ಅಥಣಿ 08: ಸ್ವಾಮಿಗಳಾದವರಿಗೆ ಸಮಾಜದ ಪರವಾದ ನಿಲುವಿರಬೇಕೇ ಹೊರತು ಒಬ್ಬ ವ್ಯಕ್ತಿಯ ಪರವಾದ ನಿಲುವಿರಬಾರದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ, ಬಸನಗೌಡ ಪಾಟೀಲ(ಯತ್ನಾಳ) ವಿಚಾರವಾಗಿ ಜಯ ಮೃತ್ಯುಂಜಯ ಸ್ವಾಮಿಗಳ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು.
ಅವರು ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮದಬಾವಿ ಶನೇಶ್ವರ ದೇವಾಲಯದ ಹತ್ತಿರ 2 ಕೋಟಿ ರೂ ವೆಚ್ಚದ ಮದಬಾವಿ-ತೆವರಟ್ಟಿ ರಸ್ತೆ ಕಾಮಗಾರಿ ಹಾಗೂ ಖಿಳೇಗಾಂವ ಶ್ರೀ ಬಸವಣ್ಣ ದೇವಾಲಯದ ಹತ್ತಿರ ಶಿರೂರ-ಖಿಳೇಗಾಂವ 5 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಸ್ವಾಮಿಗಳು ಪಂಚಮಸಾಲಿ ಸಮಾಜದ ಮೀಸಲಾತಿಗೆ ಹೋರಾಟ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ರಾಜಕೀಯವಾಗಿ ಒಬ್ಬ ವ್ಯಕ್ತಿಯ ಪರವಾಗಿ ಹೋರಾಟ ಮಾಡುವುದು ತಪ್ಪು. ಸ್ವಾಮಿಗಳಾದವರು ಇಡೀ ಸಮಾಜದ ಆಸ್ತಿ. ಅವರು ಒಬ್ಬ ವ್ಯಕ್ತಿಗೆ ಮೀಸಲಾಗಿರುವುದು ಸರಿಯಲ್ಲ ಎಂದ ಅವರು ಮಾಜಿ ಸಚಿವ ಹಾಗೂ ವಿಜಯಪೂರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿರುವುದು ಅವರ ಪಕ್ಷದ ಆಂತರಿಕ ವಿಷಯ ಇಂತಹ ಸಂದರ್ಭದಲ್ಲಿ ಕೂಡಲ ಸಂಗಮದ ಶ್ರೀ ಜಯ ಮೃತ್ಯೂಂಜಯ ಸ್ವಾಮೀಜಿ ಬಸನಗೌಡ ಪಾಟೀಲ (ಯತ್ನಾಳ) ಪರ ರಾಜೀಕೀಯ ಹೇಳಿಕೆ ವಿಚಾರ ಸರಿಯಲ್ಲ ಎಂದು ತಮ್ಮ ಅಸಮಾಧನ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ ಬಸನಗೌಡ ಪಾಟೀಲ (ಯತ್ನಾಳ)ಕರೆ ತರುವ ವಿಚಾರವಾಗಿ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿ ಹೈ ಕಮಾಂಡ್ ನನಗೆ ಆದೇಶ ಮಾಡಿದರೆ ನಾನು ಯತ್ನಾಳ ಅವರ ಬಳಿ ಮಾತನಾಡುತ್ತೇನೆ. ಆದರೆ ಯತ್ನಾಳ ಅವರು ನಾನು ಸತ್ತರೂ ಕಾಂಗ್ರೆಸ್ ಸೇರಲ್ಲ ಅಂತಿದ್ದಾರೆ ಅವರು ಬಂದರೆ ನಾನು ವಯಕ್ತಿಕವಾಗಿ ಸ್ವಾಗತ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಸರಕಾರ ಪಂಚಮಸಾಲಿ 2ಎ ಮೀಸಲಾತಿ ನೀಡುವಲ್ಲಿ ಹಿಂದೇಟು ಹಾಕುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು ನಮ್ಮ ಸರಕಾರ ಮೀಸಲಾತಿ ವಿಚಾರ ಚಿಂತನೆ ನಡೆಸಿದೆ. ನಾನು ಮುಖ್ಯಮಂತ್ರಿಗಳ ಜೊತೆ ಖುದ್ದಾಗಿ ಭೇಟ್ಟಿನೀಡಿ ಇದೇ ವಿಚಾರವಾಗಿ ಚರ್ಚೆ ಮಾಡುತ್ತೇನೆ. ಕೆಲವು ಕಾನೂನು ತೊಡಕುಗಳು ಇರುವ ಕಾರಣ ವಿಳಂಬವಾಗುತ್ತಿದೆ ಎಂದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಜಯಾನಂದ ಹಿರೇಮಠ, ಮಲ್ಲಿಕಾರ್ಜುನ ಮಗದುಮ್, ಗುತ್ತಿಗೆದಾರರಾದ ಆಯ್.ಜಿ,ಬಿರಾದಾರ, ಅರ್ಜುನ ನಾಯಿಕ, ಶಿವಾನಂದ ಸಂಕ್ರಟ್ಟಿ, ಶಿವಪುತ್ರ ನಾಯಿಕ, ಎಂ.ಬಿ.ಸಂಕ್ರಟ್ಟಿ, ಬಸು ನಾಯಿಕ, ಚನ್ನಪ್ಪ ಜಗದಾಳೆ,ವಿನಾಯಕ ಬಾಗಡಿ, ಖಂಡೇರಾವ್ ಘೋರೆ್ಡ ಈಶ್ವರ ಕುಂಬಾರೆ, ಕಾಮಗೌಡ ಪಾಟೀಲ, ನಿಜಗುಣಿ ಮಗದುಮ್, ಶಿವಾನಂದ ಮಗದುಮ್, ಸಂಜಯ ಅದಾಟೆ, ಅಶೋಕ ಪೂಜಾರಿ, ಸತೀಶ ಹೊನ್ನಗೋಳ, ಹೊನ್ನಪ್ಪ ಬಗಲಿ, ರಮೇಶ ಪಾಟೀಲ, ಸುನೀಲ ಚೌಗಲಾ, ಧರೆಪ್ಪ ದಿವಾನಗೋಳ, ಎಂ.ಎಸ್.ದೊಡ್ಡನ್ನವರ, ಸೇರಿದಂತೆ ಅನೇಕರು ಇದ್ದರು.