ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಶಾಸಕ ಮಾನೆ ಕರೆಯಿ

MLA Mane calls for building a disease-free society

ಹಾನಗಲ್ 23:  ನಿರಂತರ ಶ್ರಮದಾನದ ಮೂಲಕ ಇಡೀ ರಾಜ್ಯಕ್ಕೆ ಮಾದರಿ ಸಂದೇಶ ನೀಡುವ ಪ್ರಯತ್ನವನ್ನು ತಾಲೂಕಾಡಳಿತ ಮಾಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

ಸ್ಥಳೀಯ ಪುರಸಭೆ ವತಿಯಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ 25ನೇ ವಾರದ ಶ್ರಮದಾನದ ಬಳಿಕ ನಡೆದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ತಾಲೂಕಿನಾದ್ಯಂತ 5ನೇ ಬುಧವಾರದಂದು ಯಶಸ್ವಿಯಾಗಿ ಶ್ರಮದಾನ ಕೈಗೊಳ್ಳಲಾಗಿತ್ತು. ಪುರಸಭೆ ಇನ್ನಷ್ಟು ಕಾಳಜಿ ವಹಿಸಿ ಈ ವರ್ಷ ಬರುವ ಎಲ್ಲ ಬುಧವಾರದಂದು ಶ್ರಮದಾನ ನಡೆಸುವ ಮೂಲಕ ಗಮನ ಸೆಳೆದಿದೆ. ಸ್ವಚ್ಛತೆ ಎನ್ನುವುದಕ್ಕೆ ಕೊನೆ ಇಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಪ್ರತಿಯೊಬ್ಬರೂ ಸಹ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ರೋಗಮುಕ್ತಜೀವನ ಸಾಗಿಸುವಂತೆ ಕರೆ ನೀಡಿದರು. 

ತಹಶೀಲ್ದಾರ್ ರೇಣುಕಾಎಸ್‌. ಮಾತನಾಡಿ, ಇನ್ನು ಮುಂದೆ ಪ್ರತಿ ತಿಂಗಳು 3 ನೇ ಶನಿವಾರತಾಲೂಕಿನಎಲ್ಲ ಗ್ರಾಪಂಗಳಲ್ಲಿ ಶ್ರಮದಾನ ಕೈಗೊಳ್ಳಲು ನಿರ್ಣಯಿಸಲಾಗಿದೆ. ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ, ವ್ಯವಸ್ಥಿತವಾಗಿ ಶ್ರಮದಾನ ಕೈಗೊಳ್ಳಲಾಗುವುದು.ಸಮುದಾಯದ ಸಹಭಾಗಿತ್ವದೊಂದಿಗೆಜನರಲ್ಲಿಜಾಗೃತಿ ಮೂಡಿಸುವಉದ್ದೇಶ ಹೊಂದಲಾಗಿದೆ.ಸ್ವಚ್ಛ ಹಾನಗಲ್ಲಿನ ಸಾಕಾರಕ್ಕೆ ಪ್ರತಿಯೊಬ್ಬರ ಸಹಕಾರ ಬೇಕಿದೆಎಂದರು. 

  ಪುರಸಭೆಅಧ್ಯಕ್ಷ ಪರಶುರಾಮಖಂಡೂನವರ, ಉಪಾಧ್ಯಕ್ಷೆ ವೀಣಾಗುಡಿ, ಮಾಜಿಅಧ್ಯಕ್ಷರಾದಖುರ್ಷಿದ್ ಹುಲ್ಲತ್ತಿ, ಮಮತಾಆರೆಗೊಪ್ಪ, ನಾಗಪ್ಪ ಸವದತ್ತಿ, ಆದರ್ಶ ಶೆಟ್ಟಿ, ಮರ್ದಾನಸಾಬ ಬಡಗಿ, ಗನಿ ಪಾಳಾ, ಗೌಸಮೋದೀನ ತಂಡೂರ, ಮಾಲತೇಶ ಕಾಳೇರ, ಉಮೇಶ ಮಾಳಗಿ, ಗುರು ನಿಂಗೋಜಿ, ಮುನ್ನಾ ನಾಯ್ಕರ, ವಿರುಪಾಕ್ಷಪ್ಪಕಡಬಗೇರಿ, ಮುಖ್ಯಾಧಿಕಾರಿಜಗದೀಶ,  ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ರಾಜಕುಮಾರ ಶಿರಪಂತಿ, ಸುರೇಶ ನಾಗಣ್ಣನವರ, ರಾಜೂಗುಡಿ ಸೇರಿದಂತೆಇನ್ನೂ ಹಲವರುಇದ್ದರು. ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರಮದಾನ ಕೈಗೊಳ್ಳಲಾಯಿತು.