಿಸುವ ಸದಾವಕಾಶ ತಮಗೆ ದೊರಕಿದ್ದು ಇದು ನಿಮ್ಮ ಭಾಗ್ಯ ಎಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ಸವದಿ ಗ್ರಾಮದ ಮಹಾಂತೇಶ ಶಿವಪ್ಪ ಬಾಗೆಣ್ಣವರ, ಕೊಕಟನೂರ ಗ್ರಾಮದ ಭೈರ್ಪ ಸೋಮರಾಯ ಸಾವಳಗಿ, ದರ್ಶನ ಶಾಂತಿನಾಥ ರೋಡಣ್ಣವರ, ಶಿರಹಟ್ಟಿ ಗ್ರಾಮದ ಸಮ್ಮೇದ ಭರಮಪ್ಪ ಬಳೋಜಿ ಹಾಗೂ ಬಳವಾಡ ಗ್ರಾಮದ ಗಜಾನನ ಮಾಳಪ್ಪ ಮದಗುಣಕಿ ಭಾರತೀಯ ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ
ಈ ವಿದ್ಯಾರ್ಥಿಗಳನ್ನು ಉಪನಿರ್ದೇಶಕರರಾದ ಹರ್ಷ ಎಸ್, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ, ನಿಲಯ ಪಾಲಕರಾದ ಬಿ.ಆರ್. ಯಲ್ಲಟ್ಟ ಅಭಿನಂದಿಸಿದ್ದಾರೆ.