ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಕೆಲಸ ಶಾಸಕ ಪಾಟೀಲ

ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಕೆಲಸ ಶಾಸಕ ಪಾಟೀಲ  MLA Patil working continuously for the development of the education and medical sectors

ನೇಸರಗಿ 30 : ಸರ್ಕಾರಿ ಶಾಲೆ, ಪ್ರೌಢ, ಕಾಲೇಜು, ಪದವಿ ಶಿಕ್ಷಣ ಅಭಿವೃದ್ಧಿಗೆ ಮತ್ತು ಬಡ ಜನರಿಗೆ, ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ನಿರಂತರ ಕೆಲಸ ಮಾಡುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.  ಅವರು ಸಮೀಪದ ಹಣಬರಹಟ್ಟಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ. 14 ಲಕ್ಷ 50 ಸಾವಿರ ರೂಪಾಯಿಗಳ ಅನುಧಾನದ ಶಾಲಾ ಕೊಠಡಿ ಉದ್ಘಾಟನೆ ಮತ್ತು ನೂತನವಾಗಿ ರೂ. 55 ಲಕ್ಷ ಗಳಲ್ಲಿ ನೂತನವಾಗಿ  ನಿರ್ಮಾಣ ನೆರವೇರಲಿರುವ ಅಯುಷ್ಮಾನ ಅರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಈ ಭಾಗದ ಹಣಬರಹಟ್ಟಿ, ಮಾಸ್ತಮರ್ಡಿ, ಗಜಮನಾಳ, ಹೊಸಕೋಟಿ ಗ್ರಾಮದ ಜನರ ಅರೋಗ್ಯ ಸಂವರಕ್ಷಣೆ ದೃಷ್ಟಿಯಿಂದ ಅಯುಷ್ಮಾನ ಕೇಂದ್ರ ಸ್ಥಾಪನೆಗೆ ಆದ್ಯತೆ ನೀಡಿದ್ದು ಕಾಮಗಾರಿ ಮುಗಿದ ನಂತರ ಆಸ್ಪತ್ರೆಯ ಸದುಪಯೋಗ ಪಡೆಯಿರಿ ಎಂದರು.   ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಶಿವಾನಂದ ಕುಂಕುರ, ರಮೇಶ ಉಳವಿ, ಅಡಿವೆಪ್ಪ ಕೊಳದೂರ, ಶಿವಾನಂದ ಮಹಾಲಿಂಗಪುರ, ಮಂಜುನಾಥ ಕಾಳನಾಯ್ಕರ, ಸಂತೋಷ ಉಳವಿ, ಮಲ್ಲೇಶ ದಂಡಾಪುರ, ಕಾಶಿಮ್ ಜಮಾದಾರ, ಅಡಿವೆಪ್ಪ ಹಡಗಿನಹಾಳ, ಬಸವಣ್ಣೆಪ್ಪ ಗೌಡರ, ಈರಣ್ಣ ಬೀರಗಡ್ಡಿ, ಈರಣ್ಣ ಬಿಲ್, ವೀರೇಶ ಉಳವಿ, ಬಸವರಾಜ ಚಿಕ್ಕನಗೌಡ್ರ, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ / ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ವಿದ್ಯಾರ್ಥಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು  ಉಪಸ್ಥಿತರಿದ್ದರು.