ಗ್ರಾಮ ದೇವತೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಕಂದಕೂರ
MLA Kandakura visits village deity temple
ಗ್ರಾಮ ದೇವತೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಕಂದಕೂರ
ಮುದ್ದೇಬಿಹಾಳ 05: ಗುರುಮಟ್ ಕಲ್ಲ್ ಶಾಸಕ ಶರಣಗೌಡ ಕಂದಕೂರ ಅವರು ಪಟ್ಟಣದ ಗ್ರಾಮ ದೇವತೆ ಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ದೇವಿಯ ದರ್ಶನ ಹಾಗೂ ಆಶೀರ್ವಾದ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಮೂರಾ್ನಲ್ಕು ವರ್ಷಗಳ ಹಿಂದೆ ಈ ಪಟ್ಟಣಕ್ಕೆ ಭೇಟಿ ನೀಡಿ ಶ್ರೀ ಗ್ರಾಮ ದೇವತೆ ಆಶೀರ್ವಾದ ಪಡೆದು ಹರಕೆ ಹೊತ್ತಿದ್ದೇ. ಆ ಪ್ರಕಾರ ಇಂದು ಇಲ್ಲಿಗೆ ಬರಬೇಕಾಯಿತು. ಮುದ್ದೇಬಿಹಾಳ ತಾಲೂಕಿನ ಪಟ್ಟಣದ ಬಹುತೇಕ ಜನರು ಸ್ನೇಹಿತರಿದ್ದಾರೆ. ಜತೆಗೆ ಶ್ರೀ ಗ್ರಾಮ ದೇವತೆಯ ಶಕ್ತಿ ತುಂಬಾ ಇದೇ. ಅಂದುಕೊಂಡಂತೆ ಈಡೇರಿಸುವ ದೇವತೆಯಾಗಿದ್ದಾಳೆ. ಹಾಗಾಗಿಯೇ ಇಲ್ಲಿನ ಪಟ್ಟಣದ ಎಲ್ಲ ಮುಖಂಡರು ಗಣ್ಯರು ಸೇರಿಕೊಂಡು ಜಾತ್ಯಾತೀತ, ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಅದ್ದೂರಿ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಾರಣ ನಾನೂ ಕೂಡ ಈ ದೇವಿಯ ಭಕ್ತನಾಗಿದ್ದೇನೆ ಅದಕ್ಕೋಸ್ಕರ ನಾನಿಂದು ಇಲ್ಲಿಗೆ ಬಂದು ಶ್ರೀದೇವಿ ದರುಶನ ಪಡೆದು ಪುನೀತನಾಗಿದ್ದೇನೆ ಎಂದರು. ಜೊತೆಗೆ ಜಾತ್ರಾ ಕಮೀಟಿಯವರಿಗೆ 11 ಸಾವಿರ ನಗದು ದೇಣಿಗೆ ನೀಡಿದರು.
ಬಳಿಕ ಜಾತ್ರಾ ಕಮೀಟಿ ಸರ್ವ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ಗುರುಮಟ್ ಕಲ್ಲ್ ಶಾಸಕ ಶರಣಗೌಡ ಕಂದಕೂರ ಅವರಿಗೆ ಕಮೀಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 