ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡರವರು ಮಕ್ಕಳೊಂದಿಗೆ ಊಟ ಸವಿದರು
ರಾಣಿಬೆನ್ನೂರ 14 : ತಾಲೂಕಿನ ನೂಕಾಪುರದ ಭಾರತರತ್ನ ಡಾ. ಬಿ. ಆರ್ . ಅಂಬೇಡ್ಕರ್ ವಸತಿ ಶಾಲೆಯ ನೂತನ ತರಗತಿ ಕಟ್ಟಡ ಉದ್ಘಾಟಿಸಿದ ಶಾಸಕ ಪ್ರಕಾಶ್ ಕೋಳಿವಾಡರವರು ಮಕ್ಕಳೊಂದಿಗೆ ಊಟ ಸವಿದರು. ಹುಗ್ಗಿ, ಅನ್ನ, ಸಾಂಬಾರು, ಪಲ್ಯ ಹಪ್ಪಳ ಸವಿದ ಶಾಸಕರು ಮಕ್ಕಳೊಡನೆ ಶಾಲಾ ವಿಷಯದ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ್ ವರಗಪ್ಪನವರ, ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಮಾಲತೇಶ್ ಬಾರ್ಕಿ, ಮುಖ್ಯಶಿಕ್ಷಕ ಶ್ರೀಕಾಂತ್ ಬಣಕಾರ, ಚಂದ್ರಶೇಖರ ಪುರದ, ಗ್ರಾಪಂ ಅಧ್ಯಕ್ಷ ವೆಂಕಟೇಶ್ ದೊಡ್ಮನಿ, ಸಿಪಿಐ ಪ್ರವೀಣಕುಮಾರ್ ಸೇರಿದಂತೆ ಶಾಲಾ ಸಿಬ್ಬಂದಿಗಳು ಮತ್ತಿತರರು ಇದ್ದರು.
ಫೋಟೊ:14ಆರ್‌ಎನ್‌ಆರ್02ರಾಣಿಬೆನ್ನೂರ:ತಾಲೂಕಿನ ನೂಕಾಪುರದ ಭಾರತರತ್ನ ಡಾ. ಬಿ. ಆರ್ . ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡರವರು ಮಕ್ಕಳೊಂದಿಗೆ ಊಟ ಸವಿದರು.