ವೈದ್ಯಕೀಯ ಕಾಲೇಜಿನ ನೂತನ ಕಚೇರಿ ಉದ್ಘಾಟಿಸಿದ ಶಾಸಕ ನೆಹರು ಓಲೇಕಾರ

ಹಾವೇರಿ14: ಜಿಲ್ಲಾಸ್ಪತ್ರೆಯ ಮೊದಲ ಮಹಡಿಯಲ್ಲಿ ಸಕರ್ಾರಿ ವೈದ್ಯಕೀಯ  ವಿಜ್ಞಾನ ಸಂಸ್ಥೆಯ ತಾತ್ಕಾಲಿಕ ಕಚೇರಿಯನ್ನು ಶಾಸಕರಾದ ನೆಹರು ಓಲೇಕಾರ ಅವರು ಉದ್ಘಾಟಿಸಿದರು. 

ಶುಕ್ರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ವೈದ್ಯಕೀಯ ಕಾಲೇಜಿನ ಕಟ್ಟಡ ನಿಮರ್ಾಣಕ್ಕೆ ದೇವಗಿರಿಯಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಕಟ್ಟಡ ನಿಮರ್ಾಣಕ್ಕೆ ಈಗಾಗಲೇ ಟೆಂಡರ್  ಸಹ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡನಂತರ ನೂತನ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆಯನ್ನು  ಮಾನ್ಯ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಹ್ವಾನಿಸಿ ನೆರವೇರಿಸಲಾಗುವುದು ಎಂದು ತಿಳಿಸಿದರು

ನೆಲೋಗಲ್ ಗುಡ್ಡದ ಬಳಿ  ವೈದ್ಯಕೀಯ ಕಾಲೇಜಿನ ಟ್ರಾಮಾ ಸೆಂಟರ್ ನಿಮರ್ಾಣ ಮಾಡಲು ತೀಮರ್ಾನಿಸಲಾಗಿದೆ. ಈ ಕುರಿತು ಕೇಂದ್ರ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ವೈದ್ಯಕೀಯ ಕಾಲೇಜಿನ ವಿಶೇಷ ಅಧಿಕಾರಿಯಾಗಿ ಉದಯ ಮುಳಗುಂದ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರು, ನೂತನ ವೈದ್ಯಕೀಯ ಕಾಲೇಜಿನ ವಿಶೇಷ ಅಧಿಕಾರಿ ಡಾ.ಉದಯ ಮುಳಗುಂದ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಾಗರಾಜ ನಾಯಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ರಾಜೇಂದ್ರ ದೊಡ್ಮನಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ನಾಗಪ್ಪ ಬಸಗಣ್ಣಿ, ಮಂಜು ಇಟಗಿ ಇತರರು ಭಾಗವಹಿಸಿದ್ದರು.