ಬಳ್ಳಾರಿ, ಜೂ 06: ನಗರದ ಮಾರುತಿ ನಗರದಲ್ಲಿ ಡಿ.ಎಂ.ಎಫ್ ಅನುದಾನದಡಿಯಲ್ಲಿ 22.50 ಲಕ್ಷ ರೂ.ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಬಳ್ಳಾರಿ ನಗರದ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಹಾಗೂ ದಮ್ಮೂರು ಶೇಖರ್ ಅವರು ಭೂಮಿ ಪೂಜೆಯನ್ನು ಶುಕ್ರವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಈರಪ್ಪ ಬಿರಾದಾರ, ಸಹಾಯಕ ಅಭಿಯಂತರರಾದ ನಯೀಮ್, ಮುಖಂಡರಾದ ವೀರಶೇಖರ ರೆಡ್ಡಿ, ಶ್ರೀನಿವಾಸ ಮೊತ್ಕಲ್ ರೆಡ್ಡಿ, ಮಲ್ಲನಗೌಡ, ಕ್ರೀಷ್ಣಾ ರೆಡ್ಡಿ ಹಾಗೂ ಸಾರ್ವಜನಿಕರು ಸೇರಿದಂತೆ ಇತರರು ಇದ್ದರು