ಶಾಸಕ ಪಠಾಣರಿಂದ ಮುಸ್ಲೀಂ ಸಶ್ಮಾನದ ರಸ್ತೆ ಭೂಮಿ ಪೂಜೆ

MLA Pathana performs road Bhoomi Puja in honour of Muslims

ಶಾಸಕ ಪಠಾಣರಿಂದ ಮುಸ್ಲೀಂ ಸಶ್ಮಾನದ ರಸ್ತೆ ಭೂಮಿ ಪೂಜೆ

ಶಿಗ್ಗಾವಿ 23 : ಪಟ್ಟಣದ ಮುಗಳಿ ರಸ್ತೆಯಲ್ಲಿರುವ ಮುಸ್ಲೀಂ ಸಮುದಾಯದ ಸಶ್ಮಾನಕ್ಕೆ ಸುಮಾರು 15 ವರ್ಷಗಳಿಂದ ರಸ್ತೆ ಮಾಡಲು ಸಮಿತಿಯವರು ಪರದಾಡಿದ್ದು ಅದನ್ನು ಅರಿತು ಅನುಧಾನ ಬಿಡುಗಡೆ ಗೋಳಿಸಲಾಗಿದೆ ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು.  ಪಟ್ಟಣದ ಖಬರಸ್ಥಾನದಲ್ಲಿ ನಡೆದ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾವೇರಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾವೇರಿ, ಪಟ್ಟಣದ ಮುಗಳಿ ರಸ್ತೆಯಿಂದ ಮುಸ್ಲಿಂ ಸಮುದಾಯದ ಸಶ್ಮಾನದವರೆಗೆ ಸಿ.ಸಿ.ರಸ್ತೆ ನಿರ್ಮಾಣದ ಕಾಮಗಾರಿಯ ಸುಮಾರು 62 ಲಕ್ಷ ಅನುಧಾನದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ಸಮಿತಿ ಸದಸ್ಯರು ನಿಂತು ನಿಮಗೆ ಅವಶ್ಯಕತೆ ತಕ್ಕ ಹಾಗೆ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಿ ಮತ್ತೇ ಅನುಧಾನದ ಅವಶ್ಯಕತೆ ಇದ್ದಲ್ಲಿ ನನಗೆ ತಿಳಿಸಿರಿ ಎಂದರು.   ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ, ಜಾಫರಖಾನ ಪಠಾಣ, ಕೆ.ಎಂ.ಎಫ್ ನಾಮನಿರ್ದೇಶಕ ಸದಸ್ಯ ಶಂಕರಗೌಡ ಪಾಟೀಲ, ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಬಾಬರ ಬೋವಾಜಿ, ನಧಾಪ ಸಂಘದ ಅಧ್ಯಕ್ಷ ಪೀರಸಾಬ ನಧಾಪ, ಶಿವಾನಂದ ಕುನ್ನೂರ, ಶಕೀಲ್ ಬೇಪಾರಿ, ಅತ್ತಾವುಲ್ಲಾ ಖಾಜೇಖಾನವರ, ಸಾಧಿಕ ಸವಣೂರ, ಸಾಧಿಕ ಮಲ್ಲೂರ, ಮುನ್ನಾ ಮಾಲ್ದಾರ, ಆಶೀಫ್ ಮೊಹ್ಮದಸಾಬನವರ, ಸರತಾಜ ಹಾನಗಲ್ಲ ಸೇರಿದಂತೆ ಸಮಾಜದ ಮೌಲ್ವಿಗಳು, ಮುಖಂಡರು, ಗುರು ಹಿರಿಯರು ಉಪಸ್ಥಿತರಿದ್ದರು.