ಲೋಕದರ್ಶನ
ವರದಿ
ತಾಳಿಕೋಟೆ ತಾಲೂಕಿನ ನಾವದಗಿ 19 -ಕೊಳಿಹಾಳ ತಾಲೂಕು ಸರಹದ್ದಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಬುಧವಾರರಂದು ಭೂಮಿಪೂಜೆ
ನೆರವೇರಿಸಿ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ
ಶಾಸಕ ಸಾಸನೂರ ಅವರು ಬಹಳದಿನಗಳಿಂದ ದುರಸ್ಥಿ
ಕಾಣದೇ ನೆನೆಗುದಿಗೆಗೆ ಬಿದ್ದಿದ್ದ ನಾವದಗಿ-ಕೊಳಿಹಾಳ(ತಾಲೂಕಾಸರಹದ್ದಿ)ನ ರಸ್ತೆಯನ್ನು ಜಿಲ್ಲಾ
ಪಂಚಾಯತ್ ವಿಜಯಪುರ 2017-18 ನೇ ಸಾಲಿನ ನಬಾರ್ಡ(ಆರ್ಐಡಿಎಫ್-23) ಯೋಜನೆಯಡಿ 80 ಲಕ್ಷ ರೂ. ವೆಚ್ಚದಲ್ಲಿ
ಸುಮಾರು 2.50 ಕೀಲೋಮೀಟರ್ ರಸ್ತೆ ಸುಧಾರಣೆ ಕೈಗೊಳ್ಳಲಾಗುತ್ತಿದೆ ಈ ಕಾಮಗಾರಿಯನ್ನು ಅಚ್ಚುಕಟ್ಟಾಗಿ
ನಿರ್ವಹಿಸಿ ಕೊಡಲು ಗುತ್ತಿಗೆದಾರರಿಗೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಮಯದಲ್ಲಿ ಮುಖಂಡರುಗಳಾದ
ಭೀಮನಗೌಡ ನಾವದಗಿ, ರಾಜುಸೌಕಾರ ಇಬ್ರಾಂಪೂರ, ತಾ.ಪಂ.ಸದಸ್ಯ
ರಾಜುಗೌಡ ಕೊಳೂರ, ಸಿದ್ದನಗೌಡ ಕಾರಗನೂರ, ಪ್ರಶಾಂತ ಹಾವರಗಿ, ಸುಭಾಸ ಗುಂಡಕನಾಳ, ಭೀಮನಗೌಡ ಇಬ್ರಾಹಿಂಪೂರ, ನಿಂಗಣ್ಣ ದೇಸಾಯಿ, ಬಸಣ್ಣ ಇಬ್ರಾಂಪೂರ, ಬಸನಗೌಡ ಪಾಟೀಲ(ಲಕ್ಕುಂಡಿ), ಸಿದ್ದನಗೌಡ ಬಿರಾದಾರ, ಗುತ್ತಿಗೆದಾರ ದೇಶಮುಖ ಮೊದಲಾದವರು ಇದ್ದರು.