ವಿದ್ಯಾಥರ್ಿ ದೆಶೆಯಲ್ಲೇ ಸಂವಹನ- ಉದ್ಯೋಗ ಸಂದರ್ಶನ ಕೌಶಲ್ಯ ರೂಢಿಸಿಕೊಳ್ಳುವಂತೆ ಶಾಸಕ ಓಲೇಕಾರ ಕರೆ


ಹಾವೇರಿ28: ಕಲಿಕಾ ಹಂತದಲ್ಲೇ ಇಂಗ್ಲೀಷ್ ಭಾಷಾ ಸಂವಹನ, ಸಂದರ್ಶನ ಎದುರಿಸುವ ಸಾಮಥ್ರ್ಯ, ವಿವಿಧ ವೃತ್ತಿಪರ ಕೌಶಲ್ಯ ತರಬೇತಿಯನ್ನು ಪಡೆದರೆ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ವಿದ್ಯಾಥರ್ಿಗಳು ಕಲಿಕೆಯ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವಂತೆ ಹಾವೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ನೆಹರು ಓಲೇಕಾರ ಅವರು ಕರೆ ನೀಡಿದರು.

ಗಾಂಧಿಪುರ ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ಹಾಗೂ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಉದ್ಯೋಗ ವಿನಿಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ಜಿಲ್ಲಾ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಉದ್ಯೋಗ ಪಡೆಯಲು ಇಂಗ್ಲೀಷ್ ಭಾಷೆಯ ಸಂವಹನ ಕಲೆ ಅತ್ಯವಶ್ಯವಾಗಿದೆ. ಇದರೊಂದಿಗೆ ವಿವಿಧ ವೃತ್ತಿ ಕೌಶಲ್ಯ ತರಬೇತಿ ಹೊಂದಿದವರಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ. ಆದರೆ ಗ್ರಾಮೀಣ ಪ್ರದೇಶದ ಬಹುಪಾಲು ವಿದ್ಯಾಥರ್ಿಗಳು ಉತ್ತಮ ಪದವಿ, ಹೆಚ್ಚಿನ ಅಂಕಹೊಂದಿದ್ದರು ಇಂಗ್ಲೀಷ್ ಭಾಷಾ ಬಳಕೆ, ಸಂದರ್ಶನ ಎದುರಿಸುವ ಕಲೆ ಗೊತ್ತಿಲ್ಲದೆ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣಕ್ಕಾಗಯೇ ಕ್ಯಾಂಪಸ್ಗಳಲ್ಲೇ ಉದ್ಯೋಗ ಮೇಳ ನಡೆಸಿ ಈ ಮೇಳದಲ್ಲಿ ವಿದ್ಯಾಥರ್ಿಗಳು ಭಾಗವಹಿಸುವ ಮೂಲಕ ಅನುಭವ ದೊರಕಿಸಿ ಕೊಡುವುದರೊಂದಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದೆ.  ಇಂತಹ ಕ್ಯಾಂಪಸ್ ಮೇಳಗಳಲ್ಲಿ ವಿದ್ಯಾಥರ್ಿಗಳು ಕಡ್ಡಾಯವಾಗಿ ಭಾಗವಹಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾನ್ವೆಂಟ್ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾಥರ್ಿಗಳು ಸುಲಭದಲ್ಲಿ ಇಂಗ್ಲೀಷ್ ವ್ಯವಹಾರಿಕ ಭಾಷೆಯಾಗಿ ಬಳಸುತ್ತಾರೆ. ಗ್ರಾಮೀಣ ಬಡ ವಿದ್ಯಾಥರ್ಿಗಳಿಗೆ ಇಂಗ್ಲೀಷ್ ಭಾಷೆ ಕಾದ ಕಬ್ಬಿಣದ ಸಲಾಕೆಯಂತೆ  ಕೀಳರಿಮೆಯಿಂದ ಬಳಲುತ್ತಾರೆ. ಸ್ಪಧರ್ಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಉದ್ಯೋಗ ಪಡೆಯಲು ವಿಫಲರಾಗುತ್ತಾರೆ. ಉತ್ತಮ ವಿದ್ಯಾರ್ಹತೆ ಹೊಂದಿದ್ದರು ಉದ್ಯೋಗವಿಲ್ಲದೆ ನಿರಾಶಾದಾಯಕವಾದ ಮನಸ್ಥಿತಿ ಹೊಂದಿರುತ್ತಾರೆ. ಬಡ ನಿರುದ್ಯೋಗಿಗಳ ನಿರಾಶಾದಾಯಕ ಮನಸ್ಥಿತಿ ತೊಡೆದುಹಾಕಿ ಸಂವಹನ ಸಾಮಥ್ರ್ಯ, ಸಂದರ್ಶನ ಎದುರಿಸುವ ಕುರಿತು ಸೂಕ್ತ ಮಾರ್ಗದರ್ಶನ, ಉದ್ಯೋಗ ಅವಕಾಶಗಳ ಮಾಹಿತಿ ಹಾಗೂ ವಿವಿಧ ವೃತ್ತಿಪರ ತರಬೇತಿಯ ಮೂಲಕ ಕೌಶಲ್ಯವನ್ನು ವೃದ್ಧಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಾದ್ಯಂತ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರವನ್ನು ಆರಂಭಿಸಿ ಆ ಮೂಲಕ ಉಚಿತವಾಗಿ ತರಬೇತಿಯನ್ನು ನೀಡುತ್ತಿದ್ದಾರೆ.

 ಹಾವೇರಿ ನಗರದಲ್ಲಿ ಕಳೆದ ಒಂದು ವರ್ಷದಿಂದ ಕೌಶಲ್ಯ ಕೇಂದ್ರ ತೆರೆಯಲಾಗಿದೆ. ಉದ್ಯೋಗ ಹಿಡಿಯಲು ಮಾರ್ಗದರ್ಶನ ಹಾಗೂ ತರಬೇತಿಗಳನು ಉಚಿತವಾಗಿ ನೀಡಲಾಗುತ್ತಿದೆ. ಕಲಿಯುತ್ತಿರುವ ನೀವು ಈ ಹಂತದಲ್ಲೇ ಕೌಶಲ್ಯ ಕೇಂದ್ರದ ಸಂಪರ್ಕ ಸಾಧಿಸಿ ವಿವಿಧ ವೃತ್ತಿಪರ ತರಬೇತಿಯನ್ನು ಉಚಿತವಾಗಿ ಪಡೆಯಬೇಕು. ಸಂದರ್ಶನ ಎದುರಿಸುವ ಮಾರ್ಗದರ್ಶನ ಪಡೆಯಬೇಕು. ಕ್ಯಾಂಪಸ್ಗಳಲ್ಲಿ ನಡೆಯುವ ಉದ್ಯೋಗ ಸಂದರ್ಶನದಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಬೇಕೆಂದು ಕರೆ ನೀಡಿದರು.

ವಿದ್ಯಾಥರ್ಿಗಳು ಕೀಳರಿಮೆಯಿಂದ ಹೊರಗೆ ಬರಬೇಕು. ಬದುಕಿನಲ್ಲಿ ಪ್ರಯತ್ನವಾದಿಗಳಾಗಬೇಕು. ನಿಶ್ಚಿತ ಗುರಿ ಸಾಧಿಸಲು ತಮ್ಮ ಸಾಮಥ್ರ್ಯ ಹಾಗೂ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಸಕರ್ಾರದ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಂಡು ಸ್ವ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯ  ಪ್ರೊ.ಬಿ.ಟಿ.ಲಮಾಣಿ ವಹಿಸಿದ್ದರು. ಪ್ಲೆಸ್ಮೆಂಟ್ ಅಧಿಕಾರಿ ಡಿ.ಟಿ.ಪಾಟೀಲ, ಉದ್ಯೋಗ ವಿನಿಮಯ ಇಲಾಖಾ ಅಧಿಕಾರಿ ರುದ್ರೇಶಗೌಡ, ನಾಗಾರಜ ಬಸೇಗಣ್ಣಿ, ಮಲ್ಲಿಕಾಜರ್ುನ ಸಾತೇನಹಳ್ಳಿ, ನಾಗರಾಜ ಕೊರವರ ಇತರರು ಉಪಸ್ಥಿತರಿದ್ದರು.

340 ಆಯ್ಕೆ: ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಭಾಗದಿಂದ ಆಗಿಸಿದ 26 ಕಂಪನಿಗಳು ಭಾಗವಹಿಸಿದ್ದವು. 866 ಉದ್ಯಾಗಾಥರ್ಿಗಳು ಸಂದರ್ಶನ ಎದುರಿಸಿದರು. ಈ ಪೈಕಿ 126 ಅಭ್ಯಥರ್ಿಗಳಿಗೆ ಸ್ಥಳದಲ್ಲೇ ನೇಮಕಾತಿ ಮಾಡಿಕೊಳ್ಳಲಾಯಿತು. 340 ಅಭ್ಯಥರ್ಿಗಳನ್ನು ತರಬೇತಿಗೆ ಆಯ್ಕೆಮಾಡಿ ನೇಮಕಾತಿ ಮಾಡಿಕೊಳ್ಳಲು ಶಾಟರ್್ಲಿಸ್ಟ್ ಮಾಡಲಾಯಿತು.