ಹರಪನಹಳ್ಳಿ 4: ತಾಲ್ಲೂಕಿನ ಋಣ ತೀರಿಸಲು ಶಾಸಕ ಜಿ ಕರುಣಾಕರ ರೆಡ್ಡಿ ಹಿಂದೇಟು ಹಾಕುತ್ತಿದ್ದು ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿಯನ್ನಾಗಿ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಲು ಮುಂದಾಗಬೇಕು ಇಲ್ಲವಾದಲ್ಲಿ ಅವರ ಕಛೇರಿಗೆ ಬೀಗ ಜಡಿದು ಮುತ್ತಿಗೆ ಹಾಕಿ ಪ್ರತಿಭಟಿಸಲು ಶೀಘ್ರವೇ ಮುಂದಾಗುತೇವೆಂದು ಜಿಲ್ಲಾ ಹೋರಾಟ ಸಮಿತಿ ಮುಖಂಡ ಇದ್ಲಿ ರಾಮಪ್ಪ ಎಚ್ಚರಿಸಿದರು.
ಜಿಲ್ಲಾ ಹೋರಾಟ ಸಮಿತಿಗೆ ಮುಜುಗರ ಉಂಟು ಪಟ್ಟಣದ ಐಬಿ ವೃತ್ತದಲ್ಲಿರುವ ಜಿಲ್ಲಾ ಹೋರಾಟ ಸಮಿತಿಯ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕಳೆದ ನೂರು ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ಜಿಲ್ಲಾ ರಚನೆಗೆ ವಿವಿಧ ಹಂತದ ಹೋರಾಟ ಮಾಡುತ್ತಿದೆ. ಸ್ಥಳೀಯ ಶಾಸಕ ಕರುಣಾಕರ ರೆಡ್ಡಿಯವರು ಕಿಂಚಿತ್ತು ಕಾಳಜಿ ವಹಿಸದೇ ಬೂಟಾಟಿಕಿಗಾಗಿ ಸರ್ವಪಕ್ಷ ನಿಯೋಗವನ್ನು ಸಿಎಂ ಬಳಿ ಕರೆದೊಯ್ಯುವುದಾಗಿ ಹೇಳಿದ್ದರೂ ಕೂಡಾ ಇಲ್ಲೆಯವರೆಗೂ ಜಿಲ್ಲಾ ಹೋರಾಟದ ಬಗ್ಗೆ ಚಕಾರ ಎತ್ತದ ಶಾಸಕ ನಮಗೆ ಬೇಕಾಗಿಲ್ಲ ಕೂಡಲೇ ಅವರು ರಾಜಿನಾಮೆ ಕೊಡಬೇಕೆಂದು ಒತ್ತಾಯಿಸುತ್ತೇವೆ. 150ಕಿಲೋ ಮೀಟರ್ ದೂರದ ಬಳ್ಳಾರಿಗೆ ಹೋಗಿ ಬರುವುದು ತುಂಬಾ ಕಷ್ಟದ ಕೆಲಸವಾಗತ್ತದೆ ಆದ ಕಾರಣ ಕೂಡಲೇ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿಯನ್ನಾಗಿ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಲು ಶಾಸಕ ಕರುಣಾಕರ ರೆಡ್ಡಿ ಮುಂದಾಗಬೇಕು ಎಂದರು.
ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರಾದ ಶೃಂಗಾರತೋಟದ ಬಸವರಾಜ ಮಾತನಾಡಿ ಸರ್ವ ಪಕ್ಷ ನಿಯೋಗವನ್ನು ಕೊಂಡೊಯ್ಯಲು ಶಾಸಕರು ಹಿಂದೇಟು ಹಾಕುವುದನ್ನು ಗಮನಿಸಿದರೆ ಅವರಿಗೆ ಕ್ಷೇತ್ರದ ಬಗ್ಗೆ ಆಸಕ್ತಿ ಇಲ್ಲ ಪ್ರತಿಭಟನೆಯ ಟೆಂಟ್ನಲ್ಲಿ ಬಂದು ಒಂದು ದಿನವಾದರೂ ಹೋರಾಟದಲ್ಲಿ ಬಾಗವಹಿಸಿಲ್ಲ, ಇಂತಹ ಶಾಸಕರು ನಮ್ಮ ತಾಲ್ಲೂಕಿಗೆ ಬೇಕಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಹೋರಾಟ ಸಮಿತಿಯ ಮುಖಂಡರಾದ ಸಂದೇರು ಪರಶುರಾಮ ಮಾತನಾಡಿ ಈ ಹಿಂದೆ 371ಜೆ ಸೌಲಭ್ಯ ಪಡೆಯಲು ಹೋರಾಟವನ್ನು ಮಾಡಿದ್ದೇವೆಯೋ ಅದೇ ರೀತಿ ಹರಪನಹಳ್ಳಿ ಜಿಲ್ಲಾ ಕೇಂದ್ರ ರಚನೆಗೆ ತಾಲ್ಲೂಕಿನಾದ್ಯಂತ ಹಾಗೂ ನೆರೆಯ ತಾಲ್ಲೂಕುಗಳು ನಮ್ಮ ಜೊತೆ ಕೈಜೋಡಿಸಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಹಾಗಾಗಿ ಮುಖ್ಯ ಮಂತ್ರಿಗಳು ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಈ ವೇಳೆ ಜಿಲ್ಲಾ ಹೋರಾಟ ಸಮಿತಿ ಮುಖಂಡರಾದ ಶಿಕಾರಿ ಬಾಲಪ್ಪ ಮಾತನಾಡಿದರು, ನಗರ ಡಿ.ಎಸ್.ಎಸ್ ಅಧ್ಯಕ್ಷ ಯಲ್ಲಪ್ಪ ಮೆಹಬೂಬ್ ಭಾಷಾ, ವಕೀಲರಾದ ದೊಡ್ಡಮನಿ ಪ್ರಸಾದ್, ಗಿರಿರಾಜ, ಗೋಣಿಬಸಪ್ಪ, ಜಾವೀದ್, ರಾಜಶೇಖರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.